ಸಲಗ ಚಿತ್ರದ ಅಬ್ಬರದ ನಂತರ ದುನಿಯಾ ವಿಜಯ್ ಮುಂದಿನ ಸಿನಿಮಾ ಕುರಿತಾದ ಸುದ್ದಿಯೊಂದು ಕೇಳಿಬಂದಿದೆ. ಟಾಲಿವುಡ್ ಸೂಪರ್ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ದುನಿಯಾ ವಿಜಯ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈ ಮೂಲಕ ದುನಿಯಾ ವಿಜಯ್ ತೆಲುಗಿಗೆ ಪದಾರ್ಪಣೆ ಮಾಡುತ್ತಿದ್ದು, ಬಾಲಕೃಷ್ಣ ಅವರ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ ನಟಿ ಶೃತಿ ಹಾಸನ್ ಅವರನ್ನು ನಾಯಕ ನಟಿಯನ್ನಾಗಿ ಆಯ್ಕೆ ಮಾಡಲಾಗಿದೆ.
![DUNIYA VIJAY WILL APPEAR AS VILLAIN IN BALAKRISHNA NEW MOVIE](https://etvbharatimages.akamaized.net/etvbharat/prod-images/768-512-13568281-thumbnail-3x2-balayya_0911newsroom_1636460001_939.jpg)
ಪ್ಯಾನ್ ಇಂಡಿಯಾ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ, ಬೇರೆ ಭಾಷೆಗಳಲ್ಲೂ ಸಿನಿಮಾಗಳನ್ನು ಹಿಟ್ ಮಾಡುವ ಸಲುವಾಗಿ ಈ ರೀತಿಯ ತಂತ್ರಗಳನ್ನು ಅಳವಡಿಸಲಾಗುತ್ತಿದೆ. ಈಗ ದುನಿಯಾ ವಿಜಯ್ ಅವರನ್ನೂ ಕೂಡಾ ತೆಲುಗಿಗೆ ಆಹ್ವಾನಿಸಲಾಗಿದ್ದು, ಕರಿಚಿರತೆಯ ಅಭಿಮಾನಿಗಳು ಕಾಯುತ್ತಿದ್ದಾರೆ.
![DUNIYA VIJAY WILL APPEAR AS VILLAIN IN BALAKRISHNA NEW MOVIE](https://etvbharatimages.akamaized.net/etvbharat/prod-images/13568281_shruthi_0911newsroom_1636460001_636.jpg)
ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ನೆರವು: ಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ರ ಪುತ್ರ