ETV Bharat / sitara

ಕೋವಿಡ್‌ ಸೋಂಕು ತಗುಲಿ ಸ್ಯಾಂಡಲ್​ವುಡ್​ ನಿರ್ಮಾಪಕ ಚಂದ್ರಶೇಖರ್ ನಿಧನ - producer chandrashekhar passes away

film-producer-chandrashekhar-died-due-to-covid-19
ಸ್ಯಾಂಡಲ್​ವುಡ್​ ನಿರ್ಮಾಪಕ ಚಂದ್ರಶೇಖರ್ ಕೊನೆಯುಸಿರು
author img

By

Published : Apr 29, 2021, 8:35 AM IST

Updated : Apr 29, 2021, 9:07 AM IST

08:27 April 29

ಕೊರೊನಾ ಪಾಸಿಟಿವ್​ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್​ ನಿರ್ಮಾಪಕ ಚಂದ್ರಶೇಖರ್(63) ಕೊನೆಯುಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗದ ನಿರ್ಮಾಪಕ ಚಂದ್ರಶೇಖರ್(63) ಕೊರೊನಾ ಸೋಂಕು ತಗುಲಿ, ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.

ಕೆಲ ದಿನಗಳ ಹಿಂದೆ 'ಕೋಟಿ ನಿರ್ಮಾಪಕ' ಎಂದೇ ಖ್ಯಾತರಾಗಿದ್ದ ರಾಮು ಕೊರೊನಾ ಸೋಂಕಿನಿಂದ ನಿಧನರಾಗಿದ್ದರು. ನಿನ್ನೆ ತಾನೆ ಸ್ಯಾಂಡಲ್​ವುಡ್​​ 'ಚಿತ್ರಬ್ರಹ್ಮ' ಎಂದೇ ಜನಪ್ರಿಯರಾಗಿದ್ದ ನಿರ್ದೇಶಕ ದಿ. ಪುಣ್ಣಣ್ಣ ಕಣಗಾಲ್ ಅವರ ಮಗ ರಾಮು ಕಣಗಾಲ್ (54) ಕೂಡ ಮಹಾಮಾರಿಯಿಂದ ಕೊನೆಯುಸಿರೆಳೆದಿದ್ದರು. ಇದೀಗ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತವಾಗಿದೆ.

ಚಂದ್ರಶೇಖರ್ ಅವರು, ನಿಮಿಶಾಂಬ ಪ್ರೊಡಕ್ಷನ್ಸ್ ಬ್ಯಾನರ್ ಅಡಿ, ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ರನ್ನದಂತಹ ಬಿಗ್ ಬಜೆಟ್ ಸಿನಿಮಾ ನಿರ್ಮಿಸಿದ್ದರು. ಕಳೆದ‌ 27 ದಿನಗಳ ಹಿಂದೆ ಕೋವಿಡ್ ಪಾಸಿಟಿವ್​ ಬಂದ ಬಳಿಕ ಮಣಿಪಾಲ್ ಸೆಂಟರ್​ಗೆ ದಾಖಲಾಗಿದ್ದರು. ಆದರೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡು, ಚಂದ್ರಶೇಖರ್ ಮೃತರಾಗಿದ್ದಾರೆ.

ಚಂದ್ರಶೇಖರ್ ಪತ್ನಿ ಸುಮ ಹಾಗೂ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗನನ್ನು ಅಗಲಿದ್ದಾರೆ. ಇತ್ತೀಚೆಗಷ್ಟೇ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅವರೊಂದಿಗೆ ಸಿನಿಮಾವೊಂದನ್ನು ಘೋಷಣೆ ಮಾಡಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು.

ರವಿಚಂದ್ರನ್, ಪುನೀತ್ ರಾಜ್‍ಕುಮಾರ್, ಸುದೀಪ್, ಉಪೇಂದ್ರ, ಗಣೇಶ್ ಅವರಂತಹ ಸ್ಟಾರ್ ನಟರ ಸಿನಿಮಾ ನಿರ್ಮಿಸಿದ ಚಂದ್ರಶೇಖರ್ ನಿಧನದ ಸುದ್ದಿ ಕೇಳಿ ಚಿತ್ರರಂಗ ಆಘಾತಕ್ಕೊಳಗಾಗಿದೆ. 

ಇದನ್ನೂ ಓದಿ: ಭಾರತಕ್ಕೆ 100 ಮಿಲಿಯನ್ ಡಾಲರ್​ ಮೌಲ್ಯದ ವೈದ್ಯಕೀಯ ಸಾಮಗ್ರಿ ಪೂರೈಸಲಿರುವ ಅಮೆರಿಕ

Last Updated : Apr 29, 2021, 9:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.