ಬೆಂಗಳೂರು: ರಾಜಾಜಿನಗರದಲ್ಲಿರೋ ರವಿಮಾಮನ ಮನೆಯಲ್ಲಿ ಕಳೆದ ರಾತ್ರಿಯಿಂದಲೇ ಮೆಹಂದಿ ಕಾರ್ಯಕ್ರಮ ಕಳೆಗಟ್ಟಿದೆ. ಮಗಳ ಮದುವೆ ಖುಷಿಯಲ್ಲಿರುವ ಕ್ರೇಜಿಸ್ಟಾರ್, ಪತ್ನಿ ಸುಮತಿ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಇಂದು, ನಾಳೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆಯುಲಿರುವ ವಿವಾಹ ಸಮಾರಂಭಕ್ಕೆ ಭರ್ಜರಿ ವೇದಿಕೆ ಸಿದ್ಧವಾಗಿದೆ. ಸ್ವರ್ಗ ಲೋಕವೇ ಧರೆಗಿಳಿದಂತೆ ಭಾಸವಾಗುವ ಅದ್ದೂರಿ ಗಾಜಿನ ಸೆಟ್ ಹಾಕಲಾಗಿದೆ. ಗಾಜಿನ ವೇದಿಕೆ ಮೇಲೆ ರವಿಚಂದ್ರನ್ ಮಗಳು ಅಳಿಯನ ಅದ್ದೂರಿ ಆರತಕ್ಷತೆ ಕೂಡ ನಡೆಯಲಿದೆ.
ಈ ವೈಭವೋಪೇತ ಸ್ಟೇಜ್ ನಿರ್ಮಾಣಕ್ಕೆ 25 ದಿನ ತೆಗೆದುಕೊಳ್ಳಲಾಗಿದೆ. ವೇದಿಕೆಯನ್ನು ಕಣ್ಣುಕೋರೈಸುವಂತೆ ಕರಕುಶಲ ವಸ್ತುಗಳ ಮೂಲಕ ಶೃಂಗರಿಸಲಾಗಿದೆ. ಆರತಕ್ಷತೆಗೆ ಬರುವ ಗಣ್ಯರು ಈ ವೇದಿಕೆ ನೋಡಿ ಥ್ರಿಲ್ ಆಗೋದು ಪಕ್ಕಾ. ಅಷ್ಟರಮಟ್ಟಿಗೆ ರವಿಚಂದ್ರನ್, ಮುದ್ದಿನ ಮಗಳ ಮದುವೆಗಾಗಿ ವಿಶೇಷ ಗಾಜಿನ 'ಪ್ರೇಮ ಲೋಕ'ವನ್ನು ಸೃಷ್ಟಿಸಿದ್ದಾರೆ.