ಬೆಂಗಳೂರು:ಕೊರೊನಾ ಭೀತಿಯಿಂದ ಇಡೀ ದೇಶವೇ ಸಂಕಷ್ಟಕ್ಕೆ ಸಿಲುಕಿದ್ದು, ಕನ್ನಡ ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ.
ಸಿನಿ ಕಾರ್ಮಿಕರು, ಸಣ್ಣ ಪುಟ್ಟ ಕಲಾವಿದರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ರೀತಿ ಕೆಲವು ನಿರ್ಮಾಪಕರು ಕೂಡ ಕೊರೊನಾ ಕಾಟದಿಂದ ಅರ್ಥಿಕವಾಗಿ ಸಮಸ್ಯೆ ಎದುರಿಸುವಂತಾಗಿದೆ. ಸಂಕಷ್ಟದಲ್ಲಿರುವ ನಿರ್ಮಾಪಕರಿಗೆ ವಾಣಿಜ್ಯ ಮಂಡಳಿ ನೆರವು ನೀಡಬೇಕು ಎಂಬ ಮಾತು ನಿರ್ಮಾಪಕರ ವಲಯದಲ್ಲಿ ಕೇಳಿ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಫಿಲ್ಮ್ ಚೇಂಬರ್ ಈ ಮನವಿಗೆ ಸ್ಪಂದಿಸಿದೆ.
ವಾಣಿಜ್ಯ ಮಂಡಳಿಯ ಮೂರು ವಲಯದ ಸದಸ್ಯರುಗಳು, ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರನ್ನೊಳಗೊಂಡಂತೆ ಸಭೆಯನ್ನು ನಡೆಸಿ ನಿರ್ಮಾಪಕರಿಗೆ ನೆರವು ನೀಡಲು ತೀರ್ಮಾನಿಸಿದೆ. ವಾಣಿಜ್ಯ ಮಂಡಳಿಯಲ್ಲಿ ಸಕ್ರಿಯವಾಗಿರುವ ಸುಮಾರು 1500 ನಿರ್ಮಾಪಕರಿಗೆ ತಲಾ 15,000 ನೆರವು ನೀಡಲು ಸಭೆಯಲ್ಲಿ ತಿರ್ಮಾನಿಸಲಾಗಿದೆ.
ಅವಶ್ಯಕತೆ ಇರುವ ನಿರ್ಮಾಪಕರು ವಾಣಿಜ್ಯ ಮಂಡಳಿ ನೆರವು ಪಡೆಯಬಹುದಾಗಿದೆ ಎಂದು ವಾಣಿಜ್ಯ ಮಂಡಳಿ ಉಪಾಧ್ಯಕ್ಷ. ಉಮೇಶ್ ಬಣಕಾರ್ ಈಟಿವಿ ಭಾರತ್ ಮೂಲಕ ನಿರ್ಮಾಪಕರಿಗೆ ತಿಳಿಸಿದ್ದಾರೆ.