1989ರಲ್ಲಿ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಆದ ಸಿನಿಮಾ ಯುಗ ಪುರುಷ.. ಕ್ರೇಜಿ ಸ್ಟಾರ್ ರವಿಚಂದ್ರನ್ ಹಿಟ್ ಸಿನಿಮಾಗಳಲ್ಲಿ ಈ ಚಿತ್ರವೂ ಒಂದು. ಕೇಳಿ ಪ್ರೇಮಿಗಳೇ.. ಒಬ್ಬಳು ಸುಂದರಿ ಇದ್ದಳು.. ಎಂಬ ಹಾಡು ಎವರ್ ಗ್ರೀನ್..
ಈಗ ಈ ಸಿನಿಮಾದ ಚಿತ್ರೀಕರಣವಾದ ಒಂದು ಫೇಮಸ್ ಸ್ಥಳದಲ್ಲಿ ನಿಂತು ನಟ ಗಣೇಶ್ ಯುಗಪುರುಷ ಸಿನಿಮಾವನ್ನ ನೆನಪಿಸಿಕೊಂಡಿದ್ದಾರೆ. ಗಣೇಶ್ ತ್ರಿಬಲ್ ರೈಡಿಂಗ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ತ್ರಿಬಲ್ ರೈಡಿಂಗ್ ಶೂಟಿಂಗ್ ಚಿಕ್ಕಮಗಳೂರಿನ ಎಸ್ಟೇಟ್ವೊಂದರಲ್ಲಿ ನಡೆಯುತ್ತಿದೆ. ಇದೇ ವೇಳೆ ಗಣೇಶ್ ಯುಗಪುರುಷ ಚಿತ್ರೀಕರಣವಾದ ಜಾಗಕ್ಕೆ ಭೇಟಿ ಕೊಟ್ಟಿದ್ದಾರೆ.
ಅಚ್ಚರಿ ವಿಷ್ಯ ಅಂದರೆ ಯುಗಪುರುಷ ಸಿನಿಮಾದ ಸದಾ ನೆನಪಿನಲ್ಲಿ ಉಳಿಯುವ ಲೋಕೇಶನ್ ಅಂದ್ರೆ ಮದರ್ ಮೇರಿ ಪ್ರತಿಮೆ. ಈ ಮದರ್ ಮೇರಿ ಪ್ರತಿಮೆ ಯುಗಪುರುಷದಲ್ಲಿ ಹೈಲೆಟ್ ಆದ ಸ್ಥಳ. ಚಿಕ್ಕಮಗಳೂರಿನ ಎಸ್ಟೇಟ್ವೊಂದರಲ್ಲಿ ಈ ಪ್ರತಿಮೆ ಇದೆ.
ತಮ್ಮ ತ್ರಿಬಲ್ ರೈಡಿಂಗ್ ಸಿನಿಮಾ ಚಿತ್ರೀಕರಣದ ಬಳಿಕ ಗಣೇಶ್ ಸೈಕ್ಲಿಂಗ್ ಹೋಗುವ ಸಂದರ್ಭದಲ್ಲಿ ಇದನ್ನ ಗಮನಿಸಿ ಅದರ ಮುಂದೆ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು, ಯುಗಪುರುಷ, ತ್ರಿಬಲ್ ರೈಡಿಂಗ್ ಚಿತ್ರೀಕರಣ ಮಾಡುವಾಗ ಈ ಸ್ಥಳ ನೋಡಿ, ಬಾಲ್ಯದಲ್ಲಿ VCPಯಲ್ಲಿ ಯುಗಪುರುಷ ಸಿನಿಮಾ ನೋಡಿದ್ದು ನೆನಪಾಯಿತ್ತು ಅಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
-
"ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು"
— Ganesh (@Official_Ganesh) November 25, 2020 " class="align-text-top noRightClick twitterSection" data="
ಯುಗಪುರುಷ.....
ತ್ರಿಬಲ್ ರೈಡಿಂಗ್ ಚಿತ್ರೀಕರಣ ಮಾಡುವಾಗ ಈ ಸ್ಥಳ ನೋಡಿ ಬಾಲ್ಯದಲ್ಲಿ ಯುಗಪುರಷ VCPಯಲ್ಲಿ ನೋಡಿದ ನೆನಪಾಯಿತು.....#goodmorning #crazystar #cycle pic.twitter.com/WxLgdil8Ua
">"ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು"
— Ganesh (@Official_Ganesh) November 25, 2020
ಯುಗಪುರುಷ.....
ತ್ರಿಬಲ್ ರೈಡಿಂಗ್ ಚಿತ್ರೀಕರಣ ಮಾಡುವಾಗ ಈ ಸ್ಥಳ ನೋಡಿ ಬಾಲ್ಯದಲ್ಲಿ ಯುಗಪುರಷ VCPಯಲ್ಲಿ ನೋಡಿದ ನೆನಪಾಯಿತು.....#goodmorning #crazystar #cycle pic.twitter.com/WxLgdil8Ua"ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು"
— Ganesh (@Official_Ganesh) November 25, 2020
ಯುಗಪುರುಷ.....
ತ್ರಿಬಲ್ ರೈಡಿಂಗ್ ಚಿತ್ರೀಕರಣ ಮಾಡುವಾಗ ಈ ಸ್ಥಳ ನೋಡಿ ಬಾಲ್ಯದಲ್ಲಿ ಯುಗಪುರಷ VCPಯಲ್ಲಿ ನೋಡಿದ ನೆನಪಾಯಿತು.....#goodmorning #crazystar #cycle pic.twitter.com/WxLgdil8Ua