ETV Bharat / sitara

ಬಾಲಿವುಡ್​ ಹಳೆಯ ಹಾಡುಗಳಿಗೆ ಚಮತ್ಕಾರಿ ಡ್ಯಾನ್ಸ್​​​​ ಮಾಡಿದ ನಟಿ ಎಲಿ ಅವ್ರಾಂ​... ಫ್ಯಾನ್ಸ್​​ ಫಿದಾ - Elli AvrRam latest bollywood dance video

ನಟಿ ಎಲಿ ಅವ್ರಾಮ್ ಅವರು ಬುಧವಾರ ಬಾಲಿವುಡ್​​ನ ಹಳೆಯ ಹಾಡುಗಳಿಗೆ ಮಾಡಿರುವ ಚಮತ್ಕಾರಿ ಡ್ಯಾನ್ಸ್​ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ಆಶ್ಚರ್ಯ ನೀಡಿದ್ದಾರೆ.

Elli AvrRam's freestyle jig to old Bollywood hits is a hoot!
ಋತ್ಯ ಮಾಡಿದ ಎಲಿ ಅವ್ರಾಮ್​​​
author img

By

Published : Apr 15, 2020, 6:45 PM IST

ಮುಂಬೈ: ನಿತ್ಯ ಶೂಟಿಂಗ್​​ನಲ್ಲಿ ನಿರತರಾಗುತ್ತಿದ್ದ ನಟ - ನಟಿಯರು ಕೊರೊನಾ ಕಾಟಕ್ಕೆ ಮನೆಯಲ್ಲೇ ಕೂತು ಬೇಸತ್ತು ಹೋಗಿದ್ದಾರೆ. ಕೆಲವರು ಲೈವ್​ ಬಂದು ಅಭಿಮಾನಿಗಳ ಜೊತೆ ಸಂವಹನ ನಡೆಸುತ್ತಾರೆ. ಇನ್ನೂ ಕೆಲವರು ಹಾಡುಗಳಿಗೆ ಡ್ಯಾನ್ಸ್​​ ಮಾಡಿರುವ ವಿಡಿಯೋಗಳನ್ನು ಟ್ವಿಟರ್​, ಫೇಸ್​ಬುಕ್​, ಇನ್​​​ಸ್ಟಾಗ್ರಾಂಗಳಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಾರೆ.

ಅದೇ ರೀತಿ ಸ್ವೀಡನ್​​​ ನಟಿ ಹಾಗೂ ಡ್ಯಾನ್ಸರ್​​ ಎಲಿ ಅವ್ರಾಮ್ ಅವರು ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಬಾಲಿವುಡ್​​ನ ಹಳೆಯ ಹಾಡುಗಳಿಗೆ ಹೊಸ ಶೈಲಿ ಮತ್ತು ಚಮತ್ಕಾರಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.

ಬಾಲಿವುಡ್​​ನ ಹಳೆಯ ಹಾಡುಗಳಾದ ಜಿಸ್ಕ ಮುಜೆ, ಚುರ ಲಿಯಾ ಹೈ ತುಮ್ನೆ ಜೊ ದಿಲ್ಕೊ...ಸೇರಿದಂತೆ ಇನ್ನೂ ಹಲವು ಹಳೆಯ ಹಾಡುಗಳಿಗೆ ಎಲಿ ಅವರು ಫ್ರೀಸ್ಟೈಲ್​​​ ಡ್ಯಾನ್ಸ್​ ಮಾಡಿದ್ದಾರೆ.

ಮನೆಯಲ್ಲಿ ಒಬ್ಬರೇ ಇದ್ದಾಗ ಏನು ಮಾಡುತ್ತೀರಾ? ನಾನು ಫ್ರೀಸ್ಟೈಲ್​ ಡ್ಯಾನ್ಸ್​​ ಮಾಡುತ್ತೇನೆ ಎಂದು ಕ್ಯಾಪ್ಷನ್​​ ಬರೆದುಕೊಂಡಿದ್ದಾರೆ. ವಿಡಿಯೋಗೆ ಮಾಡಿರುವ ಕಾಮೆಂಟ್​ಗಳಿಗೆ ಉತ್ತರಿಸುವ ಮೂಲಕ ಅಭಿಮಾನಿಗಳ ಜೊತೆ ಸಂವಹನ ನಡೆಸಿದ್ದಾರೆ.

ಅಭಿಮಾನಿಗಳು ಅಪಾರ ಪ್ರೀತಿ ತೋರಿಸಿದ್ದಾರೆ. ಕಾಮೆಂಟ್​ ವಿಭಾಗದಲ್ಲಿ ಅಭಿನಂದನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನಟರು ಅಭಿಮಾನಿಗಳೊಂದಿಗೆ ಸಂಹವನ ನಡೆಸಲು ಒಂಥರಾ ಖುಷಿ ಸಿಗುತ್ತೆ ಎಂದು ಕೊನೆಯಲ್ಲಿ ಹೇಳಿದ್ದಾರೆ.

ಹಳೆಯ ಹಿಂದಿ ಗೀತೆಗಳನ್ನು ಕೇಳುತ್ತೀರಾ? ನಿಮಗೆ ಹಿಂದು ಅರ್ಥವಾಗುತ್ತದೆಯೇ? ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಎಲಿ ಅವ್ರಾಮ್​ ಅವರು ಜಿ ಎಂದು ಹಿಂದಿಯಲ್ಲೇ ಉತ್ತರಿಸಿದ್ದಾರೆ.

ಕೊರೊನಾ ವೈರಸ್​ ಇನ್ನೂ ಹೀಗೆ ಇದ್ದರೆ ನೀವು ಖಂಡಿತ ಹುಚ್ಚರಾಗುತ್ತೀರಾ ಎಂದು ಮತ್ತೊಬ್ಬ ಅಭಿಮಾನಿ ಹೇಳಿದ್ದಕ್ಕೆ ಮೇ ಬಚ್ಪನ್​​ ಸೇ ಐಸೆ ಹೂನ್​ (ಚಿಕ್ಕ ವಯಸ್ಸಿನಿಂದ ನಾನು ಹೀಗೆ) ಎಂದು ಹಿಂದಿಯಲ್ಲೇ ಉತ್ತರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.