ETV Bharat / sitara

ಐಎಸ್​​ಡಿ ಕಚೇರಿಗೆ ವಿಚಾರಣೆಗೆ ಹಾಜರಾದ ಅಭಿಷೇಕ್, ಗೀತಾ ಭಾರತಿ ಭಟ್ - Local Channel Anchor Abhishek

ಐಎಸ್​ಡಿ ನೋಟೀಸ್​​​ಗೆ ಪ್ರತಿಕ್ರಿಯಿಸಿರುವ ಕಿರುತೆರೆ ನಟಿ ಗೀತಾ ಭಾರತಿ ಭಟ್ ಹಾಗೂ ನಿರೂಪಕ ಅಭಿಷೇಕ್ ದಾಸ್ ಇಂದು ಶಾಂತಿ ನಗರದ ಐಎಸ್​​ಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

Geeta Bharati bhat and Abhishek
ಐಎಸ್​ಡಿ ವಿಚಾರಣೆ
author img

By

Published : Sep 22, 2020, 12:03 PM IST

ಬೆಂಗಳೂರು: ಸ್ಯಾಂಡಲ್​ವುಡ್​​​​​ ಡ್ರಗ್ಸ್​​​​​​​​​​ ಮಾಫಿಯಾ ಪ್ರಕರಣ‌ದ ಬೆನ್ನತ್ತಿದ್ದ ಸಿಸಿಬಿ ಬೆನ್ನಲ್ಲೇ ಐಎಸ್​​​ಡಿ ಕೂಡಾ ಕಾರ್ಯ ಪ್ರವೃತ್ತವಾಗಿದ್ದು ಸದ್ಯ ಐಎಸ್​​​​​​​​​ಡಿ ನೋಟೀಸ್​​​​​ಗೆ ಕಿರುತೆರೆ ನಟಿ ಗೀತಾ ಭಾರತಿ ಭಟ್ ಹಾಗೂ ನಿರೂಪಕ ಅಭಿಷೇಕ್ ಇಂದು ಶಾಂತಿನಗರ ಕಚೇರಿ ಬಳಿ ವಿಚಾರಣೆಗೆ ಹಾಜರಾಗಿದ್ದಾರೆ.

ವಿಚಾರಣೆಗೆ ಹಾಜರಾದ ಅಭಿಷೇಕ್, ಗೀತಾ ಭಾರತಿ ಭಟ್

ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಷೇಕ್, ಶನಿವಾರ ನನಗೆ ನೋಟೀಸ್ ಬಂತು. ನಿನ್ನೆ ರಾತ್ರಿ ಐಎಸ್​​ಡಿ ಅಧಿಕಾರಿಯೊಬ್ಬರು ನನಗೆ ಕರೆ ಮಾಡಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ಆತ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ತಿಳಿಯಬೇಕಿದೆ ನಿಮಗೆ ಏನು ವಿಚಾರ ಗೊತ್ತಿದೆಯೋ ಅದನ್ನು ಹೇಳಿ ಎಂದರು. ನನಗೆ ಗೊತ್ತಿರುವುದನ್ನು ಹೇಳುತ್ತೇನೆ ಎಂದು ಅಭಿಷೇಕ್ ದಾಸ್ ಹೇಳಿದ್ದಾರೆ.

19 ರಂದು ಐಎಸ್​​ಡಿ ಅಧಿಕಾರಿಗಳು ನನಗೆ ಕರೆ ಮಾಡಿ ವಿಚಾರಣೆಗೆ ಹಾಜರಾಗಲು ಕರೆದಿದ್ದರು. ಅಧಿಕಾರಿಗಳು ಏನು ಕೇಳುತ್ತಾರೋ ನನಗೆ ತಿಳಿದಿರುವುದನ್ನು ಹೇಳುತ್ತೇನೆ ಎಂದು ಗೀತಾ ಭಾರತಿ ಭಟ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.