ಹೈದರಾಬಾದ್: ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಸಮಂತಾ ಅಕ್ಕಿನೇನಿ ಹಾಗೂ ನಟ ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಾಲ್ಕು ವರ್ಷಗಳು ಕಳೆದಿದ್ದು, ಸುಖ ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲ ಸಮಯದಿಂದ ಪತಿ - ಪತ್ನಿಯ ನಡುವೆ ಬಿರುಕು ಮೂಡಿದ್ದು, ಡಿವೋರ್ಸ್ ನೀಡಲಿದ್ದಾರೆ ಎಂಬ ಊಹಾಪೋಹಾಗಳು ಹರಿದಾಡುತ್ತಿದೆ. ಇದರ ಬಗ್ಗೆ ಕೇಳಿದ ವರದಿಗಾರನ ಪ್ರಶ್ನೆಗೆ ಸ್ಯಾಮ್ ಸಿಟ್ಟಾಗಿದ್ದು, ವಿಡಿಯೋ ವೈರಲ್ ಆಗಿದೆ.
-
Sam really proud of you!! Some people don’t understand what to ask when .. Just loved that reply of yours !@Samanthaprabhu2
— Multi Fandom (@multifandom5928) September 18, 2021 " class="align-text-top noRightClick twitterSection" data="
.
.#SamanthaAkkineni #SamanthaRuthPrabhu #Samantha pic.twitter.com/5RUO5bbhbz
">Sam really proud of you!! Some people don’t understand what to ask when .. Just loved that reply of yours !@Samanthaprabhu2
— Multi Fandom (@multifandom5928) September 18, 2021
.
.#SamanthaAkkineni #SamanthaRuthPrabhu #Samantha pic.twitter.com/5RUO5bbhbzSam really proud of you!! Some people don’t understand what to ask when .. Just loved that reply of yours !@Samanthaprabhu2
— Multi Fandom (@multifandom5928) September 18, 2021
.
.#SamanthaAkkineni #SamanthaRuthPrabhu #Samantha pic.twitter.com/5RUO5bbhbz
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಮಂತಾ ತೆರಳಿದ್ದ ವೇಳೆ ವರದಿಗಾರನೊಬ್ಬ "ನೀವು ಹಾಗೂ ನಾಗ ಚೈತನ್ಯ ದೂರಾಗುವ ಕುರಿತು ವದಂತಿ ಹರಡುತ್ತಿದೆ. ಇದರ ಬಗ್ಗೆ ನೀವೇನಂತೀರಾ" ಎಂದು ಕೇಳಿದ್ದಾನೆ. ಇದಕ್ಕೆ ಸಮಂತಾ, ತೆಲುಗಿನಲ್ಲಿ "ಗುಡಿಕಿ ವಚ್ಚಾನು. ಬುದ್ಧಿ ಉಂದಾ?" (ದೇವಸ್ಥಾನಕ್ಕೆ ಬಂದಿದೀನಿ. ಬುದ್ಧಿ ಇದೆಯಾ) ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಯಾಮ್ ಅಭಿಮಾನಿಗಳು ಹಂಚಿಕೊಂಡಿದ್ದು, ನಟಿಯ ಉತ್ತರಕ್ಕೆ ಅವರನ್ನು ಶ್ಲಾಘಿಸಿದ್ದು, ಮಾಧ್ಯಮದವರ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಇದನ್ನೂ ಓದಿ: IFFM ಚಲನಚಿತ್ರೋತ್ಸವ; ಸೂರ್ಯ, ವಿದ್ಯಾ ಬಾಲನ್, ಮನೋಜ್ ಬಾಜಪೇಯಿ, ಸಮಂತಾ ಅಮೋಘ ಅಭಿನಯಕ್ಕೆ ಪ್ರಶಸ್ತಿ
ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ಅವರನ್ನು ಮದುವೆಯಾದ ಬಳಿಕ ತಮ್ಮ ಹೆಸರನ್ನು ಸಮಂತಾ ಅಕ್ಕಿನೇನಿ ಎಂದು ಬದಲಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಮಂತಾ ಅಕ್ಕಿನೇನಿ ಎಂದೇ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದರು.
ಇದ್ದಕ್ಕಿದ್ದಂತೆ ತಮ್ಮ ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ಖಾತೆಯಿಂದ 'ಸಮಂತಾ' ಹಾಗೂ 'ಅಕ್ಕಿನೇನಿ' ಎರಡೂ ಹೆಸರುಗಳನ್ನು ತೆಗೆದು ಹಾಕಿ ಕೇವಲ 'S' ಎಂಬುದನ್ನು ಮಾತ್ರ ಅವರು ಉಳಿಸಿಕೊಂಡಿದ್ದಾರೆ. ಈ ಬಳಿಕ ಸಮಂತಾ ಹಾಗೂ ಚೈತನ್ಯ ನಡುವೆ ಬಿರುಕು ಬಿಟ್ಟಿದೆ ಎಂಬ ಗಾಳಿ ಸುದ್ದಿ ಹರಿದಾಡತೊಡಗಿತ್ತು.
ಇತ್ತೀಚೆಗೆ ಬಿಡುಗಡೆಯಾಗಿದ್ದ 'ಫ್ಯಾಮಿಲಿ ಮ್ಯಾನ್ 2' ವೆಬ್ಸೀರಿಸ್ನಲ್ಲಿನ ನಟನೆಯಿಂದಾಗಿ ದೇಶಾದ್ಯಂತ ಪ್ರೇಕ್ಷಕರ ಮನಗೆದ್ದಿದ್ದ ಸಮಂತಾ, 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.