ETV Bharat / sitara

ಫ್ಯಾಷನ್ ಪೆಜೆಂಟ್ ಸೌತ್ ಇಂಡಿಯಾ ಆಡಿಷನ್ ; ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ರೋರಿಂಗ್ ಸ್ಟಾರ್ ಶ್ರೀಮುರಳಿ - ಮಿಸಸ್ ಸೌತ್ ಇಂಡಿಯಾ ಆಡಿಷನ್‌ನಲ್ಲಿ ನಟ ಶ್ರೀಮುರಳಿ ಭಾಗಿ

Fashion Pageant of South India : ಸುಧಾ ವೆಂಚರ್ಸ್ ಕಂಪನಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮಿಸ್, ಮಿಸ್ಟರ್, ಮಿಸಸ್ ಸೌತ್ ಇಂಡಿಯಾಗೆ ಗ್ರ್ಯಾಂಡ್ ಆಡಿಷನ್ ಕಾರ್ಯಕ್ರಮದಲ್ಲಿ ರೋರಿಂಗ್ ಸ್ಟಾರ್‌ ಶ್ರೀಮುರಳಿ ಭಾಗವಹಿಸಿದ್ದು, ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಸ್ಪರ್ಧಿಗಳನ್ನು ಹುರಿದುಂಬಿಸಿದ್ದಾರೆ..

Fashion Pageant South India Audition; actor  Sreemurali stepping on the ramp
ಫ್ಯಾಷನ್ ಪೆಜೆಂಟ್ ಸೌತ್ ಇಂಡಿಯಾ ಆಡಿಷನ್;ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ರೋರಿಂಗ್ ಸ್ಟಾರ್ ಶ್ರೀಮುರಳಿ
author img

By

Published : Nov 30, 2021, 3:47 PM IST

ಬೆಂಗಳೂರು : ಫ್ಯಾಷನ್ ಪೆಜೆಂಟ್‌ ಗೆಲ್ಲುವುದು ಪ್ರತಿಯೊಬ್ಬ ಮಹತ್ವಾಕಾಂಕ್ಷಿ ಮಾಡೆಲ್‌ಗಳ ಕನಸು. ಪೆಜೆಂಟ್‌ಗಳಲ್ಲಿ ಭಾಗವಹಿಸಿದವರು, ವಿನ್ನರ್ ಪಟ್ಟ ಗಳಿಸಿಕೊಂಡವರು ಉನ್ನತ ಸ್ಥಾನಕ್ಕೇರಿದ್ದಾರೆ. ಇದೀಗ ನಗರದಲ್ಲಿ ಮಿಸ್, ಮಿಸ್ಟರ್, ಮಿಸಸ್ ಸೌತ್ ಇಂಡಿಯಾಗೆ ಆಡಿಷನ್ ನಡೆಯುತ್ತಿದೆ. ಇದಕ್ಕೆ ಉತ್ತಮವಾದ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ಸುಧಾ ವೆಂಚರ್ಸ್ ಕಂಪನಿ ನಗರದ ರಾಜ್‌ಕುಮಾರ್ ರಸ್ತೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಆಸಕ್ತ ಯುವಕರಿಗೆ ಸೌತ್ ಇಂಡಿಯಾ ಇಂಟರ್‌ ನ್ಯಾಷನಲ್‌ ಬ್ಯೂಟಿ ಪೆಜೆಂಟ್ ವೇದಿಕೆ ನಿರ್ಮಿಸಿ ಮಿಸ್, ಮಿಸ್ಟರ್, ಮಿಸಸ್ ಸೌತ್ ಇಂಡಿಯಾಗೆ ಗ್ರ್ಯಾಂಡ್ ಆಡಿಷನ್ ಮೂಲಕ ಸ್ಪರ್ಧಿಗಳ ಹುಡುಕಾಟ ನಡೆಸುತ್ತಿದೆ.

ಸೌತ್ ಇಂಡಿಯಾದ ಎಲ್ಲಾ ಭಾಗಗಳಲ್ಲೂ ಆಡಿಷನ್ : ದಕ್ಷಿಣ ಭಾರತದ ಈ ಟಾಪ್ ಬ್ಯೂಟಿ ಪೆಜೆಂಟ್‌ಗೆ ಸೌತ್ ಇಂಡಿಯಾದ ಎಲ್ಲಾ ಭಾಗಗಳಲ್ಲೂ ಆಡಿಷನ್ ನಡೆಯುತ್ತಿದೆ. ಬೆಂಗಳೂರಿನಲ್ಲಿ ಆಡಿಷನ್ ನಡೆಸಲಾಗುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಬಂದ ಸ್ಪರ್ಧಾಕಾಂಕ್ಷಿಗಳು ರ‍್ಯಾಂಪ್ ಮೇಲೆ ವಾಕ್ ಮಾಡಿ ತಮ್ಮ ಪ್ರತಿಭೆ ಹೊರ ಹಾಕುತ್ತಿದ್ದಾರೆ ಎಂದು ಸ್ಯಾಂಡಲ್‌ವುಡ್‌ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳಿದ್ದಾರೆ.

