ಈ ಹಿಂದೆ ಬಡ್ಡಿಮಗನ್ ಲೈಫು ಸಿನಿಮಾದ ಏನ್ ಚಂದನೊ ತಕ್ಕೋ ಹಾಡು ಸಖತ್ ಸುದ್ದಿಯಾಗಿ, ಕೆಲ ಆರೋಪಗಳೂ ಕೇಳಿ ಬಂದಿದ್ವು. ಈ ಹಾಡಿನ ಗಾಯಕ ನವೀನ್ ಸಜ್ಜು ವಿರುದ್ಧವೂ ಆರೋಪಗಳು ಕೇಳಿ ಬಂದಿದ್ವು. ಇದಕ್ಕೆ ಕಾರಣ ಹಾಡಿನಲ್ಲಿ ಒಂದು ಸಮುದಾಯವನ್ನು ಕೀಳಾಗಿ ಬಿಂಬಿಸಲಾಗಿದೆ ಎನ್ನುವುದು.
ಹೌದು, ನಿನಗಾಗಿ ವೀರು ಬರೆದಿರುವ ಈ ಹಾಡಿನ ಮೊದಲಿಗೆ 'ಆ ದೊಡ್ಮನೆ ಗೌಡನ್ ಮಗ್ಳು ಆ ಮುಂಡ್ಲಟ್ಟಿ ಆ ಗಂಡ್ ಜೊತೆಲಿ ಓಡ್ ವಂಟೋದ್ಲಂತೆ' ಎಂಬ ಸಂಭಾಷಣೆ ಇದೆ. ಇದನ್ನು ಗಮನದಲ್ಲಿಸಿ ಫಿಲ್ಮ್ ಚೇಂಬರ್ಗೆ ದೂರನ್ನೂ ನೀಡಲಾಗಿತ್ತು. ನಂತ್ರ ಆ ಸಂಭಾಷಣೆಯಲ್ಲಿ ಗೌಡ ಎಂಬ ಪದವನ್ನು ತೆಗೆಯಲಾಗುವುದು ಅಂತ ಹೇಳಲಾಗಿತ್ತು.
ಇದೀಗ ಈ ಹಾಡಿನ ಅಫಿಷಿಯಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಯೂಟೂಬ್ನಲ್ಲಿ ಸದ್ದು ಮಾಡ್ತಿದೆ. ಈ ಹಾಡಿನಲ್ಲಿ ಗಾಯಕ ನವೀನ್ ಸಜ್ಜು ಕೂಡ ಹೆಜ್ಜೆ ಹಾಕಿದ್ದಾರೆ. ಈಗ ಬಿಡುಗಡೆಯಾಗಿರುವ ಹಾಡಿನಲ್ಲಿ ಗೌಡ ಎಂಬ ಪದ ಬಳಕೆಯಾಗಿಲ್ಲ.
ಯೂಟೂಬ್ನಲ್ಲಿ ಬಿಡುಗಡೆಯಾಗಿರುವ ಈ ಹಾಡು, ಒಂದು ಹುಡುಗಿ-ಹುಡುಗ ಲವ್ ಮಾಡಿ ಓಡೋದ್ರೆ ಅಕ್ಕ ಪಕ್ಕ ಮನೆಯ ಹೆಂಗಸರು ಅದನ್ನು ಆಡಿಕೊಳ್ಳೊ ಗಾಸಿಪ್ ಸಾಂಗ್ ಬಡ್ಡೀ ಮಗನ್ ಲೈಫು ಚಿತ್ರದ ಏನ್ ಚಂದನೊ ತಕ್ಕೋ ಎಂದು ಚಿತ್ರ ತಂಡವೇ ಬರೆದುಕೊಂಡಿದೆ.
- " class="align-text-top noRightClick twitterSection" data="">