ETV Bharat / sitara

ತಲ್ವಾರ್​ನಲ್ಲಿ ಕೇಕ್​​ ಕತ್ತರಿಸಿ ಇಕ್ಕಟ್ಟಿಗೆ ಸಿಲುಕಿದ ಕರಿ ಚಿರತೆ: ದುನಿಯಾ ವಿಜಯ್​​ ವಿರುದ್ಧ ಕೇಸ್​ - ತಲ್ವಾರ್​ನಲ್ಲಿ ಕೇಕ್​​ ಕತ್ತರಿಸಿದ್ದಕ್ಕೆ ದುನಿಯಾ ವಿಜಯ್​​ ವಿರುದ್ಧ ಕೇಸ್​​ ದಾಖಲು!

ತಲ್ವಾರ್​​ನಿಂದ ಕೇಕ್‌ ಕತ್ತರಿಸಿ ಸುದ್ದಿಯಾಗಿದ್ದ ನಟ ದುನಿಯಾ ವಿಜಯ್ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರ ವಿರುದ್ಧ ಗಿರಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

FIR against duniya vijay in girinagara police station
ತಲ್ವಾರ್​ನಲ್ಲಿ ಕೇಕ್​​ ಕತ್ತರಿಸಿದ್ದಕ್ಕೆ ದುನಿಯಾ ವಿಜಯ್​​ ವಿರುದ್ಧ ಕೇಸ್​​ ದಾಖಲು!
author img

By

Published : Jan 23, 2020, 4:39 PM IST

ಬೆಂಗಳೂರು: ಹುಟ್ಟುಹಬ್ಬದ ದಿನದಂದೇ ತಲ್ವಾರ್​​ನಿಂದ ಕೇಕ್‌ ಕತ್ತರಿಸಿ ಸುದ್ದಿಯಾಗಿದ್ದ ನಟ ದುನಿಯಾ ವಿಜಯ್ ವಿರುದ್ಧ ಗಿರಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಐಪಿಸಿ ಸೆಕ್ಷನ್ 283ರ ಅಡಿಯಲ್ಲಿ‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಳೆದ ಮಂಗಳವಾರ ರಾತ್ರಿ ವಿಜಯ್ ಹುಟ್ಟುಹಬ್ಬ ಪ್ರಯುಕ್ತ ಮನೆ ಬಳಿ ಅಭಿಮಾನಿಗಳ ಜೊತೆಗೂಡಿ ತಲ್ವಾರ್​ನಿಂದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದರು.

ಬರ್ತ್ ಡೇಗೆ ಕತ್ತಿಯಿಂದ ಕೇಕ್​ ಕಟ್​ ಮಾಡಿದ ದುನಿಯಾ ವಿಜಿ!

ತಡರಾತ್ರಿಯಾದರೂ ರಸ್ತೆಯಲ್ಲಿ ಧ್ವನಿವರ್ಧಕ ಬಳಸಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಪರಿಣಾಮ‌ ಸಾರ್ವಿಜನಿಕರು ಕಿರಿ‌ಕಿರಿ ಅನುಭವಿಸಿದ್ದರು. ಅಲ್ಲದೆ ಈ ಸಂಭ್ರಮಾಚರಣೆಗೆ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ.‌ ‌ಬರ್ತಡೇ ಆಚರಣೆ ದೃಶ್ಯ ಸಾಮಾಜಿಕ‌‌ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಿರಿ ನಗರ ಪೊಲೀಸರು ವಿಜಯ್​ಗೆ ನೊಟೀಸ್ ನೀಡಿದ್ದರು.

ಇದರಂತೆ ಇಂದು ಪೊಲೀಸ್​ ಠಾಣೆಗೆ ಹಾಜರಾಗಿದ್ದ ನಟ ವಿಜಯ್​, ತಲ್ವಾರ್ ನನ್ನದಲ್ಲ, ಅಭಿಮಾನಿಗಳು ಉಡುಗೊರೆ ನೀಡಿದ್ದರು. ಆತುರದಲ್ಲಿ ಅದರಲ್ಲೇ ಕೇಕ್ ಕತ್ತರಿಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Intro:Body:ತಲ್ವಾರ್ ನಿಂದ ಕೇಕ್ ಕತ್ತರಿಸಿದ ಪ್ರಕರಣ: ದುನಿಯಾ ವಿಜಯ್ ವಿರುದ್ಧ ಎಫ್ಐಆರ್..

ಬೆಂಗಳೂರು: ಹುಟ್ಟುಹಬ್ಬ ದಿನದಂದೇ ತಲ್ವಾರ್ ನಿಂದ ಕೇಕ್‌ ಕತ್ತರಿಸಿ ಸುದ್ದಿಯಾಗಿದ್ದ ನಟ ದುನಿಯಾ ವಿಜಯ್ ವಿರುದ್ಧ ಗಿರಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ..
ಐಪಿಸಿ ಸೆಕ್ಷನ್ 283 ಅಡಿಯಲ್ಲಿ‌ ಪ್ರಕರಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಮಂಗಳವಾರ ರಾತ್ರಿ ವಿಜಯ್ ಹುಟ್ಟುಹಬ್ಬ ಪ್ರಯುಕ್ತ ಮನೆ ಬಳಿ ಅಭಿಮಾನಿಗಳ ಜೊತೆಗೂಡಿ ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.. ತಡರಾತ್ರಿಯಾದರೂ ರಸ್ತೆಯಲ್ಲಿ
ದ್ವನಿವರ್ಧಕ ಬಳಸಿ ಸಂಭ್ರಮಾಚರಣೆ ಭಾಗಿಯಾಗಿದ ಪರಿಣಾಮ‌ ಸಾರ್ವಿಜನಿಕರಿಗೆ ಕಿರಿ‌ಕಿರಿ ಮಾಡಿದ್ದರು.. ಅಲ್ಲದೇ ಈ ಸಂಭ್ರಮಾಚರಣೆಗೆ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ.‌ ‌ಬರ್ತ್ ಡೇ ಆಚರಣೆ ದೃಶ್ಯ ಸಾಮಾಜಿಕ‌‌ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಿರಿ ನಗರ ಪೊಲೀಸರು ವಿಜಯ್ ನೊಟೀಸ್ ನೀಡಿದ್ದರು...ಇದರಂತೆ ಹಾಜರಾಗಿ ತಲ್ವಾರ್ ನನ್ನದಲ್ಲ, ಅಭಿಮಾನಿಗಳು ಉಡುಗೊರೆ ನೀಡಿದ್ದರು.. ಆತುರದಲ್ಲಿ ಅದರಲ್ಲೇ ಕೇಕ್ ಕಟ್ ಮಾಡಿದ್ದೇನೆ ಎಂದು ತಪ್ಪೊಪ್ಪಿಗೆ ನೀಡಿದ್ದರು..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.