ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಪಾತ್ರಗಳನ್ನ ಮಾಡುತ್ತಾ ಸ್ಟಾರ್ ಡಮ್ ಹೆಚ್ಚಿಸಿಕೊಳ್ಳುತ್ತಿರುವ ನಟ ಡಾಲಿ ಧನಂಜಯ್. ರತ್ನನ್ ಪ್ರಪಂಚದ ರತ್ನಾಕರನಾಗಿ ಮಿಂಚಿದ ಧನಂಜಯ್, ಇದೀಗ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಬಡವ ರಾಸ್ಕಲ್.
ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಿ, ಸಿನಿಮಾ ಪ್ರಿಯರಿಗೆ ಸಕತ್ ಕಿಕ್ ಕೊಡುತ್ತಿದೆ. ಸದ್ಯ ಟ್ರೇಲರ್‌ನಲ್ಲಿ ಧನಂಜಯ್ ಸ್ನೇಹಿತರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ರೆಡಿಯಾಗಿರೋ, ಮಧ್ಯಮ ವರ್ಗದ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಆಟೋ ಡ್ರೈವರ್ ಆಗಿ ಡಾಲಿ ಮಿಂಚಿದ್ದಾರೆ. ಇನ್ನು ಧನಂಜಯ್ಗೆ ಪ್ರೀತಿಸುವ ಹುಡುಗಿಯಾಗಿ ಅಮೃತ ಅಯ್ಯಂಗಾರ್, ಸಖತ್ ಬೋಲ್ಡ್ ಆಗಿ ಅಭಿನಯಿಸಿದ್ದಾರೆ.
-
#BadavaRascalTrailer is all set for today!🔥
— Dhananjaya (@Dhananjayaka) December 13, 2021 " class="align-text-top noRightClick twitterSection" data="
Trailer out TODAY at 5:55PM on @aanandaaudio@amrutha_iyengar @dir_shankarguru @vasukivaibhav @dr_bhushana @PoornaMysore @KRG_Studios @Karthik1423 @yogigraj @daali_pictures @KRG_Connects#BadavaRascal #BadavaRascalOnDec24th pic.twitter.com/g0BoL2HW9a
">#BadavaRascalTrailer is all set for today!🔥
— Dhananjaya (@Dhananjayaka) December 13, 2021
Trailer out TODAY at 5:55PM on @aanandaaudio@amrutha_iyengar @dir_shankarguru @vasukivaibhav @dr_bhushana @PoornaMysore @KRG_Studios @Karthik1423 @yogigraj @daali_pictures @KRG_Connects#BadavaRascal #BadavaRascalOnDec24th pic.twitter.com/g0BoL2HW9a#BadavaRascalTrailer is all set for today!🔥
— Dhananjaya (@Dhananjayaka) December 13, 2021
Trailer out TODAY at 5:55PM on @aanandaaudio@amrutha_iyengar @dir_shankarguru @vasukivaibhav @dr_bhushana @PoornaMysore @KRG_Studios @Karthik1423 @yogigraj @daali_pictures @KRG_Connects#BadavaRascal #BadavaRascalOnDec24th pic.twitter.com/g0BoL2HW9a
ಜೊತೆಗೆ ತಾಯಿ ಸೆಂಟಿಮೆಂಟ್ ಸೇರಿದಂತೆ ಸಾಕಷ್ಟು ಆ್ಯಕ್ಷನ್ ದೃಶ್ಯಗಳು ಟ್ರೇಲರ್‌ನಲ್ಲಿ ಹೈಲೈಟ್ ಆಗಿದೆ. ಇನ್ನು ಟ್ರೈಲರ್ ಕೊನೆಯಲ್ಲಿ ಬರುವ ಡೈಲಾಗ್ಗಳು ಸಿನಿಮಾ ಪ್ರೀಯರಿಗೆ ಸಖತ್ ಕಿಕ್ ಕೊಡುತ್ತಿವೆ. ಫಿಲ್ಮ್ ಹೋಗೋಣ್ವಾ..? ಹೇ ಎಲ್ಲ ನೋಡಿದ್ದಿವಲ್ಲ ಪಾರ್ಕ್ಗೆ ಹೋಗೋಣ್ವಾ..? ನಾವೇನ್ ಪೊದೆ ಪ್ರೇಮಿಗಳಾ ಪಾರ್ಕ್ಗೆ ಹೋಗೋಕೆ? ಅಲ್ವಾ...ಎಣ್ಣೆ ಹೊಡೆಯೋಣ..? ನಾ ಯಾವತ್ತಾದ್ರೂ ನಿನ್ನ್ ಮಾತ್ ಮೀರಿದ್ದೀನಾ ಎಂಬ ಸಂಭಾಷಣೆ ಕಿಕ್ ಕೊಡುತ್ತಿದೆ.
ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಚಿತ್ರಕ್ಕೆ ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನವಿದೆ. ಈ ಚಿತ್ರ ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ 24ರಂದು ತೆರೆಗೆ ಬರುತ್ತಿದೆ. ಡಾಲಿ ಪಿಕ್ಚರ್ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಕೆಆರ್ಜಿ ಸ್ಟೂಡಿಯೋಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಸದ್ಯ ಅನಾವರಣ ಆಗಿರುವ ಟ್ರೇಲರ್ ಬಡವ ರಾಸ್ಕಲ್ ಸಿನಿಮಾ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.