ETV Bharat / sitara

ಹಿಂದೂ ಭಯೋತ್ಪಾದನೆ ಹೇಳಿಕೆ.... ನಟ ಕಮಲ್ ಹಾಸನ್​ ಮೇಲೆ  ಮತ್ತೆ ಮೊಟ್ಟೆ,ಕಲ್ಲು ತೂರಾಟ !

ಇಬ್ಬರು ಅಪರಿಚಿತರು ವೇದಿಕೆ ಮೇಲಿದ್ದ ಕಮಲ್​ ಅವರತ್ತ ಕಲ್ಲು ಹಾಗೂ ಮೊಟ್ಟೆ ಎಸೆದಿದ್ದಾರೆ. ಪರಿಣಾಮ ಸ್ಥಳದಲ್ಲಿ ಕ್ಷೋಭೆಯುಂಟಾಗಿದೆ.

author img

By

Published : May 18, 2019, 1:20 PM IST

ಚಿತ್ರಕೃಪೆ : ಇನ್​ಸ್ಟಾಗ್ರಾಂ

ಚೆನ್ನೈ : ಮಕ್ಕಳ್​ ನಿಧಿ ಮಯ್ಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್​ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಿರುವ ಘಟನೆ ತಮಿಳುನಾಡಿನ ಕರೂರ್​​ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಅರವಕುರುಚಿ ಎಂಬಲ್ಲಿ ಗುರುವಾರ ಸಾಯಂಕಾಲ ಕಮಲ್ ಹಾಸನ್​ ಬಹಿರಂಗ ಪ್ರಚಾರ ನಡೆಸುತ್ತಿದ್ದರು. ಈ ವೇಳೆ, ಇಬ್ಬರು ಅಪರಿಚಿತರು ವೇದಿಕೆ ಮೇಲಿದ್ದ ಕಮಲ್​ ಅವರತ್ತ ಕಲ್ಲು ಹಾಗೂ ಮೊಟ್ಟೆ ಎಸೆದಿದ್ದಾರೆ. ಪರಿಣಾಮ ಸ್ಥಳದಲ್ಲಿ ಕ್ಷೋಭೆಯುಂಟಾಗಿದೆ. ತಕ್ಷಣ ಅಂಗರಕ್ಷಕರ ಸಹಾಯದಿಂದ ಕಮಲ್ ಸುರಕ್ಷಿತವಾಗಿ ಅಲ್ಲಿಂದ ತೆರಳಿದ್ದಾರೆ. ಈ ಘಟನೆ ಕರೂರ್ ಜಿಲ್ಲೆಯಲ್ಲಿ ಶಾಂತಿ ಕದಡಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ವಿಕ್ರಮನ್​ ಗಲಭೆ ನಿಯಂತ್ರಿಸಿ ಸಹಜ ಸ್ಥಿತಿಗೆ ತಂದಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಈ ಘಟನೆ ಖಂಡಿಸಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಕಮಲ್​, ಈ ಘಟನೆ ನಮ್ಮ ಸಭ್ಯತೆ ಮತ್ತು ವರ್ತನೆಗೆ ಆ್ಯಸಿಡ್​ ಪರೀಕ್ಷೆ​ಯಿದ್ದಂತೆ. ಅವರ ಗದ್ದಲಗಳಿಗೆ ನೀವು ಕವಿಗೊಡಬೇಡಿ. ಅವರ ಹಿಂಸೆಗೆ ನೀವು ತುತ್ತಾಗಬೇಡಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ಇದೇ ಅರವಕುರುಚಿ ಎಂಬಲ್ಲೇ ಹಿಂದೂ ಭಯೋತ್ಪಾದನೆ ಬಗ್ಗೆ ಕಮಲ್ ಮಾತಾಡಿದ್ದರು. ಮಹಾತ್ಮಾ ಗಾಂಧಿ ಅವರ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರ ಎಂದು ವ್ಯಾ ನಿಸಿದ್ದರು. ಅವರ ಈ ಹೇಳಿಕೆ ದೇಶ್ಯಾದ್ಯಂತ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.