ETV Bharat / sitara

ಮಾತಿನ ಮಲ್ಲ ಅಕುಲ್ ಬಾಲಾಜಿ ವಿರುದ್ಧ ಎಫ್​ಐಅರ್ ದಾಖಲು: ಕಾರಣ ಏನ್ ಗೊತ್ತಾ?

author img

By

Published : Apr 20, 2020, 9:44 PM IST

ಲಾಕ್ ಡೌನ್ ಆದೇಶ ಇದ್ದರು ಕೂಡ ತಮ್ಮ ರೆಸಾರ್ಟ್​​ನ್ನು ಮುಚ್ಚದೆ ಇದ್ದಿದ್ದರಿಂದ ಅಕುಲ್ ಬಾಲಾಜಿ ವಿರುದ್ಧ ಎಫ್​ಐಅರ್ ದಾಖಲಾಗಿದೆ.

ಮಾತಿನ ಮಲ್ಲ ಅಕುಲ್ ಬಾಲಾಜಿ ವಿರುದ್ಧ ಎಫ್​ಐಅರ್ ದಾಖಲು

ಲಾಕ್​ಡೌನ್ ಅದೇಶ ಉಲ್ಲಂಘಿಸಿದ ಅರೋಪದಡಿ ನಟ, ನಿರೂಪಕ ಅಕುಲ್ ಬಾಲಾಜಿ ವಿರುದ್ಧ ಎಫ್​ಐಅರ್ ದಾಖಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಡೆ ಕಾಯಿದೆ 188, ಐಪಿಸಿ ಕಲಂ 269ರ ಅನ್ವಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾಕ್ ಡೌನ್ ಆದೇಶ ಇದ್ದರೂ ತಮ್ಮ ರೆಸಾರ್ಟ್​​ನ್ನು ಮುಚ್ಚದೆ ಇದ್ದಿದ್ದರಿಂದ ಪ್ರಕರಣ ದಾಖಲು ಮಾಡಲಾಗಿದೆ.

ಶೈನ್ ರೆಸಾರ್ಟ್
ಲಗುಮೇನಹಳ್ಳಿ ಗ್ರಾಮದಲ್ಲಿನ ಅಕುಲ್ ಬಾಲಾಜಿ ಒಡೆತನದ ಶೈನ್ ರೆಸಾರ್ಟ್

ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿರುವ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ರೆಸಾರ್ಟ್​ ಅನ್ನು ಬೆಂಗಳೂರಿನ ಥಣಿಸಂದ್ರ ನಿವಾಸಿಗಳ ಮದುವೆ ಕಾರ್ಯಕ್ರಮಕ್ಕೆ ಬಾಡಿಗೆ ನೀಡಿದ್ದಾರೆ. ಇನ್ನು ಮಧ್ಯರಾತ್ರಿ 20ಕ್ಕೂ ಅಧಿಕ ಮಂದಿ ರೆಸಾರ್ಟ್ ​ಬಳಿ ಬಂದಿದ್ದನ್ನು ಕಂಡ ಲಗುಮೇನಹಳ್ಳಿ ಗ್ರಾಮದ ಜನರು ಕೊರೊನಾ ಸೋಂಕು ಭಯದಿಂದ ಆತಂಕಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸರ್ಕಾರದ ಆದೇಶ ಉಲ್ಲಂಘಿಸಿ ರೆಸಾರ್ಟ್ ನಡೆಸಿದ ಅಕುಲ್ ಬಾಲಾಜಿ ಹಾಗೂ ಉದ್ಯಮ ಪಾಲುದಾರ ಶ್ರೀನಿವಾಸ ಸುಬ್ರಮಣಿಯನ್​ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಎಫ್​ಐಆರ್​ ದಾಖಲಾಗಿದ್ದು, ಅಖುಲ್ ಬಾಲಾಜಿ ಇದುವರೆಗೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.