ಬೆಂಗಳೂರಿನ ಗಾಂಧಿನಗರದ ಗ್ರೀನ್ ಹೌಸ್ನಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತಾಡಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ನಡೆದ ಕೆಲಸಗಳ ವಿವರ ನೀಡಿದರು. ಪ್ರಮುಖವಾಗಿ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಮೀಟೂ ಪ್ರಕರಣ ಪ್ರಸ್ತಾಪಿಸಿದ ಅವರು, ನಾನು ಹಾಗೂ ಅಂಬರೀಶ್ ಅವರು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಶ್ರಮಿಸಿದೆವು. ನಾಲ್ಕು ಗೋಡೆಗಳ ಮಧ್ಯೆ ಈ ಸಮಸ್ಯೆ ಬಗೆಹರಿಯಬೇಕೆಂಬುದು ನಮ್ಮ ಉದ್ದೇಶವಾಗಿತ್ತು.ಆದರೆ, ಅವರು ನ್ಯಾಯಾಲಯದ ಮೊರೆಹೋದರು ಎಂದರು.
ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ರಾಜ್ಯ ಸರ್ಕಾರ ಕೈ ಜೋಡಿಸಿದೆ. ಮುಂದೆ ಬರುವ ಹೊಸ ಅಧ್ಯಕ್ಷರು ನಾವು ಕೈಗೊಂಡಿರುವ ಕೆಲಸಗಳನ್ನು ಮುನ್ನಡೆಸಿಕೊಂಡು ಹೋಗ್ತಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಮಸ್ಯೆ, ಜಿಎಸ್ಟಿಯಿಂದ ನಿರ್ಮಾಪಕರಿಗೆ ಉಂಟಾಗುತ್ತಿರುವ ಹೊರೆ, ಬುಕ್ ಮೈ ಶೋನಲ್ಲಿ ಆಗುತ್ತಿರುವ ಅನ್ಯಾಯ, ಹಾಗು ಮಲ್ಟಿಪ್ಲೆಕ್ಸ್ಗಳಲ್ಲಿ ದುಬಾರಿಯ ತಿಂಡಿ, ತಿನಿಸುಗಳ ಅತಿಯಾದ ಬೆಲೆ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಆದ್ರೆ,ಸಮಸ್ಯೆಗೆ ಪರಿಹಾರ ಸಿಗೋದಿಕ್ಕೆ ಕಾಲಾವಕಾಶ ಬೇಕಾಗುತ್ತೆ ಎಂದರು.
ಬಳಿಕ ಮತನಾಡಿದ ಉಪಾಧ್ಯಕ್ಷ ಕರಿ ಸುಬ್ಬು, ಸಿನಿಮಾ ವಿತರಣೆಯಲ್ಲಿ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿರ್ಮಾಪಕರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು. ಮಾಧ್ಯಮಗೋಷ್ಟಿಯಲ್ಲಿ ಗೌರವ ಕಾರ್ಯದರ್ಶಿ ಭಾಮಾ ಹರೀಶ್ ಸೇರಿದಂತೆ ಫಿಲ್ಮ್ ಛೇಂಬರ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.