ETV Bharat / sitara

ಫೆಬ್ರವರಿಯಲ್ಲಿ ಜೋಗಿ ಪ್ರೇಮ್ 'ಏಕ್ ಲವ್ ಯಾ' ಟೀಸರ್ ದರ್ಶನ - ಫೆಬ್ರವರಿ 14 ರಂದು ಏಕ್ ಲವ್ ಯಾ ಬಿಡುಗಡೆಗೆ ದಿನಾಂಕ ನಿಗದಿ

'ಏಕ್ ಲವ್ ಯಾ' ಸಿನಿಮಾ‌ ಚಿತ್ರೀಕರಣ ಮಾಡುತ್ತಿರುವ ನಿರ್ದೇಶಕ ಪ್ರೇಮ್ ಫೆಬ್ರವರಿಗೆ ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ನಿರ್ದೇಶಕ ಪ್ರೇಮ್ ತಾವೇ ಮುಂದೆ ನಿಂತು ಬಾಮೈದನ ಕೈಲಿ ಟೀಸರ್ ಡಬ್ಬಿಂಗ್ ಮಾಡಿಸುತ್ತಿದ್ದಾರೆ.

Ek love ya
'ಏಕ್ ಲವ್ ಯಾ'
author img

By

Published : Jan 15, 2020, 9:06 PM IST

ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ನಟರಿಂದ ಹಿಡಿದು, ಹೊಸ ನಟರ ಸಿನಿಮಾಗಳ ಹೊಸ ಪೋಸ್ಟರ್​​​ಗಳು, ಟೀಸರ್ ಹಾಗೂ ಮೋಷನ್ ಪೋಸ್ಟರ್​​​​ಗಳು ರಿವೀಲ್ ಆಗಿವೆ. ಇದೀಗ ನಿರ್ದೇಶಕ ಜೋಗಿ ಪ್ರೇಮ್​ ಕೂಡಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಟೀಸರ್ ಡಬ್ಬಿಂಗ್​ನಲ್ಲಿ ಬ್ಯುಸಿಯಾಗಿರುವ ಪ್ರೇಮ್

ಪ್ರೇಮ್ ಅವರ ಬಾಮೈದ , ರಕ್ಷಿತಾ ಸಹೋದರ ಅಭಿಷೇಕ್ ರಾವ್, ರಾಣಾ ಎಂದು ಹೆಸರು ಬದಲಿಸಿಕೊಂಡು 'ಏಕ್​​ ಲವ್ ಯಾ' ಚಿತ್ರದ ಮೂಲಕ ಸ್ಯಾಂಡಲ್​ವುಡ್​​​ಗೆ ಕಾಲಿಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಊಟಿಯಲ್ಲಿ , 'ಏಕ್ ಲವ್ ಯಾ' ಸಿನಿಮಾ‌ ಚಿತ್ರೀಕರಣ ಮಾಡುತ್ತಿರುವ ನಿರ್ದೇಶಕ ಪ್ರೇಮ್ ಫೆಬ್ರವರಿಗೆ ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ನಿರ್ದೇಶಕ ಪ್ರೇಮ್ ತಾವೇ ಮುಂದೆ ನಿಂತು ಬಾಮೈದನ ಕೈಲಿ ಟೀಸರ್ ಡಬ್ಬಿಂಗ್ ಮಾಡಿಸುತ್ತಿದ್ದಾರೆ. ವೀಕ್ಷಕರಿಗೆ ಸಂಕ್ರಾಂತಿ ಶುಭಾಶಯ ಕೋರಿರುವ ರಾಣಾ, ನಮಗೆ ಇದೇ ರೀತಿ ಸಪೋರ್ಟ್ ಮಾಡಿ ಎಂದು ಸಿನಿಪ್ರಿಯರಲ್ಲಿ ಮನವಿ ಮಾಡಿದ್ದಾರೆ. ಇನ್ನು ರಾಣಾ ಜೋಡಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿದ್ದಾರೆ.

Ek love ya
ಏಕ್ ಲವ್ ಯಾ

ರಕ್ಷಿತ ಫಿಲ್ಮ್ ಫ್ಯಾಕ್ಟರ್ ಅಡಿ 'ಏಕ್ ಲವ್​ ಯಾ' ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಇದೊಂದು ಔಟ್ ಅ್ಯಂಡ್ ಔಟ್ ಲವ್ ಸ್ಟೋರಿ ಆಗಿದ್ದು, 'ದಿ ವಿಲನ್​' ನಂತರ ಪ್ರೇಮ್ ನಿರ್ದೇಶನ ಮಾಡಿರುವ ಸಿನಿಮಾ ಇದು. ಫೆಬ್ರವರಿ 14 ಪ್ರೇಮಿಗಳ ದಿನದಂದು 'ಏಕ್​​ ಲವ್​​ ಯಾ' ಟೀಸರ್ ನಿಮ್ಮ ಮುಂದೆ ಬರಲಿದೆ.

