ETV Bharat / sitara

ಟಾಕಿಂಗ್​ ಸ್ಟಾರ್​​ ಬಗ್ಗೆ ಅಚ್ಚರಿಯ ಮಾತನ್ನಾಡಿದ್ರು ಅಮ್ಮ ಗಿರಿಜಾ ಲೋಕೇಶ್​ - ಸೃಜನ್ ಲೋಕೇಶ್ ನಟಿಸಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರ

ಸೃಜನ್ ಲೋಕೇಶ್ ನಟಿಸಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರಿಜಾ ಲೋಕೇಶ್​​, ತನ್ನ ಮಗನ ಸಾಧನೆಯ ಬಗ್ಗೆ ಕಣ್ಣಂಚನ್ನು ಒದ್ದೆ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು, ನನ್ನ ಮಗನಿಗೆ ಯಾವಾಗಲೂ ಬೈಯುತ್ತಲೇ ಇದ್ದೆ. ನೀನೊಬ್ಬ ವೇಸ್ಟ್ ಬಾಡಿ ಎಂದು ಹೀಯಾಳಿಸುತ್ತಿದ್ದೆ. ಆದರೆ ಅವರ ಅಪ್ಪ ತನ್ನ ಮಗನನ್ನು ವಹಿಸಿಕೊಂಡು ಮಾತನಾಡುತ್ತಿದ್ದರು ಎಂದು ಸೃಜನ್​ ಲೋಕೇಶ್​ ಬಗ್ಗೆ ಗಿರಿಜಾ ಲೋಕೇಶ್​​​ ಮೆಚ್ಚುಗೆ ವ್ಯಕ್ತಪಡಿಸಿದರು.

ಗಿರಿಜಾ ಲೋಕೇಶ್​​, ನಟಿ
author img

By

Published : Aug 26, 2019, 10:44 AM IST

ನನ್ನ ಮಗ ಇಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಸೃಜನ್ ಲೋಕೇಶ್ ಬಗ್ಗೆ ಅವರ ತಾಯಿ ಗಿರಿಜಾ ಲೋಕೇಶ್ ಭಾವನಾತ್ಮಕವಾಗಿ ನುಡಿದರು.

ಸೃಜನ್ ಲೋಕೇಶ್ ನಟಿಸಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಮಗನ ಸಾಧನೆಯ ಬಗ್ಗೆ ಕಣ್ಣಂಚನ್ನು ಒದ್ದೆ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಸೃಜನ್​ ಬಗ್ಗೆ ಅಮ್ಮ ಗಿರಿಜಾ ಲೋಕೇಶ್​​​ ಏನ್​ ಹೇಳಿದ್ರು ಗೊತ್ತಾ...?

ನಾನು ನನ್ನ ಮಗನಿಗೆ ಯಾವಾಗಲೂ ಬೈಯುತ್ತಲೇ ಇದ್ದೆ. ನೀನೊಬ್ಬ ವೇಸ್ಟ್ ಬಾಡಿ ಎಂದು ಹೀಯಾಳಿಸುತ್ತಿದ್ದೆ. ಆದರೆ ಅವರ ಅಪ್ಪ ತನ್ನ ಮಗನನ್ನು ವಹಿಸಿಕೊಂಡು ಮಾತನಾಡುತ್ತಿದ್ದರು. ಅಲ್ಲದೆ ಮಗನ ಬಗ್ಗೆ ಇದೇ ರೀತಿ ಮಾತನಾಡುತ್ತಿದ್ದರೆ, ನಿನಗೆ ಡೈವರ್ಸ್ ಕೊಡ್ತೀನಿ ಅಂತ ಲೋಕೇಶ್ ನನಗೆ ಎಚ್ಚರಿಕೆ ಕೊಟ್ಟಿದ್ದರು ಎಂದು ಹಿಂದಿನದ್ದನ್ನ ನೆನಪು ಮಾಡಿಕೊಂಡರು.

