ETV Bharat / sitara

ಕಾಮಿಡಿ, ಥ್ರಿಲ್ಲರ್ 'ಫ್ರೆಂಚ್ ಬಿರ್ಯಾನಿ' ಟ್ರೇಲರ್ ಬಿಡುಗಡೆ

ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಾಣದಲ್ಲಿ ಪನ್ನಗಾಭರಣ ನಿರ್ದೇಶಿಸಿರುವ ಫ್ರೆಂಚ್ ಬಿರ್ಯಾನಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ದಾನಿಷ್ ಸೇಠ್​​, ರಂಗಾಯಣ ರಘು ಹಾಗೂ ಇನ್ನಿತರರರು ನಟಿಸಿದ್ದಾರೆ.

author img

By

Published : Jul 16, 2020, 4:37 PM IST

French Biryani trailer released
ಫ್ರೆಂಚ್ ಬಿರ್ಯಾನಿ

ಪುನೀತ್ ರಾಜ್​ಕುಮಾರ್ ಮಾಲೀಕತ್ವದ ಪಿಆರ್​ಕೆ ಬ್ಯಾನರ್ ಅಡಿ ನಿರ್ಮಾಣವಾದ 'ಫ್ರೆಂಚ್ ಬಿರ್ಯಾನಿ' ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಇಂದು ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.

  • " class="align-text-top noRightClick twitterSection" data="">

ಬೊಂಬಾಟ್ ಕಾಮಿಡಿ ಹಾಗೂ ಥ್ರಿಲ್ಲರ್​ ಕಥಾ ಹಂದರ ಹೊಂದಿರುವ 'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ 'ಹಂಬಲ್​ ಪೊಲಿಟಿಷಿಯನ್ ನೊಗರಾಜ್' ಖ್ಯಾತಿಯ ದಾನಿಷ್ ಸೇಠ್ ಮುಸ್ಲಿಂ ಆಟೋ ಚಾಲಕನಾಗಿ ನಟಿಸಿದ್ದಾರೆ. ಇವರೊಂದಿಗೆ ಪಿಟೋಬಾಶ್ ತ್ರಿಪಾಠಿ, ದಿಶಾ ಮದನ್, ಸಾಲ್ ಯೂಸುಫ್ , ಮೈಕಲ್ ಮಧು ಕೂಡಾ ಅಭಿನಯಿಸಿದ್ದಾರೆ.

French Biryani trailer released
ಪುನೀತ್ ರಾಜ್​ಕುಮಾರ್

ಮುಸ್ಲಿಂ ಯುವಕನ ಪಾತ್ರದಲ್ಲಿ ದಾನಿಷ್ ಸೇಠ್​​​ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ಕಚಗುಳಿ ಇಟ್ಟಿದ್ದಾರೆ. 'ಹ್ಯಾಪಿ ನ್ಯೂ ಇಯರ್' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ, ಪನ್ನಾಗಾಭರಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪಿಆರ್​ಕೆ ಬ್ಯಾನರ್ ಅಡಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಹಾಗೂ ಗುರುದತ್ ಎ ತಲ್ವಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

French Biryani trailer released
'ಫ್ರೆಂಚ್ ಬಿರ್ಯಾನಿ'

'ಲಾ' ಸಿನಿಮಾ ಪ್ರಸಾರ ಆದ ಒಂದು ವಾರದ ನಂತರ 'ಫ್ರೆಂಚ್ ಬಿರ್ಯಾನಿ' ಅಮೆಜಾನ್​ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು 200 ದೇಶಗಳಲ್ಲಿ ಈ ಸಿನಿಮಾ ವೀಕ್ಷಿಸಲು ದೊರೆಯುತ್ತಿದೆ. ಫ್ರೆಂಚ್ ಬಿರ್ಯಾನಿ ಟ್ರೇಲರ್ ಕುತೂಹಲ ಹುಟ್ಟಿಸಿದ್ದು ದಾನಿಷ್ ಸೇಠ್ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.