ಕನ್ನಡದ ಕಿರುತೆರೆ ನಟಿ ಮೀನಾಕ್ಷಿ ಅನುರಾಧ ಇಂದು ಆಂಧ್ರ ಪ್ರದೇಶದ ಮಂತ್ರಾಲಯ ದೇವಾಲಕ್ಕೆ ಭೇಟಿ ನೀಡಿದ್ದಾರೆ.
ಕರ್ನೂಲ್ ಜಿಲ್ಲೆಯಲ್ಲಿರುವ ಗುರು ರಾಘವೇಂದ್ರ ಸನ್ನಿಧಿಗೆ ಭೇಟಿ ಕೊಟ್ಟ ನಟಿ, ಕುಂಕುಮಾರ್ಚನೆ ಮಾಡಿಸಿದ್ದಾರೆ. ನಂತರ ರಾಘವೇಂದ್ರ ಸ್ವಾಮಿ ಮೂಲ ಬೃಂದಾವನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ನಟಿ ಮೀನಾಕ್ಷಿ ಕನ್ನಡದ ಪುಟ್ಟಗೌರಿ ಧಾರಾವಾಹಿಯ ಮೂಲಕ ಎಲ್ಲರಿಗೂ ಚಿರಪರಿಚಿತ.