ETV Bharat / sitara

ಕಲಾತಪಸ್ವಿ ಕಾರ್ನಾಡ್​ರ ಯುಗಾಂತ್ಯ... ಮರೆಯಾಯಿತು 'ವಂಶವೃಕ್ಷ'ದ ಬೇರು...

ಸಾಹಿತಿ, ಪ್ರಸಿದ್ಧ ರಂಗಭೂಮಿ ತಜ್ಞ, ನಾಟಕಕಾರ, ಚಿತ್ರ ನಟ, ನಿರ್ದೇಶಕ ಗಿರೀಶ ಕಾರ್ನಾಡ್​ ಅವರು ಸೋಮವಾರ ಮುಂಜಾನೆ ನಗರದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು.

ಗಿರೀಶ್ ಕಾರ್ನಾಡ್​
author img

By

Published : Jun 10, 2019, 1:44 PM IST

ದೇಶ, ವಿದೇಶಗಳಲ್ಲಿರುವ ಹಲವಾರು ಸ್ತರಗಳಲ್ಲಿ ಕನ್ನಡದ ಕೀರ್ತಿ ಪತಾಕೆ ರಾರಾಜಿಸುತ್ತಿದೆ. ಇದಕ್ಕೆ ಕಾರಣ ಅನೇಕ ಮಹಾನುಭಾವರು ಮಾಡಿರುವ ಸಾಧನೆಗಳು. ಅಂತಹ ವ್ಯಕ್ತಿತ್ವಗಳಲ್ಲಿ ಡಾ.ಗಿರೀಶ್​ ಕಾರ್ನಾಡ್ ಕೂಡ ಒಬ್ಬರು.

girish karnad
ಶಂಕರ್​ನಾಗ್ ಜೊತೆಗಿರುವ ಗಿರೀಶ್​ ಕಾರ್ನಾಡ್​

ಭಾರತದ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿ ಎಂದರೆ ಅದು ಜ್ಞಾನಪೀಠ ಪ್ರಶಸ್ತಿ. ಇಂತಹ ಮಹೋನ್ನತ ಪ್ರಶಸ್ತಿಯು ಕನ್ನಡ ಸಾಹಿತ್ಯ ಲೋಕಕ್ಕೆ 8 ಬಾರಿ ಬಂದಿದೆ. ಅದರಲ್ಲಿ 7ನೇ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಗಿರೀಶ್​ ಕಾರ್ನಾಡ್ ಅವರ 'ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ (ನಾಟಕಗಳು)' ಎಂಬ ಕೃತಿಗೆ. ಇದು 1998ರಲ್ಲಿ.

girish karnad
ಶೃತಿ ಜತೆಗೆ ಗಿರೀಶ್​ ಕಾರ್ನಾಡ್​

ಕಾರ್ನಾಡ್​ ಅವರು ಅತೀ ಹೆಚ್ಚು ಇಷ್ಟಪಡುತ್ತಿದ್ದ ಕ್ಷೇತ್ರಗಳಲ್ಲಿ ಸಿನಿಮಾ ಕ್ಷೇತ್ರವೂ ಒಂದಾಗಿತ್ತು. ಅಷ್ಟೇ ಅಲ್ಲದೆ ಕಾರ್ನಾಡ್ ಅವರ ನೈಜತೆಯಿಂದ ಕೂಡಿದ ಅಭಿನಯ ಅನೇಕರಿಗೆ ಅಚ್ಚುಮೆಚ್ಚು ಹಾಗೂ ಸ್ಫೂರ್ತಿದಾಯಕ. ಯಾಕೆಂದರೆ, ಅವರ ನಟನೆಯಲ್ಲಿ ಹಾಗೂ ಆ ಪಾತ್ರದಲ್ಲಿ ಒಂದು ತೆರನಾದ ಗತ್ತು ಇರುತ್ತದೆ. ಶೂಟಿಂಗ್​ಗೆ ಹೋದಾಗ ನವ ಯುವಕನಂತೆ ಲವಲವಿಕೆಯಿಂದ ಇರುತ್ತಿದ್ದ ಅವರನ್ನು ಚಿತ್ರರಂಗ ಪ್ರೀತಿಸುತಿತ್ತು. ಅವರ ನಟನೆಗೆ ಭಾರತೀಯ ಸಿನಿರಂಗದ ಹಿರಿಯ ನಟರೆಲ್ಲ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾರ್ನಡ್​ ಅವರಿಗೆ ಶಿಸ್ತು, ಸಂಯಮ, ವಿನಯವೇ ಆಸ್ತಿಯಾಗಿತ್ತು. ಅಷ್ಟೇ ಅಲ್ಲ ಅನಾವಶ್ಯಕವಾಗಿ ದುಡ್ಡು ಖರ್ಚು ಮಾಡುವುದೆಂದರೆ ಅವರಿಗೆ ಆಗುತ್ತಿರಲಿಲ್ಲ.