Intro:Body:ಫೆಬ್ರವರಿಯಲ್ಲಿ ಜೋಗಿ ಪ್ರೇಮ್ ಏಕ್ ಲವ್ ಯಾನ ಟೀಸರ್ ದರ್ಶನ!!

ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ನಟರಿಂದ ಹಿಡಿದು, ಹೊಸ ನಟರ ಸಿನಿಮಾಗಳ ಪೋಸ್ಟರ್ ನ್ನ ರಿವೀಲ್ ಮಾಡಿದ್ದಾರೆ..ಇದೀಗ ನಿರ್ದೇಶಕ ಜೋಗಿ ಪ್ರೇಮ್ ಏಕ್ ಲವ್ ಯಾ ಚಿತ್ರತಂಡದಿಂದ , ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ...ರಕ್ಷಿತಾ ಪ್ರೇಮ್ ಸಹೋದರ ಅಭಿಷೇಕ್ ರಾವ್ , ಹೆಸರು ಬದಲಾಯಿಸಿಕೊಂಡು, ರಾಣಾ ಆಗಿ ಏಕ್ ಲವ್ ಯಾ ಸಿನಿಮಾ ಹೀರೋ ಆಗಿ, ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಡೋದಿಕ್ಕೆ ರೆಡಿಯಾಗಿದ್ದಾರೆ..ಕಳೆದ ಒಂದು ತಿಂಗಳಿನಿಂದ ಊಟಿಯಲ್ಲಿ , ಏಕ್ ಲವ್ ಯಾ ಸಿನಿಮಾ‌ ಚಿತ್ರೀಕರಣ ಮಾಡುತ್ತಿದ್ದ, ನಿರ್ದೇಶಕ ಪ್ರೇಮ್ ಫೆಬ್ರವರಿಗೆ ತಮ್ಮ ಚಿತ್ರದ ಟೀಸರ್ ನ್ನ ರಿಲೀಸ್ ಮಾಡೋದಿಕ್ಕೆ ಪ್ಲಾನ್ ಮಾಡಿದೆ..ಹೀಗಾಗಿ ನಿರ್ದೇಶಕ ಪ್ರೇಮ್ ಸಂಕ್ರಾಂತಿ ಹಬ್ಬದೊಂದು, ಏಕ್ ಲವ್ ಯಾ ಸಿನಿಮಾದ ಟೀಸರ್ ಗಾಗಿ ಡಬ್ಬಿಂಗ್ ಮಾಡ್ತಾ ಇದ್ದಾರೆ..ಯುವ ನಟ ರಾಣಾ ತಮ್ಮ‌ ಪಾತ್ರಕ್ಕೆ ಧ್ವನಿ ನೀಡುತ್ತಿದ್ದು, ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರುವ ಮೂಲಕ ನಮಗೆ ಹೀಗೆ ಸಪೋರ್ಟ್ ಮಾಡಿ ಅಂತಾ ಕೇಳಿಕೊಂಡಿದ್ದಾರೆ..ಇನ್ನು ರಾಣಾ ಜೋಡಿಯಾಗಿ ರೀಷ್ಮಾ ನಾನಯ್ಯ ಕಾಣಿಸಿಕೊಳ್ಳಲಿದ್ದು, ರೀಷ್ಮಾ ಕೂಡ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡ್ತಾ ಇದ್ದಾರೆ.. ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ಈ ಚಿತ್ರ ನಿರ್ಮಿಸಲಾಗುತ್ತಿದೆ..ಇದೊಂದು ಔಟ್ ಅಂಡ್ ಔಟ್ ಕ್ಯೂಟ್ ಲವ್ ಸ್ಟೋರಿ ಆಗಿದ್ದು, ದಿ ವಿಲನ್‌ ಸಿನಿಮಾ ನಂತ್ರ ಪ್ರೇಮ್ ನಿರ್ದೇಶನ ಮಾಡಿದ್ದಾರೆ..ಸಂಕ್ರಾಂತಿ ಹಬ್ಬಕ್ಕೆ ಪ್ರೇಮ್ ಶುಭಾಶಯ ಹೇಳುವ ಮೂಲಕ ಪ್ರೇಮಿಗಳ ದಿನಕ್ಕೆ ಏಕ್ ಲವ್ ಯಾ ಚಿತ್ರದ ಟೀಸರ್ ಅನಾವರಣಗೊಳ್ಳಲಿದೆ‌‌..Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.