'ಗರುಡ ಗಮನ ವೃಷಭ ವಾಹನ' ಸ್ಯಾಂಡಲ್ವುಡ್ನಲ್ಲಿ ಬಹಳ ಸುದ್ದಿಯಲ್ಲಿರುವ ಸಿನಿಮಾ. ಮಂಗಳೂರಿನ ಇಬ್ಬರು ಪ್ರತಿಭೆಗಳು ಒಟ್ಟಿಗೆ ನಟಿಸುತ್ತಿರುವ ಚಿತ್ರ ಇದಾಗಿದ್ದು, ನಿರ್ದೇಶಕ ಕಮ್ ನಟರಾದ ರಿಶಭ್ ಶೆಟ್ಟಿ ಹಾಗೂ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್ ಬಿ. ಶೆಟ್ಟಿ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿದೆ.
ಈ ಚಿತ್ರತಂಡದಿಂದ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದೆ. ಹೌದು.. ಸಿನಿಮಾದ ರಿಲೀಸ್ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಈ ಬಗ್ಗೆ ರಿಷಭ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. 'ಗರುಡ ಗಮನ ವೃಷಭ ವಾಹನ' ಬರುವ ಜೂನ್ 4 ರಂದು ನಿಮ್ಮ ಮುಂದೆ ಚಿತ್ರಮಂದಿರದಲ್ಲೇ ಬರಲಿದೆ. ಜೂನ್ 4 ರಂದು ಶಿವ ಮತ್ತು ಹರಿಯ ಪ್ರಪಂಚಕ್ಕೆ ಬರಲು ತಯಾರಾಗಿರಿ.. ಮಂಗಳಾದೇವಿಗೆ ಸ್ವಾಗತ ಎಂದಿದ್ದಾರೆ.
-
'ಗರುಡ ಗಮನ ವೃಷಭ ವಾಹನ' ಬರುವ ಜೂನ್ 4 ರಂದು ನಿಮ್ಮ ಮುಂದೆ ಚಿತ್ರಮಂದಿರದಲ್ಲೇ ಬರಲಿದೆ.
— Rishab Shetty (@shetty_rishab) February 4, 2021 " class="align-text-top noRightClick twitterSection" data="
ಜೂನ್ 4 ರಂದು ಶಿವ ಮತ್ತು ಹರಿಯ ಪ್ರಪಂಚಕ್ಕೆ ಬರಲು ತಯಾರಾಗಿರಿ..
ಮಂಗಳಾದೇವಿಗೆ ಸ್ವಾಗತ!#GGVVOnJune4 #WelcomeToMangaladevi #GGVV #GGVVTheMovie @RajbShettyOMK @midhunmukund pic.twitter.com/lzzXfrhsYT
">'ಗರುಡ ಗಮನ ವೃಷಭ ವಾಹನ' ಬರುವ ಜೂನ್ 4 ರಂದು ನಿಮ್ಮ ಮುಂದೆ ಚಿತ್ರಮಂದಿರದಲ್ಲೇ ಬರಲಿದೆ.
— Rishab Shetty (@shetty_rishab) February 4, 2021
ಜೂನ್ 4 ರಂದು ಶಿವ ಮತ್ತು ಹರಿಯ ಪ್ರಪಂಚಕ್ಕೆ ಬರಲು ತಯಾರಾಗಿರಿ..
ಮಂಗಳಾದೇವಿಗೆ ಸ್ವಾಗತ!#GGVVOnJune4 #WelcomeToMangaladevi #GGVV #GGVVTheMovie @RajbShettyOMK @midhunmukund pic.twitter.com/lzzXfrhsYT'ಗರುಡ ಗಮನ ವೃಷಭ ವಾಹನ' ಬರುವ ಜೂನ್ 4 ರಂದು ನಿಮ್ಮ ಮುಂದೆ ಚಿತ್ರಮಂದಿರದಲ್ಲೇ ಬರಲಿದೆ.
— Rishab Shetty (@shetty_rishab) February 4, 2021
ಜೂನ್ 4 ರಂದು ಶಿವ ಮತ್ತು ಹರಿಯ ಪ್ರಪಂಚಕ್ಕೆ ಬರಲು ತಯಾರಾಗಿರಿ..
ಮಂಗಳಾದೇವಿಗೆ ಸ್ವಾಗತ!#GGVVOnJune4 #WelcomeToMangaladevi #GGVV #GGVVTheMovie @RajbShettyOMK @midhunmukund pic.twitter.com/lzzXfrhsYT
ಪೋಸ್ಟರ್ನಿಂದಲೇ ಸಿನಿಮಾ ಗಮನ ಸೆಳೆದಿದೆ. ಈ ಹಿಂದೆ ರಿಷಭ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಇಬ್ಬರ ಅರ್ಧ ಮುಖ ಭಾಗದ ಪೋಸ್ಟರ್ ರಿಲೀಸ್ ಮಾಡಿ ತಲೆಗೆ ಹುಳ ಬಿಟ್ಟಿದ್ದರು. ರಾಜ್ ಬಿ. ಶೆಟ್ಟಿ ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ನಿರ್ದೇಶಕ ರಿಷಭ್ ಶೆಟ್ಟಿ ಕೂಡಾ ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.