ಇಡೀ ಜಗತ್ತನ್ನೇ ತಲ್ಲಣಕ್ಕೀಡು ಮಾಡಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಎಲ್ಲರೂ ಬೆಂಬಲವನ್ನು ಸೂಚಿಸಿದ್ದು, ಇದೀಗ ಗೋದ್ರಾ ಚಿತ್ರತಂಡ ಕೋವಿಡ್-19 ನಿಮೂರ್ಲನೆಗೆ ಸೆಲೆಬ್ರಿಟಿಗಳನ್ನು ಜಾಗೃತಿ ಅಭಿಯಾನಕ್ಕೆ ಬಳಸಿಕೊಳ್ಳಲು ಮನವಿ ಮಾಡಿದೆ.
ದೇಶಾದ್ಯಂತ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸರ್ಕಾರದ ಜೊತೆ ಕೈಜೋಡಿಸಲು ಕನ್ನಡ ಚಿತ್ರತಂಡ ಮುಂದಾಗಿದೆ. ನಟ, ನಟಿಯರನ್ನು ಬಳಸಿಕೊಂಡು ಕೊರೊನಾ ವಿರುದ್ಧ ಜಾಗೃತಿ ಮೂಡಿಸುವಂತೆ ಸಿನಿಮಾ ತಂಡ ಮನವಿ ಮಾಡಿದೆ.
ಈಗಾಗಲೇ ಸಿನಿಮಾ ತಾರೆಯರು, ಕ್ರೀಡಾಪಟುಗಳು, ಗಣ್ಯರು ಕೊರೊನಾ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಇನ್ನೂ ಹೆಚ್ಚಾಗಬೇಕೆಂಬ ಉದ್ದೇಶದಿಂದ ಸರ್ಕಾರ ಮತ್ತು ಆರೋಗ್ಯ ಇಲಾಖೆ ಮಾಹಿತಿಯನ್ನು ಸೆಲೆಬ್ರಿಟಿಗಳಿಗೂ ತಲುಪಿಸಬೆಕು. ಅದನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಇನ್ನಷ್ಟು ಜನರಿಗೆ ಮಾಹಿತಿ ನೀಡುತ್ತಾರಂತೆ. ಈ ನಿಟ್ಟಿನಲ್ಲಿ ಟಾಪ್ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡು ಸರ್ಕಾರ ಅವರಿಂದ ಜಾಗೃತಿ ಕೆಲಸ ಮಾಡಲು ಚಿತ್ರದಂಡ ವಿನಂತಿ ಮಾಡುತ್ತಿದೆ.
ನೀನಾಸಂ ಸತೀಶ್ ಹಾಗೂ ಶ್ರದ್ಧಾ ಶ್ರೀನಾಥ್ ಅಭಿನಯದ ಗೋದ್ರಾ ಸಿನಿಮಾ ಇದಾಗಿದ್ದು, ಕೊರೊನಾ ಸಂಬಂಧ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಪೌರ ಕಾರ್ಮಿಕರು, ವೈದ್ಯರು, ನರ್ಸ್ ಹೀಗೆ ಎಲ್ಲರಿಗೂ ಈ ಮೂಲಕ ಅಭಿನಂದನೆ ಸಲ್ಲಿಸಿದೆ ಚಿತ್ರತಂಡ.