ETV Bharat / sitara

ಐಟಿ ಸಾಧನೆ, ಸಮಾಜಸೇವೆ: ಸಿನಿಮಾ ಆಗಲಿದೆ ಇನ್ಫೋಸಿಸ್​ ದಂಪತಿ ಜೀವನಗಾಥೆ - ಕಂಗನಾ ರಣಾವತ್​

ಕರುನಾಡಿನ ಹೆಮ್ಮೆಯ ಸುಧಾ ಮೂರ್ತಿ ಹಾಗೂ ಇನ್ಫೋಸಿಸ್​ ಕಂಪನಿ ಸಂಸ್ಥಾಪಕ ನಾರಾಯಣ ಮೂರ್ತಿ ಜೀವನ ಹಾಗೂ ಸಾಧನೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ.

ನಾರಾಯಣ ಮೂರ್ತಿ
author img

By

Published : Aug 10, 2019, 12:49 PM IST

ಸಾಫ್ಟ್​​ವೇರ್​ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಹಾಗೂ ಸಾಮಾಜಮುಖಿ ಕಾರ್ಯಗಳಿಂದ ದೊಡ್ಡ ಹೆಸರು ಮಾಡಿರುವ ನಾರಾಯಣ ಹಾಗೂ ಸುಧಾ ಮೂರ್ತಿ ಬಯೋಪಿಕ್ ರೆಡಿಯಾಗಲಿದೆ. ತಮ್ಮ ಕುರಿತು ಸಿನಿಮಾ ಮಾಡಲು ಈ ದಂಪತಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ಬಾಲಿವುಡ್​ ಸಿನಿಮಾ ನಿರ್ದೇಶಕಿ ಅಶ್ವಿನಿ ಅಯ್ಯರ್​​ ತಿವಾರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳಲಿದ್ದಾರೆ. ಇವರ ಪತಿ ನಿತಿಶ್​ ತಿವಾರಿ ಸಿನಿಮಾಗೆ ಹಣ ಹೂಡಲಿದ್ದಾರೆ. ಅಶ್ವಿನಿ ಸದ್ಯ ಕಂಗನಾ ರಣಾವತ್​ ಅವರ ಪಂಗಾ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.

ದೇಶ ಕಂಡ ಈ ಅಪ್ರತಿಮ ದಂಪತಿ ವೀಕೆಂಡ್ ವಿಥ್​ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈಗ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ಬರಲು ತಯಾರಿ ನಡೆಸಲಾಗುತ್ತಿದೆ.

ಐಟಿ ಕ್ಷೇತ್ರ ಅಲ್ಲದೆ ಸಮಾಜದಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿರುವ ಈ ದಂಪತಿ ಪಾತ್ರ ಯಾರು ಮಾಡ್ತಾರೆ ಎನ್ನುವುದು ಈಗ ಚರ್ಚೆಯಾಗುತ್ತಿದೆ. 2020ರಲ್ಲಿ ಈ ಚಿತ್ರ ಚಿತ್ರೀಕರಣ ಪ್ರಾರಂಭಿಸಿ, ಅದೇ ವರ್ಷ ಬಿಡುಗಡೆ ಸಹ ಮಾಡುವ ಲೆಕ್ಕಾಚಾರವಿದೆ. ಚಿತ್ರಕರ್ಮಿ ಸಂಜಯ್ ತ್ರಿಪಾಠಿ ಅವರು ಎನ್. ಆರ್ ನಾರಾಯಣ ಮೂರ್ತಿ ಅವರ ಜೀವನಗಾಥೆ ಕುರಿತ ಚಿತ್ರದ ಕಥೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಸಿನಿಮಾ ಯಾವ ಭಾಷೆಯಲ್ಲಿ ಸಿದ್ಧವಾಗಲಿದೆ ಎಂಬುದು ಇನ್ನೂ ಅಂತಿಮವಾಗಿಲ್ಲ.

ಇನ್ಫೋಸಿಸ್ ದಂಪತಿಗಳ ಕುರಿತು ಸಿನಿಮಾ

ಇದು ಒಂದು ರೀತಿಯಲ್ಲಿ ಬಯೋಪಿಕ್. ವೀಕ್ ಎಂಡ್ ವಿತ್ ರಮೇಶ್ ಅಲ್ಲಿ ದೇಶ ಕಂಡ ಅಪ್ರತಿಮ ಇನ್ಫೋಸಿಸ್ ದಂಪತಿ ಕಾಣಿಸಿಕೊಂಡರೊ ಅವರ ಜನಪ್ರಿಯತೆ ಮತ್ತಷ್ಟು ಹಿಗ್ಗಿ ಈಗ  ಶ್ರೀ ನಾರಾಯಣ ಮೂರ್ತಿ ಹಾಗೂ ಸುಧ ಮೂರ್ತಿ ಅವರ ಜೀವನ ಚರಿತ್ರೆಯೇ ಸಿನಿಮಾ ರೂಪದಲ್ಲಿ ಬರಲು ತಯಾರಿ ನಡೆಸಲಾಗುತ್ತಿದೆ.

ಬಾಲೀವುಡ್ ಅಶ್ವಿನಿ ಅಯ್ಯರ್ ತಿವಾರಿ ಬರೇಲಿ ಕಿ ಬರ್ಫಿ ಇಂದ ಯಶಸ್ಸು ಕಂಡವರು ಸಧ್ಯಕ್ಕೆ ಪಂಗಾ ಕಂಗನಾ ರಾಣವತ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದಾದ ನಂತರ ಕೈಗೆತ್ತಿಕೊಳ್ಳುವ ಕರ್ನಾಟಕದ ಹೆಮ್ಮೆಯ ದಂಪತಿ ಇನ್ಫೋಸಿಸ್ ನಾರಾಯಣಮೂರ್ತಿ ಹಾಗೂ ಸುಧ ಮೂರ್ತಿ ಸಿನಿಮಾಕ್ಕೆ ನಿರ್ದೇಶಕಿ ಅಶ್ವಿನಿ ಅವರ ಪತಿ ನಿತಿಶ್ ತಿವಾರಿ ಹಾಗೂ ಮಹಾವೀರ್ ಜೈನ್ ಹಣ ಹೂಡಲಿದ್ದಾರೆ.

ಐ ಟಿ ಕ್ಷೇತ್ರ ಅಲ್ಲದ ಸಮಾಜದಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಾ ಪಂಡಿರುವ ಈ ದಂಪತಿಗಳ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ಈಗ ಚರ್ಚೆ ಮಾಡಲಾಗುತ್ತಿದೆ. 2020 ರಲ್ಲಿ ಈ ಚಿತ್ರ ಚಿತ್ರೀಕರಣ ಪ್ರಾರಂಭ ಆಗಿ ಅದೇ ವರ್ಷ ಬಿಡುಗಡೆ ಸಹ ಮಾಡಬೇಕು ಅಂತ ಲೆಕ್ಕ ಹಾಕಲಾಗುತ್ತಿದೆ.

ಸಂಜಯ್ ತ್ರಿಪಾತಿ ಈ ಚಿತ್ರಕ್ಕೆ ಚಿತ್ರಕಥೆ ರಚಿಸಲಿದ್ದಾರೆ. ಇನ್ಫೋಸಿಸ್ ದಂಪತಿಗಳಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಒಪ್ಪಿಗೆ ಈ ಸಿನಿಮಾ ಮಾಡಲು ಸಿಕ್ಕಿದೆ ಎಂಬ ವಿಚಾರ ಸಹ ತಿಳಿದು ಬಂದಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.