ಮುಂಬೈ: ಗ್ಲಾಡಿಯೇಟರ್ ತಾರೆ ರಸ್ಸೆಲ್ ಕ್ರೋವ್ ಸಂದರ್ಶನವೊಂದರಲ್ಲಿ ಆ ಐತಿಹಾಸಿಕ ಚಿತ್ರಕ್ಕೆ ನಾನು ಸೇರ್ಪಡೆಗೊಂಡಿದ್ದು, ಅದು ಏನಾಗಬಹುದು ಎಂಬುದರ ಆಧಾರದ ಮೇಲೆಯೇ ಹೊರತು ಅದರ ಆರಂಭಿಕ ಸ್ಕ್ರಿಪ್ಟ್ ನೋಡಿ ಅಲ್ಲ ಎಂದಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ನಟ ರಸ್ಸೆಲ್ ಕ್ರೋವ್, ಜಿಮ್ಮಿ ಫಾಲನ್ ನಡೆಸಿಕೊಡುವ ವರ್ಚುವಲ್ ದಿ ಟುನೈಟ್ ಶೋನಲ್ಲಿ ಭಾಗಿಯಾಗಿದ್ದರು. 2000ರಲ್ಲಿ ಬಿಡುಯಾಗಿದ್ದ ಗ್ಲಾಡಿಯೇಟರ್ ಚಿತ್ರದ ಆರಂಭಿಕ ಸ್ಕ್ರಿಪ್ಟ್ ತುಂಬಾ ಕೆಟ್ಟದಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಚಿತ್ರ ನಿರ್ಮಾಣದ ಮೊದಲ ದಿನದಂದು ಚಿತ್ರದ ಬಗ್ಗೆ ಹೆಚ್ಚಿನ ವಿಶ್ವಾಸವಿಲ್ಲದ ಕ್ರೋವ್, ಚಿತ್ರೀಕರಣ ಮುಂದುವರಿಯುತ್ತಿದ್ದಂತೆ ತಾನು ಏನಾದರೂ ವಿಶೇಷವಾದದ್ದನ್ನು ಮಾಡಿದ್ದೇನೆ ಎಂದು ತಿಳಿದಿದ್ದೆ ಎಂದು ರಸ್ಸೆಲ್ ಕ್ರೋವ್ ಹೇಳಿದರು.
ಕ್ರೋವ್ 'ದಿ ಇನ್ಸೈಡರ್ ಆ್ಯಂಡ್ ಎ ಬ್ಯೂಟಿಫುಲ್ ಮೈಂಡ್'ನಂತಹ ಚಲನಚಿತ್ರಗಳಲ್ಲಿ ನಟನಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾನೆ. ಆದರೆ ಗ್ಲಾಡಿಯೇಟರ್ನಲ್ಲಿ ಅವರ ಮ್ಯಾಕ್ಸಿಮಸ್ ಪಾತ್ರ ಅವರ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ.