ETV Bharat / sitara

ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ 70ನೇ ಹುಟ್ಟುಹಬ್ಬದ ಕಾರ್ಯಕ್ರಮದ ವಿವರ - Dr Vishnuvardhan 70th Birthday

ಡಾ. ವಿಷ್ಣುವರ್ಧನ್ ಅಗಲಿ 11 ವರ್ಷಗಳಾದ ನಂತರ ಕೊನೆಗೂ ಮೈಸೂರು ಹೊರವಲಯದಲ್ಲೇ ಅವರ ಸ್ಮಾರಕ ನಿರ್ಮಾಣವಾಗುತ್ತಿದೆ. ಸೆಪ್ಟೆಂಬರ್​ 15 ರಂದು ವಿಷ್ಣು ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಲಿದ್ದು 18 ರಂದು ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.

Dr. Vishnuvardhan 70th Birthday special
ಡಾ. ವಿಷ್ಣುವರ್ಧನ್
author img

By

Published : Sep 11, 2020, 9:11 AM IST

ಸಾಹಸಸಿಂಹ ಡಾ. ವಿಷ್ಣುವರ್ಧನ್ ನಮ್ಮನ್ನು ಅಗಲಿ 11 ವರ್ಷಗಳು ಕಳೆದಿವೆ. ಜೊತೆಗೆ ಈ ಸೆಪ್ಟೆಂಬರ್​​​​​ 18 ರಂದು ಅಭಿನಯ ಭಾರ್ಗವನ 70ನೇ ವರ್ಷದ ಹುಟ್ಟುಹಬ್ಬ. ವಿಷ್ಣು ಜನ್ಮದಿನವನ್ನು ಅಭಿಮಾನಿಗಳು ತಾವು ಇರುವಲ್ಲಿಯೇ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಮೈಸೂರು ಬಳಿಯ ಉದೂರಿನ ಹಾಲಾಳು ಗ್ರಾಮದಲ್ಲಿ ಸೆಪ್ಟೆಂಬರ್​ 15 ರಂದು ವಿಷ್ಣು ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕಾರ್ಯಕ್ರಮಕ್ಕೆ ಆನ್​​ಲೈನ್​ ಮೂಲಕ ಶುಭ ಹಾರೈಸಲಿದ್ದಾರೆ. ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್ ಜತ್ಕರ್​​​ ಹಾಗೂ ಕುಟುಂಬದ ಇತರ ಸದಸ್ಯರು ಈ ಸಮಯದಲ್ಲಿ ಹಾಜರಿದ್ದು ಭೂಮಿ ಪೂಜೆ ನೆರವೇರಿಸಲಿದ್ದಾರೆ.

Dr. Vishnuvardhan 70th Birthday special
ಅಭಿಮಾನ್ ಸ್ಟುಡಿಯೋ ಬಳಿ ವಿಷ್ಣು ಸ್ಮಾರಕ

ಮತ್ತೊಂದೆಡೆ ಡಾ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆಸಲಾದ ಅಭಿಮಾನ್ ಸ್ಟುಡಿಯೋ 2 ಎಕರೆ ಜಾಗದಲ್ಲೇ ಡಾ. ವಿಷ್ಣುವರ್ಧನ್ ಸ್ಮಾರಕ ಆಗಬೇಕು ಎಂದು ಅಭಿಮಾನಿಗಳು ದುಂಬಾಲು ಬಿದ್ದಿದ್ದಾರೆ. ಆದರೆ ವಿಷ್ಣು ಅಗಲಿ 11 ವರ್ಷಗಳಾದರೂ ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಅಭಿಮಾನ್ ಸ್ಟುಡಿಯೋ ಬಳಿ ವಿಷ್ಣು ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಸೆಪ್ಟೆಂಬರ್ 18 ರಂದು 70 ನೇ ಜನ್ಮದಿನದ ಸಂಕೇತವಾಗಿ 70 ಸಾವಿರ ಸಸಿಗಳನ್ನು ಒಂದು ವರ್ಷದಲ್ಲಿ ನೆಡಲು ಅಭಿಮಾನಿ ಬಳಗ ನಿರ್ಧರಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಸುಮಾರು 300 ಅಭಿಮಾನಿಗಳು ಈ ಕೆಲಸ ಮಾಡಲಿದ್ದಾರೆ. ಬೆಂಗಳೂರು ವಿವಿ ಸುತ್ತ ಸೆ.18 ರಂದು ಸುಮಾರು 500 ಸಸಿಗಳನ್ನು ನೆಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ.

Dr. Vishnuvardhan 70th Birthday special
ಭಾರತಿ, ಡಾ. ವಿಷ್ಣುವರ್ಧನ್

18 ರಂದು ಅಭಿನಯ ಭಾರ್ಗವನ ಅಂತ್ಯಕ್ರಿಯೆ ಆದ ಸ್ಥಳದಲ್ಲಿ ಹೂವಿನ ಅಲಂಕಾರ ಮಾಡಲಾಗುವುದು. ಅಭಿಮಾನಿಗಳು 1000 ಯೂನಿಟ್ ರಕ್ತದಾನ ಮಾಡಲಿದ್ದಾರೆ. ಅವಧಿ ಮುಗಿದರೂ ಜೈಲಿನಿಂದ ಹೊರಬರಲು ಹಣ ಕಟ್ಟಲು ಆಗದಿರುವ ಕಲಬುರಗಿಯ 7, ಹುಬ್ಬಳ್ಳಿಯ 3 ಖೈದಿಗಳಿಗೆ ಹಣದ ವ್ಯವಸ್ಥೆ ಮಾಡಿ ಬಿಡುಗಡೆಗೆ ಸಿದ್ಧತೆ ಮಾಡಲಾಗುವುದು.

ಆ ದಿನ ಅಭಿಮಾನಿಗಳಿಗೆ ಅನ್ನದಾನ ಕೂಡಾ ಮಾಡಲಾಗುವುದು.

ಒಟ್ಟಿನಲ್ಲಿ ಸಾಹಸಸಿಂಹನ 70ನೇ ಜನ್ಮದಿನವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.