ETV Bharat / sitara

'ಡ್ಯಾಡಿ ನಂಬರ್ ಒನ್' ಆಗಲಿದ್ದಾರೆ Golden Star ಗಣೇಶ್..! - ಡ್ಯಾಡಿ ನಂಬರ್ 1 ರಿಯಾಲಿಟಿ ಶೋ

ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ 'ಡ್ಯಾಡಿ ನಂಬರ್ 1' ರಿಯಾಲಿಟಿ ಶೋ ವನ್ನು ಗೋಲ್ಡನ್​ ಸ್ಟಾರ್​ ಗಣೇಶ್​ ನಡೆಸಿಕೊಡಲಿದ್ದಾರೆ ಎನ್ನಲಾಗ್ತಿದ್ದು, ಈ ಬಗ್ಗೆ ನಟ ಗಣೇಶ್ ಅಥವಾ ವಾಹಿನಿಯೇ ಸ್ಪಷ್ಟಪಡಿಸಬೇಕಾಗಿದೆ.

golden star ganesh in daddy number one show
ಡ್ಯಾಡಿ ನಂಬರ್ ಒನ್ ಶೋ
author img

By

Published : Jul 15, 2021, 2:03 PM IST

ಕೊರೊನಾ 2ನೇ ಅಲೆ ಮುಗಿದಿದ್ದು ಎಲ್ಲ ಕಿರುತೆರೆ ವಾಹಿನಿಗಳಲ್ಲಿ ಇದೀಗ ರಿಯಾಲಿಟಿ ಶೋಗಳು ಆರಂಭವಾಗುತ್ತಿವೆ. ಜೀ ಕನ್ನಡ ವಾಹಿನಿಯಲ್ಲಿ 1 ವರ್ಷದ ಹಿಂದೆಯೇ ಆರಂಭವಾಗಬೇಕಿದ್ದ 'ಡ್ಯಾಡಿ ನಂಬರ್ 1' ರಿಯಾಲಿಟಿ ಶೋ ಇದೀಗ ಮತ್ತೆ ಸದ್ದು ಮಾಡುತ್ತಿದೆ.

golden star ganesh in daddy number one show
ಡ್ಯಾಡಿ ನಂಬರ್ ಒನ್ ಶೋ

ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುತ್ತಲೇ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಗಮನ ಸೆಳೆಯುವ ಕಾಮಿಡಿ ಟೈಮ್​​ನಿಂದ ಗೋಲ್ಡನ್ ಸ್ಟಾರ್​ ಆಗಿರುವ ನಟ ಗಣೇಶ್, ಡ್ಯಾಡಿ ನಂಬರ್ ಒನ್ ಶೋ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ.

ಮಕ್ಕಳ ಜೊತೆ ನಟ ಗಣೇಶ್

ಇದಕ್ಕೆ ಪೂರಕ ಎಂಬಂತೆ ಹಿಂದೆ 2008ರಲ್ಲಿ ನಟ ಗಣೇಶ್ ಈ ಶೋ ನಡೆಸಿಕೊಟ್ಟಿದ್ದರು. ಒಂದು ತಿಂಗಳ ಹಿಂದೆ ವಾಹಿನಿ 'ಡ್ಯಾಡಿ ನಂಬರ್ 1' ಗಾಗಿ ಮಕ್ಕಳಿಂದ ಆಡಿಷನ್ ಕೂಡ ಆರಂಭಿಸಿತ್ತು. ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಈ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆಯೇ ಎಂಬುದನ್ನು ಗಣೇಶ್ ಅಥವಾ ವಾಹಿನಿಯೇ ಸ್ಪಷ್ಟಪಡಿಸಬೇಕಾಗಿದೆ.

ನಟ ಗಣೇಶ್ ಇಬ್ಬರು ಮಕ್ಕಳ ಮುದ್ದಿನ ಅಪ್ಪ ಆಗಿದ್ದಾರೆ. ಹೀಗಾಗಿ, ಕಾರ್ಯಕ್ರಮ ನಡೆಸಿಕೊಡುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಪ್ರೇಕ್ಷಕರ ನಂಬಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.