ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಕನ್ನಡ ಚಿತ್ರರಂಗ ದುಃಸ್ಥಿತಿಯಲ್ಲಿದೆ. ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ಸಾಕಷ್ಟು ಜನ ಸಂಕಷ್ಟದಲ್ಲಿದ್ದಾರೆ.
ಕಳೆದ ವರ್ಷ ಕೊರೊನಾ ಬಂದಾಗಿನಿಂದಲೂ ಸಂಬಂಧಪಟ್ಟ ಅಧಿಕಾರಿಗಳು, ಡಿಸಿ, ಕಮಿಷನರ್ನ್ನ ಭೇಟಿಯಾಗುತ್ತಲೇ ಇದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್, ರಾಜ್ಯ ಸರ್ಕಾರಕ್ಕೆ ವಿಡಿಯೋ ಮೂಲಕ ಸಮಸ್ಯೆ ಹೇಳಿಕೊಂಡಿದ್ದಾರೆ.
ಕಳೆದ ಬಾರಿಯೂ ಯಾವುದೇ ಪ್ಯಾಕೇಜ್ನಲ್ಲಿ ನಮ್ಮ ವರ್ಗವನ್ನು ಪರಿಗಣಿಸಿಲ್ಲ. ಈ ಬಾರಿಯ ಪ್ಯಾಕೇಜ್ನಲ್ಲೂ ನಮ್ಮ ನಿರ್ದೇಶಕರನ್ನು ಹಾಗೂ ತಂತ್ರಜ್ಞರನ್ನು ಪರಿಗಣಿಸಿಲ್ಲ. ಕನ್ನಡ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ನೀವು ಕಾಪಾಡಬೇಕಾಗಿದೆ. ಇದು ಸರ್ಕಾರದ ಹೊಣೆ ಎಂದಿದ್ದಾರೆ.
![letter for separate vaccine](https://etvbharatimages.akamaized.net/etvbharat/prod-images/kn-bng-03-rajayya-sarakarkke-directorge-10savira-sahayadhana-kodie-venktesh-manavi-7204735_20052021161406_2005f_1621507446_83.jpg)
ಇನ್ನು ಧರ್ಮ, ಸಮಾಜ, ಸಂಸ್ಕೃತಿ, ಭಾಷೆ, ಐತಿಹಾಸಿಕವಾಗಿ ಎಲ್ಲ ರೀತಿಯಲ್ಲೂ ಕನ್ನಡ ಚಿತ್ರರಂಗದ ಕೊಡುಗೆ ಅಪಾರ. ಈ ಕೊಡುಗೆಗಳನ್ನು ಪರಿಗಣಿಸಿ ಕನ್ನಡ ಚಿತ್ರರಂಗದ ಪರವಾಗಿ ನಿಂತುಕೊಳ್ಳಬೇಕು. ಸಹಾಯ ಹಸ್ತ ಚಾಚುವ ಮೂಲಕ ನಮ್ಮ ಜೊತೆ ನಿಲ್ಲಬೇಕು. ಈ ಕೂಡಲೇ ನಿರ್ದೇಶಕರಿಗೆ ಹತ್ತು ಸಾವಿರ ರೂಪಾಯಿ ಸಹಾಯ ಧನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
![letter for separate vaccine](https://etvbharatimages.akamaized.net/etvbharat/prod-images/kn-bng-03-rajayya-sarakarkke-directorge-10savira-sahayadhana-kodie-venktesh-manavi-7204735_20052021161406_2005f_1621507446_630.jpg)
ಈ ಕುರಿತು ಈಗಾಗಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಸಿ.ಸಿ. ಪಾಟೀಲರಿಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಪತ್ರ ಬರೆದು ಕೇಳಿಕೊಂಡಿದ್ದಾರೆ.
ಓದಿ: ಟಾಲಿವುಡ್ ಯಂಗ್ ಟೈಗರ್ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳೋದು ಫಿಕ್ಸ್!