ETV Bharat / sitara

'ರಂಗನಾಯಕ' ಸಿನಿಮಾ ಮುಂದುವರೆಯುವುದಾ, ಇಲ್ಲವಾ...ಈ ಅನುಮಾನ ಬರಲು ಕಾರಣವೇನು...? - Producer Vikhyat audio controversy

ಜಗ್ಗೇಶ್ ಆಡಿಯೋ ವಿವಾದದ ನಂತರ ಅವರು ನಟಿಸಬೇಕಿದ್ದ 'ರಂಗನಾಯಕ' ಸಿನಿಮಾ ಮುಂದುವರೆಯಲಿದೆಯೇ ಇಲ್ಲವೇ ಎಂಬುದರ ಬಗ್ಗೆ ಅನುಮಾನ ಕಾಡತೊಡಗಿದೆ. 'ರಂಗನಾಯಕ' ನಿರ್ಮಾಪಕ ವಿಖ್ಯಾತ ಅವರೊಂದಿಗೆ ಜಗ್ಗೇಶ್ ಮಾತನಾಡಿದ್ದ ಆಡಿಯೋವೊಂದು ವೈರಲ್ ಆಗಿತ್ತು. ಈ ಪ್ರಕರಣದ ನಂತರ ಇಬ್ಬರೂ ಎಲ್ಲವನ್ನೂ ಮರೆತು ಸಿನಿಮಾ ಮಾಡುವುದು ಡೌಟ್ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ.

Ranganayaka
'ರಂಗನಾಯಕ'
author img

By

Published : Mar 4, 2021, 12:55 PM IST

'ತೋತಾಪುರಿ' ಚಿತ್ರದ ತಮ್ಮ ಭಾಗದ ಚಿತ್ರೀಕರಣವನ್ನು ಜಗ್ಗೇಶ್ ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಮೂಲಕ ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಒಂದು ಚಿತ್ರವನ್ನು ಅವರು ಯಶಸ್ವಿಯಾಗಿ ಮುಗಿಸಿದ್ದಾರೆ. ಮುಂದೇನು..? ಎಂಬ ಪ್ರಶ್ನೆ ಬರಬಹುದು. ಇದಕ್ಕೆ ಉತ್ತರವೇನೋ ರೆಡಿಯಾಗಿದೆ. ಅದೇ ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ'.

Jaggesh Starring Ranganayaka
ನಿರ್ಮಾಪಕ ವಿಖ್ಯಾತ್

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ಕಳೆದ ವರ್ಷವೇ ಪ್ರಾರಂಭವಾಗಬೇಕಿತ್ತು. ಆದರೆ,ಕೊರೊನಾದಿಂದಾಗಿ ಚಿತ್ರೀಕರಣ ಪ್ರಾರಂಭವಾಗಿರಲಿಲ್ಲ. ಈಗ ಮಾರ್ಚ್‍ನಿಂದ ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಚಿತ್ರ ನಿಜಕ್ಕೂ ಪ್ರಾರಂಭವಾಗುತ್ತದಾ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಕೇಳಿಬರುತ್ತಿದೆ.ಇಂಥದ್ದೊಂದು ಪ್ರಶ್ನೆ ಕೇಳಿಬರುವುದಕ್ಕೆ ಕಾರಣ ನಿರ್ಮಾಪಕ ವಿಖ್ಯಾತ್. ಕೆಲವು ದಿನಗಳ ಹಿಂದೆ ನಡೆದಿದ್ದ ಜಗ್ಗೇಶ್ ಆಡಿಯೋ ವಿವಾದದಲ್ಲಿ ವಿಖ್ಯಾತ್ ಹೆಸರು ಕೂಡಾ ಕೇಳಿಬಂದಿತ್ತು. ಜಗ್ಗೇಶ್ ಮತ್ತು ವಿಖ್ಯಾತ್ ಇಬ್ಬರೂ ಮಾತನಾಡುವ ಒಂದು ಆಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ತಾವು ಮಾತನಾಡಿರುವ ಆಡಿಯೋವನ್ನು ಜಗ್ಗೇಶ್ ರಿವೀಲ್ ಮಾಡಲು ಸಾಧ್ಯವಿಲ್ಲ. ಹಾಗಾದರೆ ಅದನ್ನು ವಿಖ್ಯಾತ್ ಅವರೇ ರಿವೀಲ್ ಮಾಡಿರಬಹುದು ಎಂಬ ಅನುಮಾನ ಎಲ್ಲರಿಗೂ ಕಾಡಿತ್ತು. ಆದರೆ ವಿಖ್ಯಾತ್ ಒಮ್ಮೆ ಸುದ್ದಿಗೋಷ್ಠಿ ನಡೆಸಿ ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡಿದ್ದರು. ತನಿಖೆ ಎದುರಿಸಲೂ ಸಿದ್ಧ ಎಂದು ಹೇಳಿದ್ದರು.

Jaggesh Starring Ranganayaka
'ರಂಗನಾಯಕ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ವಿಖ್ಯಾತ್​​, ನಿರ್ದೇಶಕ ಗುರುಪ್ರಸಾದ್ ಜೊತೆ ಜಗ್ಗೇಶ್

ಇದನ್ನೂ ಓದಿ: ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಬಂದ ಹುಡುಗಿ ಈಗ ಕಿರುತೆರೆಯಲ್ಲಿ ಬ್ಯುಸಿ

ಇದೀಗ ಪ್ರಕರಣ ತಣ್ಣಗಾಗಿದೆ. ಆದರೂ ಮೊದಲಿನಂತೆ ಜಗ್ಗೇಶ್ ಹಾಗೂ ವಿಖ್ಯಾತ್ ಸ್ನೇಹದಿಂದ ಇರಲು ಸಾಧ್ಯಾನಾ...?ಇವರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಕಳೆದ ವಾರವಷ್ಟೇ 'ತೋತಾಪುರಿ' ಚಿತ್ರೀಕರಣ ಮುಗಿದಿರುವುದರಿಂದ 'ರಂಗನಾಯಕ' ಆರಂಭವಾಗಲು ಮತ್ತಷ್ಟು ಸಮಯವಿದೆ. ಜಗ್ಗೇಶ್ ಹಾಗೂ ವಿಖ್ಯಾತ್ ಹಳೆಯದನ್ನೆಲ್ಲಾ ಮರೆತು ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರಾ...? ಅಥವಾ ಈ ಪ್ರಾಜೆಕ್ಟ್​​​​ ಕೈ ಬಿಡಲಾಗುವುದಾ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.