girish karnad
ಗಿರೀಶ್ ಕಾರ್ನಾಡ್​

1970ರಿಂದ ಅವರ ಸಿನಿಮಾ ಪಯಣ ಪ್ರಾರಂಭಗೊಂಡಿದ್ದು, ಕನ್ನಡ, ತಮಿಳು, ಹಿಂದಿ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಯರು ಬಂದರು ಮಾವನ ಮನೆಗೆ, ನೀ ತಂದ ಕಾಣಿಕೆ, ಹೊಸ ನೀರು, ಸಂಕ್ರಾಂತಿ, ಬಾಳೊಂದು ಭಾವಗೀತೆ, ಸಂಸ್ಕಾರ, ವಂಶವೃಕ್ಷ, ಎಕೆ-47, ಸಂತ ಶಿಶುನಾಳ ಶರೀಫ, ಏಪ್ರಿಲ್‌ಫೂಲ್​, ತನನಂ ತನನಂ, ಆ ದಿನಗಳು, ಕೆಂಪೇಗೌಡ ಹೀಗೆ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂತ ಶಿಶುನಾಳ ಶರೀಫ ಚಿತ್ರದಲ್ಲಿ ಇವರು ನಿರ್ವಹಿಸಿದ ಗುರು ಗೋವಿಂದ ಭಟ್ಟರ ಪಾತ್ರಕ್ಕೆ ಕರ್ನಾಟಕ ರಾಜ್ಯ ಅತ್ಯುತ್ತಮ ಪೋಷಕ ನಟ ಗೌರವ ಲಭಿಸಿದೆ. ಅಲ್ಲದೆ ಸಲ್ಮಾನ್​ಖಾನ್ ಅಭಿನಯಿಸಿದ್ದ ಏಕ್ ಥಾ ಟೈಗರ್ (ಆಗಸ್ಟ್ 15, 2012) ಹಾಗೂ ಟೈಗರ್ ಜಿಂದಾ ಹೈ (ಡಿಸೆಂಬರ್​ 22, 2017) ಸಿನಿಮಾಗಳಲ್ಲಿ ಕಾರ್ನಾಡರು ಕಡೆಯದಾಗಿ ನಟಿಸಿದ ಚಿತ್ರವಾಗಿದೆ.

girish karnad
ಚಿರಂಜೀವಿ ಸರ್ಜಾ ಹಾಗೂ ಕುಮಾರ್ ಬಂಗಾರಪ್ಪ ಅವರೊಂದಿಗೆ ಗಿರೀಶ್ ಕಾರ್ನಾಡ್​

ಮೊದಲು ಬಿ ವಿ ಕಾರಂತರ ಜೊತೆ ಸೇರಿಕೊಂಡು ಸಾಹಸಸಿಂಹ ವಿಷ್ಣುವರ್ಧನ್​ ಅಭಿನಯದ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಸಿನಿಮಾಗಳ ನಿರ್ದೇಶನ ಮಾಡಿದ್ದರು. ಬಳಿಕ ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಅಗ್ನಿ ಮತ್ತು ಮಳೆ ಎಂಬ ಸಿನಿಮಾಗಳನ್ನು ನಿರ್ದೇಶಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಾರ್ನಾಡ್​ರಿಗೆ ‘ಜ್ಞಾನಪೀಠ ಪ್ರಶಸ್ತಿ’ ಪ್ರಕಟಣೆ ಆಗಿದ್ದು ಕಾನೂರು ಹೆಗ್ಗಡತಿ’ (ಕುವೆಂಪು ಅವರ ಕಥೆ ಆಧಾರಿತ) ಚಿತ್ರೀಕರಣದ ಸಂದರ್ಭದಲ್ಲಿ,ಆಗವರು ತೀರ್ಥಹಳ್ಳಿಯಲ್ಲೇ ಇದ್ದರು. ಮಾಧ್ಯಮದವರು ಸಹ ಅಂದು ಅವರ ಸಂತೋಷದಲ್ಲಿ ಜೊತೆಯಾಗಿದ್ದರು.

