ಟಾಲಿವುಡ್ ನಟ ಪ್ರಭಾಸ್ ಇಟಲಿಯಲ್ಲಿ 'ರಾಧೇಶ್ಯಾಮ್' ಚಿತ್ರೀಕರಣ ಮುಗಿಸಿ ಹೈದರಾಬಾದ್ಗೆ ವಾಪಸ್ಸಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಅವರು 'ಆದಿಪುರುಷ್' ಚಿತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾ ಆರಂಭವಾಗುವ ಮುನ್ನವೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಸಖತ್ ವೈರಲ್ ಆಗಿದೆ.
-
This is stunning. More power to you @PrabhasCentral.#Adipurush #Prabhas https://t.co/8Gqzy5cQBO
— Om Raut (@omraut) November 9, 2020 " class="align-text-top noRightClick twitterSection" data="
">This is stunning. More power to you @PrabhasCentral.#Adipurush #Prabhas https://t.co/8Gqzy5cQBO
— Om Raut (@omraut) November 9, 2020This is stunning. More power to you @PrabhasCentral.#Adipurush #Prabhas https://t.co/8Gqzy5cQBO
— Om Raut (@omraut) November 9, 2020
ಇದೇನಪ್ಪಾ ಸಿನಿಮಾ ಕೆಲಸಗಳು ಇನ್ನೂ ಆರಂಭವಾಗುತ್ತಿರುವಾಗಲೇ ಪ್ರಭಾಸ್ ಫಸ್ಟ್ಲುಕ್ ಬಿಡುಗಡೆ ಮಾಡಿಬಿಟ್ರಾ ಎಂದುಕೊಳ್ಳಬೇಡಿ. ಇದು ಫ್ಯಾನ್ ಮೇಡ್ ಪೋಸ್ಟರ್. ಪ್ರಭಾಸ್ ಅಭಿಮಾನಿಯೊಬ್ಬರು ಪ್ರೀತಿಯಿಂದ ತಯಾರಿಸಿರುವ ಪೋಸ್ಟರ್. ಈ ಪೋಸ್ಟರ್ ನೋಡಿ ಇಡೀ ಚಿತ್ರತಂಡವೇ ಶಾಕ್ ಆಗಿದೆ. 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಭಾಸ್ ಅಭಿಮಾನಿಯೊಬ್ಬರು ಪ್ರಭಾಸ್, ರಾಮನ ಲುಕ್ನಲ್ಲಿ ನಿಂತಿರುವ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಪೋಸ್ಟರ್ ಡಿಸೈನ್ ಮಾಡಿ ಅಭಿಮಾನಿ ''ಮೊದಲ ಬಾರಿ ಎಡಿಟ್ ಮಾಡಿದ್ದೇನೆ ಹೇಗಿದೆ ಡಾರ್ಲಿಂಗ್..?'' ಎಂದು ಕೇಳಿ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟರ್ ನೋಡಿದ ಆದಿಪುರುಷ್ ನಿರ್ದೇಶಕ ಓಂ ರೌತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.