ETV Bharat / sitara

'ಸಲಾರ್'​ನಲ್ಲಿ ಪ್ರಭಾಸ್​​​ ಜೊತೆ ನಟಿಸ್ತಿರೋ ನಾಯಕಿಯರು ಇವರೇನಾ....? - Bollywood Actress Sara ali khan

ಪ್ರಭಾಸ್ ನಟಿಸುತ್ತಿರುವ ಹೊಸ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಾಲಿವುಡ್ ನಟಿಯರಾದ ಸಾರಾ ಅಲಿಖಾನ್ ಹಾಗೂ ದಿಶಾ ಪಟಾನಿ ನಾಯಕಿಯರಾಗಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

Salaar movie heroines
ಸಲಾರ್ ಚಿತ್ರದ ನಾಯಕಿಯರು
author img

By

Published : Dec 9, 2020, 10:22 AM IST

ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್ ಬ್ಯಾನರ್​​​​​​​​​ನ ವಿಜಯ್ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸೇರಿ 'ಸಲಾರ್' ಚಿತ್ರವನ್ನು ಮಾಡುತ್ತಿರುವುದಾಗಿ ಪ್ರಕಟಿಸಿದ್ದರು. ಪ್ರಭಾಸ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು 2021 ಜನವರಿಯಿಂದ ಚಿತ್ರೀಕರಣ ಆರಂಭವಾಗುತ್ತಿರುವುದಾಗಿ ಸ್ವತ: ಪ್ರಭಾಸ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಈ ನಡುವೆ ಚಿತ್ರದಲ್ಲಿ ಪ್ರಭಾಸ್​​​​​​​ ಜೊತೆ ಯಾವ ನಟಿಯರು ರೊಮ್ಯಾನ್ಸ್ ಮಾಡಬಹುದು ಎಂಬ ವಿಚಾರವಾಗಿ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

Salaar movie heroines
ದಿಶಾ ಪಟಾನಿ

ಇದನ್ನೂ ಓದಿ: ಬಡವರಿಗಾಗಿ ಪತ್ನಿ ಸೋನಾಲಿ ಆಸ್ತಿಯನ್ನು ಒತ್ತೆ ಇಟ್ರಾ ಸೋನು ಸೂದ್​....?

ಮತ್ತೊಂದು ಮೂಲಗಳ ಪ್ರಕಾರ ಬಾಲಿವುಡ್ ನಟಿಯರಾದ ಸಾರಾ ಅಲಿಖಾನ್ ಹಾಗೂ ದಿಶಾ ಪಟಾನಿ 'ಸಲಾರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಈ ಇಬ್ಬರನ್ನು ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಚಿತ್ರದಲ್ಲಿ ದಿಶಾ ಪಟಾನಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಚಿತ್ರರಂಗ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಪ್ರಭಾಸ್ ಹೊರತುಪಡಿಸಿ ಈ ಸಿನಿಮಾದಲ್ಲಿ ಬೇರೆ ಯಾವ ಕಲಾವಿದರು ನಟಿಸುತ್ತಿದ್ದಾರೆ ಹಾಗೂ ಚಿತ್ರತಂಡದಲ್ಲಿ ಬೇರೆ ಯಾರು ಇರಲಿದ್ದಾರೆ ಎಂಬ ಯಾವುದೇ ವಿಚಾರದ ಬಗ್ಗೆ ಚಿತ್ರತಂಡ ಇದುವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. 2021 ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದ್ದು ಶೀಘ್ರದಲ್ಲೇ ಈ ಕುತೂಹಲಕ್ಕೆ ತೆರೆ ಬೀಳಲಿದೆ.

Salaar movie heroines
ಸಾರಾ ಅಲಿ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.