ETV Bharat / sitara

"ಬೇಗ ಗುಣಮುಖರಾಗಿ ಡಿಯರ್​ ಬಾಲು ಸರ್​": ರಜನೀಕಾಂತ್ - Actor Rajinikanth

ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ನಟ​ ರಜನೀಕಾಂತ್​​, ಅನುಭವಿ ಗಾಯಕನ ಶೀಘ್ರ ಚೇತರಿಕೆಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Actor Rajinikanth
ರಜನಿಕಾಂತ್
author img

By

Published : Aug 17, 2020, 2:06 PM IST

ಚೆನ್ನೈ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಸೂಪರ್​ ಸ್ಟಾರ್​ ರಜನೀಕಾಂತ್ ಸಂದೇಶವೊಂದನ್ನು ರವಾನಿಸಿದ್ದಾರೆ.

ತಮ್ಮ ಟ್ವಿಟರ್​ ಖಾತೆಯಲ್ಲಿ "ಬೇಗ ಗುಣಮುಖರಾಗಿ ಡಿಯರ್​ ಬಾಲು ಸರ್​" ಎಂದು ವಿಡಿಯೋ ಪೋಸ್ಟ್​ ಮಾಡಿರುವ ನಟ​ ರಜನೀಕಾಂತ್​​, 50 ವರ್ಷಗಳಿಂದ ಎಸ್‌ಪಿಬಿ ಅವರು ಅನೇಕ ಭಾಷೆಗಳಲ್ಲಿ ತಮ್ಮ ಮಧುರ ಕಂಠದಿಂದ ಲಕ್ಷಾಂತರ ಜನರನ್ನು ರಂಜಿಸಿದ್ದಾರೆ. ಇದೀಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಔಟ್​ ಆಫ್​ ಡೇಂಜರ್​ ಎಂದು ಕೇಳಿ ಖುಷಿಯಾಗಿದೆ. ಅನುಭವಿ ಗಾಯಕನ ಶೀಘ್ರ ಚೇತರಿಕೆಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ರಜನೀಕಾಂತ್​ ವಿಡಿಯೋ ಸಂದೇಶ

ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವ ಎಸ್​ಪಿಬಿ ಅವರ ಆರೋಗ್ಯ ಸ್ಥಿರವಾಗಿದೆ. ನಮ್ಮ ತಂದೆಯವರು ಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಅವರ ಶ್ವಾಸಕೋಶಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಎಸ್‌.ಪಿ.ಚರಣ್ ತಿಳಿಸಿದ್ದಾರೆ.

ಆಗಸ್ಟ್​ 5ರಂದು ಬಾಲಸುಬ್ರಹ್ಮಣ್ಯಂ ಅವರಿಗೆ ಕೋವಿಡ್​ ದೃಢಪಟ್ಟಿದ್ದು, ಬಳಿಕ ಚೆನ್ನೈನ ಎಂಜಿಎಂ ಹೆಲ್ತ್‌ ಕೇರ್‌ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.