ETV Bharat / sitara

ಬಡವರಿಗಾಗಿ ಪತ್ನಿ ಸೋನಾಲಿ ಆಸ್ತಿಯನ್ನು ಒತ್ತೆ ಇಟ್ರಾ ಸೋನು ಸೂದ್​....?

ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ನಟ ಸೋನು ಸೂದ್, ಮುಂಬೈನ ಜುಹು ಪ್ರಾಂತ್ಯದಲ್ಲಿರುವ ತಮ್ಮ ಪತ್ನಿ ಸೋನಾಲಿಗೆ ಸೇರಿದ ಸುಮಾರು 10 ಕೋಟಿ ರೂಪಾಯಿ ಆಸ್ತಿಯನ್ನು ಒತ್ತೆಯಿಟ್ಟಿದ್ದಾರೆ ಎಂದು ಸೋನು ಆಪ್ತರು ತಿಳಿಸಿದ್ದಾರೆ.

Sonu sood
ಸೋನು ಸೂದ್
author img

By

Published : Dec 9, 2020, 9:12 AM IST

'ಅರುಂಧತಿ' ಚಿತ್ರದ ಮೂಲಕ ಸೋನು ಸೂದ್ ತಾನೊಬ್ಬ ಉತ್ತಮ ನಟ ಎಂಬುದನ್ನು ನಿರೂಪಿಸಿದ್ದರು. ಆದರೆ ಈ ಕೊರೊನಾ ಲಾಕ್​​ಡೌನ್ ಸಮಯದಲ್ಲಿ ಮನೆಗೆ ಹೋಗಲಾರದೆ ಪರದಾಡುತ್ತಿದ್ದ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತಲುಪುವ ವ್ಯವಸ್ಥೆ ಮಾಡಿ ರೀಲ್ ಲೈಫ್​​​​ನಲ್ಲಷ್ಟೇ ಮಾತ್ರ ಅವರು ವಿಲನ್, ಆದರೆ ರಿಯಲ್ ಲೈಫ್​​​ನಲ್ಲಿ ನಂಬರ್ ಒನ್ ಹೀರೋ ಎಂಬುದನ್ನು ಸಾಬೀತು ಮಾಡಿದ್ದರು.

Sonu sood
ಸೋನು ಸೂದ್​ಗೆ ಸನ್ಮಾನಿಸುತ್ತಿರುವ ಖ್ಯಾತ ನಟ ತನಿಕೆಲ್ಲ ಭರಣಿ

ಸುಮಾರು 8 ಬಸ್​​​ಗಳಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಸೇರಲು ಸಹಾಯ ಮಾಡಿದ್ದ ಸೋನು ಸೂದ್, ನಂತರ ಕೂಡಾ ಅನೇಕ ಬಡಬಗ್ಗರಿಗೆ ಸಹಾಯ ಮಾಡಿದರು. ವಿದ್ಯಾರ್ಥಿಗಳಿಗೆ, ರೈತರಿಗೆ, ರೋಗಿಗಳಿಗೆ ಸಹಾಯ ಹಸ್ತ ಚಾಚಿದ್ದರು. ಈ ಸಮಾಜಸೇವೆಯನ್ನು ಮುಂದುವರೆಸಲು ಸೋನು ಸೂದ್ ತಮ್ಮ ಪತ್ನಿ ಸೋನಾಲಿ ಅವರ ಹತ್ತು ಕೋಟಿ ರೂಪಾಯಿ ಆಸ್ತಿಯನ್ನು ಒತ್ತೆ ಇಟ್ಟಿದ್ದಾರೆ ಎನ್ನಲಾಗಿದೆ. ಮುಂಬೈನ ಜುಹು ಪ್ರಾಂತ್ಯಕ್ಕೆ ಸೇರಿದ 6 ಫ್ಲ್ಯಾಟ್​​​​ಗಳು ಹಾಗೂ 2 ಶಾಪಿಂಗ್ ಕಾಂಪ್ಲೆಕ್ಸ್​​​​​​​​​ಗಳನ್ನು ಸೋನು ಸೂದ್ ಸೆಪ್ಟೆಂಬರ್ 15 ರಂದು ಒತ್ತೆ ಇಟ್ಟಿದ್ದು ನವೆಂಬರ್​ 24 ರಂದು ಆಸ್ತಿಯನ್ನು ರಿಜಿಸ್ಟರ್ ಮಾಡಿಸಿದ್ದಾರೆ ಎಂದು ಸೋನು ಸೂದ್ ಆಪ್ತರು ತಿಳಿಸಿದ್ದಾರೆ. ಈ ಮೂಲಕ ಸೋನು ಸೂದ್ ಜನರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಮಾತ್ರ ಬಡವರಿಗೆ ಸಹಾಯ ಮಾಡಲು ತಮ್ಮ ಆಸ್ತಿಯನ್ನು ಒತ್ತೆ ಇಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Sonu sood
ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡುತ್ತಿರುವ ಸೋನುಸೂದ್

ಇದನ್ನೂ ಓದಿ: 400ಕ್ಕೂ ಹೆಚ್ಚು ವಲಸಿಗ ಕುಟುಂಬಗಳಿಗೆ ಆರ್ಥಿಕ ನೆರವು: ಸೋನು ಸೂದ್ ಘೋಷಣೆ

ಸೋನು ಸೂದ್ ಅವರ ಗುಣವನ್ನು ಮೆಚ್ಚಿ 'ಆಚಾರ್ಯ' ಸಿನಿಮಾ ಶೂಟಿಂಗ್​​​​​​​​​​ನಲ್ಲಿ ಚಿತ್ರತಂಡ ಅವರನ್ನು ಸನ್ಮಾನಿಸಿದೆ. ಕೆಲವು ದಿನಗಳ ಹಿಂದೆ ಕೂಡಾ 'ಅಲ್ಲುಡು ಅದುರ್ಸ್' ಚಿತ್ರತಂಡ ಸೋನು ಸೂದ್ ಅವರನ್ನು ಸನ್ಮಾನಿಸಿತ್ತು. ಸದ್ಯಕ್ಕೆ ಸೋನು ಸೂದ್ 'ಅಲ್ಲುಡು ಅದುರ್ಸ್', 'ಆಚಾರ್ಯ' ಹಾಗೂ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಪೃಥ್ವಿರಾಜ್'​​​​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.