ETV Bharat / sitara

'ಯುವರತ್ನ' ಚಿತ್ರತಂಡದಿಂದ ಪುನೀತ್ ಅಭಿಮಾನಿಗಳಿಗೆ ಡಬಲ್ ಧಮಾಕ

author img

By

Published : Nov 23, 2020, 1:17 PM IST

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪುನೀತ್ ರಾಜ್​ಕುಮಾರ್ ನಟಿಸಿರುವ 'ಯುವರತ್ನ' ಸಿನಿಮಾದ ಮೊದಲ ಹಾಡು ಡಿಸೆಂಬರ್ 2 ರಂದು ಬಿಡುಗಡೆಯಾಗುತ್ತಿದೆ. ಅಲ್ಲದೆ ಈ ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ.

Yuvaratna team
'ಯುವರತ್ನ'

'ಯುವರತ್ನ', ಟೈಟಲ್​​​​​​​​​​​​​​​​​​​​ನಿಂದಲೇ ಸ್ಯಾಂಡಲ್​​ವುಡ್​​​​ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಿರುವ ಚಿತ್ರ. ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅಭಿನಯದ 'ಯುವರತ್ನ' ಚಿತ್ರತಂಡದಿಂದ ಅಭಿಮಾನಿಗಳಿಗೆ ಎರಡು ಗುಡ್ ನ್ಯೂಸ್ ಸಿಕ್ಕಿದೆ. ನಿರ್ದೇಶಕ ಸಂತೋಷ್​ ಆನಂದ್ ರಾಮ್​ ಹಾಗೂ ಪವರ್ ಸ್ಟಾರ್ ಕಾಂಬಿನೇಷನ್​​​ನಲ್ಲಿ ಮೂಡಿ ಬರುತ್ತಿರುವ'ಯುವರತ್ನ' ಸಿನಿಮಾ ಕನ್ನಡ ಮಾತ್ರವಲ್ಲ ತೆಲುಗು ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಪವರ್ ಆಫ್ ಯೂತ್ ಹಾಡಿನ ಬಿಡುಗಡೆ ದಿನಾಂಕ ಕೂಡಾ ನಿಗದಿಯಾಗಿದೆ.

ಇತ್ತೀಚೆಗೆ ಬಹಳಷ್ಟು ಸಿನಿಮಾಗಳು ಎಡಿಟಿಂಗ್ ಹಂತದಲ್ಲೇ ತಮಿಳು ಹಾಗೂ ತೆಲುಗು ಭಾಷೆಗಳಿಗೆ ಡಬ್ ಆಗುತ್ತಿದೆ. ಪರಭಾಷೆ ಸಿನಿಮಾಗಳು ಕೂಡಾ ಕನ್ನಡಕ್ಕೆ ಡಬ್ ಆಗುತ್ತಿವೆ. ನಾವೂ ಕೂಡಾ ತೆಲುಗಿನಲ್ಲಿ ಏಕೆ ಡಬ್ಬಿಂಗ್ ಮಾಡಬಾರದು ಎಂದು ನಿರ್ಧರಿಸಿ 'ಯುವರತ್ನ' ಸಿನಿಮಾವನ್ನು ತೆಲುಗು ಭಾಷೆಗೆ ಡಬ್ ಮಾಡಲಾಗುತ್ತಿದೆ. 'ಯುವರತ್ನ' ಚಿತ್ರದಲ್ಲಿ ತೆಲುಗು ಕಲಾವಿದರು ಕೂಡಾ ಇದ್ದಾರೆ. ಅಲ್ಲದೆ, ಪುನೀತ್ ಜೋಡಿಯಾಗಿ ಸಯೇಷಾ ಸೈಗಲ್ ನಟಿಸಿದ್ದಾರೆ. ಇದಕ್ಕೂ ಮುನ್ನ ಪುನೀತ್ ಅಭಿನಯದ ಜಾಕಿ ಸಿನಿಮಾ ತೆಲುಗಿನಲ್ಲಿ ತೆರೆ ಕಂಡಿತ್ತು. ಇದೀಗ ಬಹಳ ವರ್ಷಗಳ ನಂತರ ಅವರ ಸಿನಿಮಾ ತೆಲುಗಿನಲ್ಲಿ ತೆರೆ ಕಾಣುತ್ತಿದೆ. ಈ ಮೂಲಕ ಪುನೀತ್ ತೆಲುಗು ವೀಕ್ಷಕರಿಗೂ ಪರಿಚಯವಾಗುತ್ತಿದ್ದಾರೆ.

''ಯುವರತ್ನ ಸಿನಿಮಾ ತೆಲುಗಿನಲ್ಲೂ ತೆರೆ ಕಾಣುತ್ತಿದೆ. ನಿಮ್ಮ ಬೆಂಬಲ ಹಾಗೂ ಶುಭ ಹಾರೈಕೆ ನಮ್ಮಮೇಲಿರಲಿ'' ಎಂದು ಪುನೀತ್ ರಾಜ್​ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಯುವರತ್ನ'ದ ಮೊದಲ ಹಾಡು ಪವರ್ ಆಫ್ ಯೂತ್ ಡಿಸೆಂಬರ್ 2 ರಂದು ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್​ ಖ್ಯಾತಿಯ ವಿಜಯ್ ಕಿರಂಗದೂರು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.