girish karnad
ಡಾ. ಗಿರೀಶ್ ಕಾರ್ನಾಡ್​

ರಾಷ್ಟ್ರಕವಿ ಕುವೆಂಪು ಅವರ ಕೃತಿಯಾಧಾರಿತ ಸಿನಿಮಾ ಮಾಡುವಾಗ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ಕಾರ್ನಾಡರ ಆನಂದದ ಜೊತೆಗೆ ವಿಶೇಷ ಅನ್ನಿಸಿತ್ತು. ಅವರು ಮಾಧ್ಯಮದವರ ಜೊತೆ ಸಲುಗೆಯಿಂದ ಇರುತ್ತಿರಲಿಲ್ಲ. ಅವರಿಗೆ ಬೇಕಾದ ವ್ಯಕ್ತಿಗಳನಷ್ಟೇ ಮಾತನಾಡಿಸುತ್ತಿದ್ದರು. ದೃಶ್ಯ ಮಾಧ್ಯಮ ಬಂದ ನಂತರವಂತೂ ಚಿತ್ರೀಕರಣ ಸಮಯದಲ್ಲಿ ಕ್ಯಾಮರಾ ಮುಂದೆ ಮಾತನಾಡಬಾರದು ಎಂದು ನಿಯಮವನ್ನು ರೂಢಿಸಿಕೊಂಡಿದ್ದರು.

ಇದೀಗ ಗಿರೀಶ್ ಕಾರ್ನಾಡರ ಅಗಲಿಕೆಯಿಂದ ಸಾಹಿತ್ಯ ಲೋಕ ಹಾಗೂ ಚಿತ್ರರಂಗಕ್ಕೂ ತುಂಬಲಾರದ ನಷ್ಟವಾಗಿದೆ. ಕನ್ನಡ ನಾಟಕರಂಗ, ಸಾಹಿತ್ಯ ಮಾತ್ರವಲ್ಲದೆ, ಸಿನಿಲೋಕದಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇಂತಹ ಬಹುಮುಖ ಪ್ರತಿಭೆಯನ್ನು ಕಳೆದುಕೊಂಡ ನಾಡು ಇಂದು ಬಡವಾಗಿವೆ.

ಹೆಮ್ಮೆ ಹಾಗೂ ಜಂಬ ತುಂಬಿದ ವ್ಯಕ್ತಿತ್ವ ಡಾ ಗಿರೀಷ್ ಕಾರ್ನಾಡ್

ಕನ್ನಡ ನೆಲದ ಅನೇಕ ವ್ಯಕ್ತಿಗಳು ಹಲವಾರು ಸ್ತರಗಳಲ್ಲಿ, ದೇಶ, ವಿದೇಶಗಳಲ್ಲಿ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅದರಲ್ಲಿ ಡಾ ಗಿರೀಷ್ ಕಾರ್ನಾಡ್ ಸಹ ಒಬ್ಬರು. ಡಾ ಕಾರ್ನಾಡ್ ಎಂದರೆ ಹೇಗೆ ಹೆಮ್ಮೆ ಪಡುತ್ತೆವೊ ಹಾಗೂ ಅವರ ಪಾತ್ರಗಳು ಯಾವಾಗಲೂ ಜಂಬದಿಂದ ಕೂಡಿದ್ದವು. ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕನ್ನಡದಲ್ಲಿ ಏಳನೆಯವರು. ಕಾರ್ನಡರು ಎಂದರೆ ಚಿತ್ರ ಜಗತ್ತು ಸಹ ಹೆಮ್ಮೆ ಇಂದ ಅವರನ್ನು ಬರಮಾಡಿಕೊಳ್ಳುತ್ತ ಇತ್ತು. ಹಾಗೆ ಹೇಳಿದ ಸಂಭಾವನೆ ಚುಕ್ತಾ ಆಗಲಿಲ್ಲ ಅಂದರೆ ಅವರು ಸಹಿಸುತ್ತಾ ಇರಲಿಲ್ಲ.