ಆಡಿಷನ್‌ನಲ್ಲಿ ನೂರಾರು ಆಕಾಂಕ್ಷಿಗಳು ಭಾಗಿ : ಸುಧಾ ವೆಂಚರ್ಸ್‌ನ ಈ ಡ್ರೀಮ್ ಪ್ರಾಜೆಕ್ಟ್ ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಡಲಾಗುತ್ತಿದೆ. ಈ ಮೂಲಕ ಫ್ಯಾಷನ್ ಪ್ರಪಂಚಕ್ಕೆ ಹಲವಾರು ಪ್ರತಿಭೆಗಳನ್ನ ನೀಡಿದೆ‌. ಮದುವೆಯಾಗಿದ್ದವರು ಸಹ ಮಿಸಸ್ ವಿಭಾಗದಲ್ಲಿ ಸ್ಪರ್ಧಿಸಬಹುದು.

ಮಿಸ್ಟರ್ಸ್‌ಗಳಿಗೂ ವೇದಿಕೆ ಸೃಷ್ಟಿಸಲಾಗಿದೆ. ದಕ್ಷಿಣ ಭಾರತದ ನಗರ ಪ್ರದೇಶಗಳಿಂದ ಮಾತ್ರವಲ್ಲ ಗ್ರಾಮಗಳಿಂದ, ಸಣ್ಣ ಪಟ್ಟಣಗಳಿಂದ ಮಹತ್ವಾಕಾಂಕ್ಷಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಸದ್ಯ ಬೆಂಗಳೂರಿನ ಆಡಿಷನಲ್ಲೇ ನೂರಾರು ಸಂಖ್ಯೆಯಲ್ಲಿ ಆಕಾಂಕ್ಷಿಗಳು ಭಾಗಿಯಾಗಿದ್ದಾರೆ ಎಂದು ಮಿಸಸ್ ಯೂನಿವರ್ಸ್ ಆಯೋಜಕರಾದ ಎಂ ಸುಧಾ ಹೇಳಿದ್ದಾರೆ.

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲು ಆಡಿಷನ್ ನಡೆಸಲಾಗತ್ತೆ. ಈ ವೇದಿಕೆಯಲ್ಲಿ ಸಾವಿರಾರು ಮಂದಿ ತಮ್ಮ ಕನಸುಗಳ ಸಾಕಾರಕ್ಕೆ ಪ್ರಯತ್ನಿಸುತ್ತಾರೆ. ಆಡಿಷನ್ ಪೂರ್ಣಗೊಂಡ ಮೇಲೆ ಫೈನಲ್ ಶೋ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಆ ನಂತರ ಸೌತ್ ಇಂಡಿಯಾದ ಪ್ರತಿಷ್ಠಿತ ಪೆಜೆಂಟ್ ಜರ್ನಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ರ‍್ಯಾಂಪ್ ಮೇಲೆ ಶ್ರೀಮುರಳಿ ಹೆಜ್ಜೆ : ಮದಗಜ ನಟ ಶ್ರೀಮುರಳಿ, ಮಿಸಸ್ ಯೂನಿವರ್ಸ್ ಆಯೋಜಕಿ ಎಂ.ಸುಧಾ, ನಿರ್ಮಾಪಕ ಉಮಾಪತಿ ಗೌಡ, ಬ್ಯುಸಿನೆಸ್ ಐಕಾನ್ ದೀಪಕ್ ಗೌಡ ಆಡಿಷನ್‌ನಲ್ಲಿ ಭಾಗಿಯಾಗಿ ಸ್ಪರ್ಧಿಗಳಲ್ಲಿ ಹುರುಪು ತುಂಬಿದ್ದರು. ಜೊತೆಗೆ ಶ್ರೀಮುರಳಿ ಸಹ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

actor  Sreemurali stepping on the ramp
ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ರೋರಿಂಗ್ ಸ್ಟಾರ್ ಶ್ರೀಮುರಳಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.