ಲೋಕೇಶ್ ಅವರಿಗೆ ಮಗನ ಮೇಲೆ ಏನೋ ಒಂದು ನಂಬಿಕೆ ಇತ್ತು. ಮಗ ದೊಡ್ಡ ಸಾಧನೆಯನ್ನು ಮಾಡುತ್ತಾನೆ ಅನ್ನೋದು ಅವರಿಗೆ ಗೊತ್ತಿತ್ತು. ಮಗನ ಪರ ಯಾವಾಗಲೂ ಇರುತ್ತಿದ್ದರು. ಆದರೆ ಈಗ ಅವನನ್ನು ನೋಡಿದ್ರೆ ಲೋಕೇಶ್ ಅವರು ಹೇಳಿದ ಮಾತು ನಿಜವಾಗಿದೆ ಅನಿಸುತ್ತಿದೆ ಎಂದು ಗಿರಿಜಾ ಹೇಳಿದ್ರು.

ಅಲ್ಲದೇ ಜನಗಳು ಅವನನ್ನು ಟಾಕಿಂಗ್ ಸ್ಟಾರ್ ಅಂತ ಕರೀತಾರೆ. ಆದರೆ ಅವನು ಮನೆಯಲ್ಲಿ ಒಂದು ಮಾತನ್ನು ಸಹ ಆಡುವುದಿಲ್ಲ. ಥೂ ಇಂಥ ಮಕ್ಕಳು ಯಾರಿಗೂ ಬೇಡ ಎಂದು ನನಗೆ ಎಷ್ಟೋ ಬಾರಿ ಅನಿಸಿದೆ. ಆದರೆ ಅವನು ಮನಸೊಳಗೆ ಏನೋ ಒಂದು ಗುಣಾಕಾರ ಹಾಕಿಕೊಂಡೇ ಕೆಲಸ ಮಾಡುತ್ತಾನೆ ಎಂದು ಸೃಜನ್​ ಲೋಕೇಶ್​ ಬಗ್ಗೆ ತಾಯಿ ಗಿರಿಜಾ ಲೋಕೇಶ್​​ ಮೆಚ್ಚುಗೆ ವ್ಯಕ್ತಪಡಿಸಿದ್ರು.

Intro:ನನ್ನ ಮಗ ಎಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ರಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಬಗ್ಗೆ ಅವರ ತಾಯಿ ಗಿರಿಜಾ ಲೋಕೇಶ್ ತುಂಬಾ ಭಾವನಾತ್ಮಕವಾಗಿ ಹೇಳಿದರು. ಸೃಜನ್ ಲೋಕೇಶ್ ನಟನಾಗಿ ನಟಿಸಿರುವ ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರಿಜಾ ಲೋಕೇಶ್ ಅವರು ತನ್ನ ಮಗನ ಸಾಧನೆಯ ಬಗ್ಗೆ ಕಣ್ಣಂಚನ್ನು ಒದ್ದೆ ಮಾಡಿಕೊಂಡೆ ಮೆಚ್ಚುಗೆಯ ಮಾತುಗಳನ್ನಾಡಿದರು.