ಸಾಹಿತ್ಯ ಲೋಕ ಹೇಗೆ ಇವರ ಅಗಲಿಕೆ ಇಂದ ಬಡವಾಗಿದೆಯೋ, ಚಿತ್ರ ರಂಗ ಸಹ ಈ ಬಹುಮುಖಿ ವ್ಯಕ್ತಿತ್ವದಿಂದ ಬಡವಾಗಿದೆ. ಎಂಟು ಭಾಷೆಗಳಲ್ಲಿ ಡಾ ಗಿರೀಷ್ ಕಾರ್ನಾಡ್ ಒಪ್ಪಿತವಾಗಿದ್ದರು ಅಂದರೆ ಅವರ ತಾಕತ್ತು ಯೋಚನೆ ಮಾಡಬೇಕಾದ್ದೇ. ಮೊದಲು ಬಿ ವಿ ಕಾರಂತರ ಜೊತೆ ಸೇರಿಕೊಂಡು ವಂಶವೃಕ್ಷ (ಡಾ ವಿಷ್ಣು – ಸಂಪತ್ ಕುಮಾರ್ ಆಗಿ ಅಭಿನಯಿಸಿದ ಸಿನಿಮಾ) ಹಾಗೂ ತಬ್ಬಲಿಯು ನೀನಾದೆ ಮಗನೆ ಸಿನಿಮಾಗಳ ನಿರ್ದೇಶನ ಮಾಡಿದ ಈ ಆಕ್ಸ್ಫರ್ಡ್ ಅಲ್ಲಿ ವಿಧ್ಯಭ್ಯಾಸ ಮಾಡಿದ ಗಿರೀಷ್ ಅವರು ಆನಂತರ ಕಾಡು, ಒಂದಾನೊಂದು ಕಾಲದಲ್ಲಿ (ಶಂಕರ್ ಆಗ್ ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ), ಕಾನೂರು ಹೆಗ್ಗಡತಿ, ಅಗ್ನಿ ಮತ್ತೆ ಮಳೆ ಸಿನಿಮಾಗಳ ನಿರ್ದೇಶನಕ್ಕೆ ಹಲವಾರು ಪ್ರಶಸ್ತಿಗಳು ಲಭ್ಯವಾಯಿತು.

ಡಾ ಗಿರೀಷ್ ಕಾರ್ನಡರು ತೀರ್ಥಹಳ್ಳಿಯಲ್ಲಿ ಕಾನೂರು ಹೆಗ್ಗಡತಿ (ಕುವೆಂಪು ಅವರ ಕಥೆ ಆಧಾರಿತ) ಚಿತ್ರೀಕರಣದ ಸಮಯ 1999 ರಲ್ಲಿ ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಪ್ರಕಟಣೆ ಆಗಿದ್ದು. ಅಂದು ಮಾಧ್ಯಮದವರು ಸಹ ಅವರ ಸಂತೋಷದಲ್ಲಿ ಜೊತೆಯಾಗಿದ್ದರು. ಆದರೆ ಕಾರ್ನಡರಿಗೆ ವಿಶೇಷ ಅನಿಸಿದ್ದು ಹಿರಿಯ ವ್ಯಕ್ತಿ ಕುವೆಂಪು ಅವರ 1936 ರಲ್ಲಿ ರಚನೆ ಆದ ಸಾಹಿತ್ಯ ಕೃತಿಯನ್ನು ಹಿಡಿದು ಸಿನಿಮಾ ಮಾಡುವಾಗಲೇ ಈ ಅತ್ಯುನ್ನತ ಪ್ರಶಸ್ತಿ ಸಿಕ್ಕಿದ್ದು ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಕಾನೂರು ಹೆಗ್ಗಡತಿ ಸಿನಿಮಾದಲ್ಲಿ ಕಾರ್ನಡರು ಚಂದ್ರೇ ಗೌಡನ ಪಾತ್ರ ಸಹ ಮಾಡಿದ್ದರು.

ಶಿಸ್ತು ಇವರ ಆಸ್ತಿ – ಡಾ ಕಾರ್ನಡರು ಬಹಳ ಶಿಸ್ತಿನ ವ್ಯಕ್ತಿ. ಇವರು ದುಡ್ಡಿಗೆ ಬೆಲೆ ಕೊಡುತ್ತಾ ಇದ್ದವರು. ದುಂದ್ದು ವೆಚ್ಚದ ವ್ಯಕ್ತಿ ಅಲ್ಲ. ನಿಮ್ಮನ್ನು ತೀರ್ಪುಗಾರರಾಗಿ ಆಯ್ಕೆ ಮಾಡಿದೆ ಎಂದು ಹೇಳಿದರು ಅದರಿಂದ ನನಗೇನೂ ಲಾಭ ಎಂದು ಸಿನಿಮಾ ವ್ಯಕ್ತಿಗಳನ್ನು ಕೇಳಿದ್ದು ಉಂಟು.

