ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಿನ್ನೆ ಸಿಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ಐಂದ್ರಿತಾ-ದಿಗಂತ್ಗೆ ಮತ್ತೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಸಾಧ್ಯತೆಗಳಿವೆ ವಿಚಾರ ಸಿಸಿಬಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ನಿನ್ನೆ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆಯೋದಾಗಿ ಸೂಚನೆ ನೀಡಿದ್ದರು. ವಿಚಾರಣೆಗೆ ಬಂದ ಗಂಡ-ಹೆಂಡತಿ ಇಬ್ಬರ ಮೊಬೈಲ್ ಸಿಸಿಬಿ ವಶಕ್ಕೆ ಪಡೆದಿದು ಎಫ್ಎಸ್ಎಲ್ಗೆ ರಿಟ್ರೇವ್ಗಾಗಿ ಕಳುಹಿಸಿದೆ.
ಆದರೆ ಪ್ರಾಥಮಿಕ ತನಿಖೆ ವೇಳೆ ಇಬ್ಬರು ವಾಟ್ಸಪ್ ಕ್ಲಿಯರ್ ಚಾಟ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಮೊಬೈಲ್ ರಿಟ್ರೇವ್ ಆದ ನಂತರ ಮತ್ತೊಮ್ಮೆ ದಿಂಗತ್-ಐದ್ರಿಂತಾಗೆ ಸಿಸಿಬಿ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಿದ್ದಾರೆ. ಮತ್ತೊಂದೆಡೆ ಗಂಡ-ಹೆಂಡತಿ ಇಬ್ಬರೂ ತನಿಖಾಧಿಕಾರಿಗಳ ಎದುರು ದ್ವಂದ್ವ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಸದ್ಯ ಸಿಸಿಬಿ ಬಂಧನದಿಂದ ಬಚಾವಾಗಿದ್ದರೂ ಎನ್ಸಿಬಿಯಿಂದ ಕಂಟಕ ಕಾದಿದೆ ಎನ್ನಲಾಗುತ್ತಿದೆ. ಸಿಸಿಬಿಗಿಂತ ಎನ್ಸಿಬಿ ಅಧಿಕಾರಿಗಳು ಐಂದ್ರಿತಾ-ದಿಗಂತ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಐಂದ್ರಿತಾ-ದಿಗಂತ್ ವಿರುದ್ಧ ಆರೋಪಗಳ ಸಾಕ್ಷ್ಯಧಾರ ಕಲೆಹಾಕ್ತಿದ್ದಾರೆ ಎಂದು ತಿಳಿದು ಬಂದಿದೆ.