Body:ನಾನು ನನ್ನ ಮಗನಿಗೆ ಯಾವಾಗಲೂ ಬೈಯುತಲೆ ಇದ್ದೆ, ನೀನೊಬ್ಬ ವೇಸ್ಟ್ ಬಾಡಿ ಎಂದು ಹೀಯಾಳಿಸುತ್ತದೆ. ಆದರೆ ಅವರ ಅಪ್ಪ ತನ್ನ ಮಗನನ್ನು ವಹಿಸಿಕೊಂಡು ನನಗೆ ಬೈತಿದ್ರು, ಅಲ್ಲದೆ ಮಗನ ಬಗ್ಗೆ ಇದೇ ರೀತಿ ಮಾತನಾಡುತ್ತಿದ್ದರೆ ನಿನಗೆ ಡೈವರ್ಸ್ ಕೊಡ್ತೀನಿ ಅಂತ ಲೋಕೇಶ್ ಅವರು ನನಗೆ ಎಚ್ಚರಿಕೆ ಕೊಟ್ಟಿದ್ದರು. ಜೊತೆಗೆ ಒಂದು ದಿನ ಊಟವನ್ನು ಬಿಟ್ಟು ನೀನು ಹಾಗೆಲ್ಲ ಮಾತನಾಡಬಾರದು ಎಂದು ನನಗೆ ಬುದ್ಧಿವಾದ ಹೇಳಿದರು. ಲೋಕೇಶ್ ಅವರಿಗೆ ಅವರ ಮಗನ ಮೇಲೆ ಏನೋ ಒಂದು ನಂಬಿಕೆ ಇತ್ತು ನನ್ನ ಮಗ ದೊಡ್ಡ ಸಾಧನೆಯನ್ನು ಮಾಡುತ್ತಾನೆ ನೀನು ಬಗ್ಗೆ ಏನೇನೋ ಮಾತನಾಡಬೇಡ ಎಂದು ಮಗನ ಪರ ಯಾವಾಗಲೂ ಇರುತ್ತಿದ್ದರು. ಆದರೆ ಈಗ ಅವನನ್ನು ನೋಡಿದರೆ ಲೋಕೇಶ್ ಅವರು ಹೇಳಿದ ಮಾತು ನಿಜವಾಗಿದೆ. ನನ್ನ ಮಗ ಯಾರ ಸಹಾಯವೂ ಇಲ್ಲದೆ ಅವನೊಬ್ಬನೇ ಕೆಲಸವನ್ನು ಮಾಡುತ್ತಿರುತ್ತಾನೆ.

Conclusion:ಅಲ್ಲದೇ ಜನಗಳು ಅವನನ್ನು ಟಾಕಿಂಗ್ ಸ್ಟಾರ್ ಅಂತ ಕರೀತಾರೆ, ಆದರೆ ಅವನು ಮನೆಯಲ್ಲಿ ಒಂದು ಮಾತನ್ನು ಸಹ ಹಾಡುವುದಿಲ್ಲ. ಥೂ ಇಂಥ ಮಕ್ಕಳು ಯಾರಿಗೂ ಬೇಡ ಎಂದು ನನಗೆ ಎಷ್ಟೋ ಬಾರಿ ಅನಿಸಿದೆ, ಆದರೆ ಅವನು ಮನಸೊಳಗೆ ಏನೋ ಒಂದು ಗುಣಾಕಾರ ಹಾಕಿಕೊಂಡೇ ಕೆಲಸ ಮಾಡುತ್ತಾನೆ. ಆದರೆ ಈಗ ಅವನ ಈ ಒಂದು ಸಾಧನೆಯನ್ನು ನೋಡಿದರೆ ನಾವು ಅವನನ್ನು ಯಾವುದಕ್ಕೂ ಪ್ರೋತ್ಸಾಹ ಮಾಡಲಿಲ್ಲವಲ್ಲ ಅನಿಸುತ್ತದೆ. ಒಂದು ವೇಳೆ ನಾವೆಲ್ಲ ಅವನಿಗೆ ಪ್ರೋತ್ಸಾಹ ಕೊಟ್ಟಿದ್ದರೆ ಇನ್ನು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದ್ದನೇನೋ ಎಂದು ಈಗ ನನಗೆ ಅನಿಸುತ್ತದೆ.ಅದ್ರೆ ಅವನೊಬ್ಬನೆ ಏಕಾಂಗಿಯಾಗಿ ನಿಂತು ಈ ಮಟ್ಟಕ್ಕೆ ಬೆಳದಿದ್ದಾನೆ ಅಂದ್ರೆ ಒಬ್ಬ ತಾಯಿಯಾಗಿ ನನಗೆ ತುಂಭಾ ಖುಷಿಯಾಗುತ್ತೆ ಎಂದು ಗಿರಿಜಾ ಲೋಕೇಶ್ ಮಗನ ಬಗ್ಗೆ ತುಂಭಾ ಭಾವನಾತ್ಮಕವಾಗಿಯೇ ಮಾತನಾಡಿದ್ರು..

ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.