ETV Bharat / sitara

'ಡಾ. ಅಭಿ'ಗೆ ಸಾಥ್​ ನೀಡಿದ ಧ್ರುವ ಸರ್ಜಾ - dhruva sarja news

'ಡಾ. ಅಭಿ 007' ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್​​​ಅನ್ನು ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಬಿಡುಗಡೆ ಮಾಡಿ ನಾಯಕ‌ ವಿಷ್ಣು ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

'ಡಾ.ಅಭಿ'ಗೆ ಸಾಥ್​ ನೀಡಿದ ಧ್ರುವ ಸರ್ಜಾ
'ಡಾ.ಅಭಿ'ಗೆ ಸಾಥ್​ ನೀಡಿದ ಧ್ರುವ ಸರ್ಜಾ
author img

By

Published : Feb 5, 2021, 6:53 PM IST

ಕನ್ನಡ‌ ಚಿತ್ರರಂಗದಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಇದರ ಜೊತೆಗೆ ಹೊಸ ಸಿನಿಮಾಗಳು ಒಂದರ ಹಿಂದೆ ಒಂದು ಸೆಟ್ಟೇರುತ್ತಿವೆ. ಈ ಪೈಕಿ 'ಡಾ. ಅಭಿ 007' ಚಿತ್ರ ಸಹ ಒಂದು. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್​​​ಅನ್ನು ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಬಿಡುಗಡೆ ಮಾಡಿ ನಾಯಕ‌ ವಿಷ್ಣು ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Dr.abhi movie postre released by dhruva sarja
ಡಾ. ಅಭಿ 007 ಪೋಸ್ಟರ್​​ ರಿಲೀಸ್​​

ವಿಷ್ಣು ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಸಿನಿರಂಗ ಪ್ರವೇಶಿಸಿದ್ದಾರೆ.‌ ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಜಗ್ಗುದಾದಾ ಚಿತ್ರದಲ್ಲಿ ವಿಷ್ಣು ಅಭಿನಯಿಸಿದ್ದರು. ಮೂಲತಃ ವೈದ್ಯರಾಗಿರುವ ಡಾ. ವೆಂಕಟೇಶ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಹಿಂದಿ ಹಾಗೂ ಇಂಗ್ಲಿಷ್​​ ಭಾಷೆಯ ಕೆಲವು ವೆಬ್ ಸೀರಿಸ್ ಹಾಗೂ ಧಾರಾವಾಹಿಗಳಿಗೆ ಸಹಾಯಕ‌‌‌ ನಿರ್ದೇಶಕರಾಗಿ ಕೆಲಸ‌ ಮಾಡಿರುವ ವೆಂಕಟೇಶ್ ಪ್ರಸಾದ್‌ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ವರ್ಧನ್, ಅದ್ವಿತಿ ಶೆಟ್ಟಿ, ಪ್ರಿಯಾಂಕ ಅರೋರ, ವೀಣಾ ಸುಂದರ್, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್, ನಾಗೇಂದ್ರ ಅರಸ್, ಬಲ ರಾಜವಾಡಿ, ಐಶ್ವರ್ಯ, ಶರ್ಮಿಳಾ, ಸುಚಿತ್, ಕುರಿ ರಂಗ, ಸುಮಿತ್ ತಲ್ವಾರ್ ಮುಂತಾದವರಿದ್ದಾರೆ. ಈ ಚಿತ್ರದಲ್ಲಿ ಮೂರು‌ ಹಾಡುಗಳಿದ್ದು, ಯು.ವಿ. ಸ್ಟೆವೆನ್‌ ಸತೀಶ್ ಸಂಗೀತ ನೀಡುತ್ತಿದ್ದಾರೆ.‌

ಭರ್ಜರಿ ಸಿನಿಮಾ ಖ್ಯಾತಿಯ ಚೇತನ್ ಕುಮಾರ್ ಗೀತರಚನೆ ಮಾಡಿದ್ದಾರೆ. ಇನ್​​ಫೆಂಟ್ ಭರತ್ ಛಾಯಾಗ್ರಹಣ, ಅರುಣ್ ರೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.‌ ಮೂರು ಸಾಹಸ‌ ಸನ್ನಿವೇಶಗಳಿದ್ದು, ಅರ್ಜುನ್ ರಾಜ್, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.‌

ಆ್ಯಕ್ಷನ್ ಥ್ರಿಲ್ಲರ್ ಕಾಥಾಹಂದರ ಹೊಂದಿರುವ ಈ ಚಿತ್ರಕ್ಕೆ ವೆಂಕಟೇಶ್​​ ಪ್ರಸಾದ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 35 ದಿನಗಳ ಕಾಲ‌ ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಇನ್ನೂ 15‌ ದಿನಗಳ‌ ಚಿತ್ರೀಕರಣ ಬಾಕಿಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.