ಉಪ ಮುಖ್ಯಮಂತ್ರಿಗಳು ಡಾ.ಜಿ.ಪರಮೇಶ್ವರ್, ಬಿಬಿಎಂಪಿ ಮೇಯರ್ ಗಂಗಾಬಿಕೆ, ನಟ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಐದು ಅಡಿ ಎತ್ತರದ ಪುತ್ಥಳಿ ಅನಾವರಣಗೊಳಿಸಲಾಯಿತು.
ಬಳಿಕ ಮಾತಾಡಿರುವ ರಾಘವೇಂದ್ರ ರಾಜ್ ಕುಮಾರ್, ರಾಜ್ ಕುಮಾರ್ ನಮ್ಮನ್ನ ಅಗಲಿ 14 ವರ್ಷ ಹಾಗೂ ಪಾರ್ವತಮ್ಮ ಅಗಲಿ ಇಂದಿಗೆ ಎರಡು ವರ್ಷವಾಯಿತು. ಅದರೆ, ಅಭಿಮಾನಿಗಳು ಇಂದಿಗೂ ಕೂಡ ಇವರ ಜನ್ಮದಿನ ಆರಾಧನೆ ಮಾಡುತ್ತಾರೆ. ಅವರ ಪ್ರೀತಿ-ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ಈ ವೇಳೆ ಶಾಸಕರಾದ ರವಿಸುಬ್ರಮಣ್ಯ ,ಉಪ ಮೇಯರ್ ಭದ್ರೇಗೌಡ, ಯಡಿಯೂರು ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯೆ ಪೂರ್ಣಿಮಾ ರಮೇಶ್, ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಚಲನಚಿತ್ರ ನಿರ್ಮಾಪಕರಾದ ಎಸ್.ಎ.ಚಿನ್ನೆಗೌಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.