ETV Bharat / sitara

ಉಪೇಂದ್ರ ಹೆಸರು ಹಾಳು ಮಾಡಲು ಕಿಡಿಗೇಡಿಗಳಿಂದ ಸಂಚು - ಪ್ರಜಾಕೀಯ ಪಕ್ಷದ ಸೋಷಿಯಲ್ ಮೀಡಿಯಾ

ಕಿಡಿಗೇಡಿಗಳು ನಟ ಉಪೇಂದ್ರ ಧ್ವನಿಯಲ್ಲಿ ಮಾತನಾಡಿ ಅವ್ರ ಹೆಸರಲ್ಲಿ ಮೊಬೈಲ್ ಸಿಮ್ ಕಾರ್ಡ್ ಪಡೆಯುವ ಪ್ರಯತ್ನ ಮಾಡಿದ್ದಾರೆ.

fake audio in  actor upendra voice
ಉಪೇಂದ್ರ
author img

By

Published : Jul 27, 2021, 10:32 PM IST

ಸಿನಿಮಾ ತಾರೆಯರ ಹೆಸರಲ್ಲಿ ಫೇಕ್ ಅಕೌಂಟ್, ಫೇಕ್ ಐಡಿಗಳನ್ನು ಕ್ರಿಯೇಟ್ ಮಾಡಿ, ಅವ್ರ ಹೆಸರು ಹಾಳು ಮಾಡುವ ಪ್ರಕರಣಗಳು ವರದಿಯಾಗ್ತಿರುತ್ತವೆ. ಇದೀಗ ಸ್ಯಾಂಡಲ್​ ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಹೆಸರು ಹಾಳು ಮಾಡಲು ಯಾರೋ ಕಿಡಿಗೇಡಿಗಳು ಮುಂದಾಗಿದ್ದಾರೆ.

fake audio in  actor upendra voice
ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರರವರ ಧ್ವನಿ ಅನುಕರಣೆ ಮಾಡಿ, ಸಿಮ್ ಕಾರ್ಡ್ ಪಡೆಯುವ ಪ್ರಯತ್ನ ನಡೆದಿದೆ. ಆದರೆ ಉಪೇಂದ್ರ ಕಟ್ಟಿರುವ ಪ್ರಜಾಕೀಯ ಪಕ್ಷದ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿರುವ ಪ್ರಸನ್ನ ಅವರು ಹೇಳುವ ಪ್ರಕಾರ ಇದು ಉಪೇಂದ್ರ ಅವರ ಧ್ವನಿ ಅಲ್ಲಾ, ಯಾರೋ ಕಿಡಿಗೇಡಿಗಳು ಉಪೇಂದ್ರ ಧ್ವನಿಯಲ್ಲಿ, ಮಾತನಾಡಿ ಅವ್ರ ಹೆಸರಲ್ಲಿ ಮೊಬೈಲ್ ಸಿಮ್ ಕಾರ್ಡ್ ಪಡೆಯುವ ಪ್ರಯತ್ನ ಮಾಡಿದ್ದಾರೆ. ದಯವಿಟ್ಟು ಯಾರು,ಇಂತಹ ಯಾವುದೇ ಸಂದರ್ಭಗಳಲ್ಲಿ ನೇರವಾಗಿ ಉಪೇಂದ್ರ ಅವರನ್ನು ಭೇಟಿಯಾಗಿ ಖಚಿತಪಡಿಸಿಕೊಳ್ಳಿ ಅಂತಾ ಹೇಳಿದ್ದಾರೆ.

ಇನ್ನು ಉಪೇಂದ್ರರವರ ಹೆಸರನ್ನು ಬಳಸಿಕೊಂಡು ಇಂತಹ ದುರುದ್ದೇಶವುಳ್ಳ ವ್ಯಕ್ತಿಗಳು, ನಿಮ್ಮ ಸಂಪರ್ಕಕ್ಕೆ ಬಂದಲ್ಲಿ ಅಥವಾ ಬಂದಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಪೊಲೀಸ್​ ಸ್ಟೇಷನ್​ನಲ್ಲಿ ದೂರು ದಾಖಲಿಸಿ ಅಂತಾ ಪ್ರಜಾಕೀಯದಲ್ಲಿ ತೊಡಗಿಸಿಕೊಂಡಿರುವ ಪ್ರಸನ್ನ ಅವರು ಹೇಳಿದ್ದಾರೆ.ಈ ನಕಲಿ ಆಡಿಯೋ ಬಗ್ಗೆ ಉಪೇಂದ್ರ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.