ಡಾ ಕಾರ್ನಡರು ಎಂದು ಮಾಧ್ಯಮದ ಜೊತೆ ಸಲಿಗೆ ಇಂದ ಮಾತನಾಡುತ್ತಾ ಇರಲಿಲ್ಲ. ಅವರಿಗೆ ಬೇಕಾದ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಮಾತನಾಡುತ್ತಾ ಇದ್ದರೂ. ದೃಶ್ಯ ಮಾಧ್ಯಮ ಬಂದ ಮೇಲೆ ಡಾ ಕಾರ್ನಡರು ತಂಡ ಪಾಲಿಸಿ ಅಂದರೆ ಅವರು ಚಿತ್ರೀಕರಣ ಸಮಯದಲ್ಲಿ ಕ್ಯಾಮರಾ ಮುಂದೆ ಮಾತನಾಡಬಾರದು ಎಂದು. ಅದಕ್ಕೆ ಹೇಳುತ್ತಾ ಇದ್ದದ್ದು ಈ ಸಮಯ, ಉಟ್ಟ ಬಟ್ಟೆ ಸಹ ನಿರ್ಮಾಪಕರದ್ದು. ಹಾಗಿದ್ದಾಗ ನಾನು ಯಾಕೆ ನಿಮ್ಮ ಮುಂದೆ ಮಾತನಾಡಬೇಕು ಎಂದು ನೆರವಾಗಿಯೇ ಹೇಳುತ್ತಾ ಇದ್ದರು.

ಡಾ ಗಿರೀಷ್ ಕಾರ್ನಡರಿಗೆ ಮತ್ತು ಡಾ ವಿಷ್ಣುವರ್ಧನ ಅವರಿಗೆ ಒಂದು ರೀತಿಯ ವಿಶೇಷ ಪ್ರೀತಿ ಇತ್ತು. ಅದಕ್ಕೆ ಕಾರಣ ವಂಶವೃಕ್ಷದಲ್ಲಿ ಸಂಪತ್ ಕುಮಾರ್ ಆಗಿದ್ದ ಡಾ ವಿಷ್ಣು ಅವರಿಗೆ ಇದೆ ಕಾರ್ನಡರು ಮತ್ತು ಬಿ ವಿ ಕಾರಂತರು ಕ್ಯಾಮರಾ ಮುಂದೆ ಅಭಿನಯಿಸಲು ಪಟ್ಟುಗಳನ್ನು ಹೇಳಿಕೊಟ್ಟಿದ್ದರು. ಹಲವಾರು ವರ್ಷಗಳ ನಂತರ ದ್ವಾರಕೀಶ್ ಚಿತ್ರ ನೀ ತಂದ ಕಾಣಿಕೆ – ಹಿಂದಿಯ ಶರಾಬಿ – ಅಮಿತಾಭ್ ಬಚ್ಚನ್ ಸಿನಿಮಾ ಕನ್ನಡದಲ್ಲಿ ತಯಾರಿಸಿದಾಗ ಡಾ ವಿಷ್ಣು ಅವರೇ ತಂದೆಯ ಪಾತ್ರಕ್ಕೆ ಡಾ ಗಿರೀಷ್ ಕಾರ್ನಡರೆ ಬೇಕು ಎಂದು ಹೇಳಿದ್ದರು. ಹಿಂದಿಯಲ್ಲಿ ಪ್ರಾನ್ ಮಾಡಿದ ಪಾತ್ರವನ್ನು (ಅಮಿತಾಭ್ ತಂದೆ ಪಾತ್ರ) ನೀ ತಂಡ ಕಾಣಿಕೆ ಕನ್ನಡ ಸಿನಿಮಾದಲ್ಲಿ ಡಾ ಗಿರೀಷ್ ಕಾರ್ನಡರು ಮಾಡಿದ್ದರು.

ಡಾ ಗಿರೀಷ್ ಕಾರ್ನಡರು ಕಡೆಯದಾಗಿ ಅಭಿನಯಿಸಿದ ಹಿಂದಿ ಸಿನಿಮಗಳು ಅಂದರೆ ಏಕ್ ಥಾ ಟೈಗರ್ ಹಾಗೂ 2017 ರಲ್ಲಿ ಟೈಗರ್ ಜಿಂದಾ ಹೈ’. ಇವರೆಡು ಸಲ್ಮಾನ್ ಖಾನ್ ಅಭಿನಯದ ಸಿನಿಮಗಳು. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.