ETV Bharat / sitara

ಒಟಿಟಿಯಲ್ಲಿ ಪ್ರಸಾರವಾಗಲಿದೆ ಜಿ. ಮೂರ್ತಿ ನಿರ್ದೇಶನದ 'ಹಳ್ಳಿಯ ಮಕ್ಕಳು' - G Murthy direction movie

ರಾಜ್ಯ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಹಾಗೂ ನಿರ್ದೇಶಕ ಜಿ. ಮೂರ್ತಿ ನಿರ್ದೇಶನದ 'ಹಳ್ಳಿಯ ಮಕ್ಕಳು' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಪರಿಸರ, ಸಂಸ್ಕೃತಿ, ಬಾಲ್ಯ ವಿವಾಹ, ಶಿಕ್ಷಣದ ಮಹತ್ವದ ಬಗ್ಗೆ ಈ ಚಿತ್ರದಲ್ಲಿ ತಿಳಿಸಲಾಗಿದೆ.

Halliya Makkalu
'ಹಳ್ಳಿಯ ಮಕ್ಕಳು'
author img

By

Published : Jul 30, 2020, 11:58 AM IST

ಕನ್ನಡದ ಸ್ಟಾರ್ ನಟರು ಸಿನಿಮಾಗಳು, ಹೈ ಬಜೆಟ್ ಸಿನಿಮಾಗಳು ಒಟಿಟಿ ಪ್ಲಾಟ್​​ಫಾರ್ಮ್​ನಲ್ಲಿ ಬಿಡುಗಡೆಯಾಗಿವೆ. ಆದರೆ ಸಣ್ಣ ಬಜೆಟಿನ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುವುದಿಲ್ಲ ಎಂಬ ಮಾತಿಗೆ ವಿರುದ್ಧವಾಗಿ ಅಮೆಜಾನ್ ಪ್ರೈಂನಲ್ಲಿ ಚಿಕ್ಕ ಬಜೆಟ್ ಸಿನಿವೊಂದನ್ನು ಪ್ರಸಾರ ಮಾಡಲು ಹೊರಟಿದೆ.

Halliya Makkalu
'ಹಳ್ಳಿಯ ಮಕ್ಕಳು'

ಕನ್ನಡದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಹಾಗೂ ನಿರ್ದೇಶಕ ಜಿ. ಮೂರ್ತಿ ಅವರು ಕುರುನಾಡು, ಶಂಕರ ಪುಣ್ಯಕೋಟಿ, ಸಿದ್ದಗಂಗ, ಬಿಂಬದಂತ ಸಿನಿಮಾಗಳಿಂದ ಹೆಸರಾದವರು. ಇದಿಗ ಜಿ. ಮೂರ್ತಿ ನಿರ್ದೇಶನದ 'ಹಳ್ಳಿಯ ಮಕ್ಕಳು' ಕನ್ನಡ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾ ಚಿತ್ರೀಕರಣ 2013 ರಲ್ಲಿ ಪ್ರಾರಂಭ ಆಗಿ 2014 ರಲ್ಲಿ ಬಿಡುಗಡೆ ಆಗಿತ್ತು.

Halliya Makkalu
ಜಿ. ಮೂರ್ತಿ ನಿರ್ದೇಶನದ 'ಹಳ್ಳಿಯ ಮಕ್ಕಳು'

'ಹಳ್ಳಿಯ ಮಕ್ಕಳು', ವಿಧವೆ ಶಾಲಾ ಶಿಕ್ಷಕಿ ಸುತ್ತ ಹೆಣೆಯಲಾದ ಕಥೆ. ಪರಿಸರ, ಸಂಸ್ಕೃತಿ, ಬಾಲ್ಯ ವಿವಾಹ, ಶಿಕ್ಷಣದ ಮಹತ್ವದ ಬಗ್ಗೆ ತಿಳಿಸುವ ಸಿನಿಮಾವನ್ನು ಜಿ. ಮೂರ್ತಿ, ಮಹಂತಪ್ಪ ಹಾಗೂ ಶ್ರೀನಿವಾಸ್ ಜೊತೆ ಸೇರಿ ನಿರ್ಮಾಣ ಮಾಡಿದ್ದಾರೆ. 130 ಮಕ್ಕಳು ಈ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಚಿತ್ರದಲ್ಲಿ ತನ್ಮಯ, ವಿಧವೆ ಶಾಲಾ ಶಿಕ್ಷಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪಿ.ಕೆ. ಹೆಚ್​​​​. ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರವೀಣ್ ಗೋಡ್ಕಿಂಡಿ ಸಂಗೀತ ಒದಗಿಸಿದ್ದಾರೆ.

Halliya Makkalu
ಒಟಿಟಿಯಲ್ಲಿ 'ಹಳ್ಳಿಯ ಮಕ್ಕಳು' ಪ್ರಸಾರ

ವಿಜಯಲಕ್ಷ್ಮಿ, ಚಲಪತಿ, ರಮೇಶ್ ಭಟ್, ವೀಣಾ ಸುಂದರ್, ದಿವಾಕರ್, ರವಿ ಪೂಜಾರ್, ಈಶಪ್ಪ, ಮಾಸ್ಟರ್ ಮನೋಹರ್, ವಿಶಾಲ್, ಅನನ್ಯ, ಕಾವ್ಯ, ಸಿರಿ, ಚೈತ್ರ, ಶ್ರದ್ಧಾ, ಸುಂದರ್, ವಿನೋದ್ ನಾಗ್, ಶಿವಣ್ಣ, ನಾಗರತ್ನ ಡಾಕ್ಟರ್ ಶ್ರೀನಿವಾಸ್, ರವಿಶಂಕರ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.