ಹೈದರಾಬಾದ್: ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ನ ಮುಂದುವರಿದ ಭಾಗದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ.
ನಟ ಮನೋಜ್ ಬಾಜ್ಪಾಯಿ ಮತ್ತು ಆತನ ಹೆಂಡ್ತಿ ಪಾತ್ರದಲ್ಲಿ ಕಾಣಿಸಿಕೊಂಡ ಕನ್ನಡತಿ ಪ್ರಿಯಾಮಣಿ ಹಾಗೂ ಉಗ್ರರ ಪಾತ್ರದಲ್ಲಿ ಮಿಂಚಿದ ನಟಿ ಸಮಂತಾ ನಟನೆ ಸೂಪರ್ ಆಗಿ ಮೂಡಿ ಬಂದಿದೆ. ಈ ಸೀರಿಸ್ನ ಮುಂದುವರಿದ ಭಾಗ ಜೂನ್ 4ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ.
- " class="align-text-top noRightClick twitterSection" data="">
ಮನೋಜ್ ಬಾಜ್ಪಾಯಿ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ‘ದಿ ಫ್ಯಾಮಿಲಿ ಮ್ಯಾನ್’ ಮೊದಲ ಭಾಗ ಅಭಿಮಾನಿಗಳನ್ನು ಮುದಗೊಳಿಸಿತ್ತು. ಶ್ರೀಕಾಂತ್ ತಿವಾರಿ ಆಗಿ ಮನೋಜ್ ಪಾತ್ರ ವಿಶೇಷವಾಗಿ ಎಲ್ಲರ ಗಮನ ಸೆಳೆದಿತ್ತು. ಮೊದಲ ಸಿರೀಸ್ ಕೊಟ್ಟ ವಿಜಯೋತ್ಸವದಿಂದಾಗಿ ‘ದಿ ಫ್ಯಾಮಿಲಿ ಮ್ಯಾನ್’ನ ಎರಡನೇ ಭಾಗ ಬಿಟ್ಟಿದ್ದಾರೆ.
ಈ ಸಿರೀಸ್ನ 2ನೇ ಭಾಗ ಫೆಬ್ರುವರಿ 12ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡಬೇಕೆಂದು ಚಿತ್ರವೃಂದ ಆಲೋಚಿಸಿತ್ತು. ಆದ್ರೆ ಅನೇಕ ಕಾರಣಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಈಗ ವೆಬ್ ಸಿರೀಸ್ ಟ್ರೈಲರ್ ಜೊತೆ ಬಿಡುಗಡೆ ದಿನಾಂಕವನ್ನು ಪ್ರಕಟಿಸಿರುವುದರಿಂದ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷ್ ಆಗಿದ್ದಾರೆ.
ಇದನ್ನೂ ಓದಿ: ಕೇರಳ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ಬಗ್ಗೆ ‘ಮಿಲನ’ ಬೆಡಗಿ ಗರಂ