ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪತ್ನಿ, ನಟಿ ಭಾರತಿ ವಿಷ್ಣುವರ್ಧನ್ ಕುರಿತು ಸಾಕ್ಷ್ಯಚಿತ್ರವೊಂದು ತಯಾರಾಗುತ್ತಿದೆ. ಈ ಚಿತ್ರವನ್ನು ಭಾರತಿ ಅವರ ಅಳಿಯ ಅನಿರುದ್ಧ್ ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹೆಸರು ಮಾಡುತ್ತಿರುವ ಅನುರುದ್ಧ್, ಸದ್ಯ 'ಬಾಳ ಬಂಗಾರ ನೀನು' ಎಂಬ ಸಾಕ್ಷ್ಯ ಚಿತ್ರಕ್ಕೆ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರಂತೆ.
'ಬಾಳ ಬಂಗಾರ ನೀನು' ಸಾಕ್ಷ್ಯ ಚಿತ್ರ ಬರುವ ಆಗಸ್ಟ್ 15 ರಂದು ಡಾ. ಭಾರತಿ ವಿಷ್ಣುವರ್ಧನ್ ಅವರ ಜನ್ಮ ದಿನದಂದು ರಿಲೀಸ್ ಆಗುವ ಸಾಧ್ಯತೆ ಇದೆ.
ನನಗಿಂತ ಹೆಚ್ಚು ಪುರಸ್ಕಾರ, ಪ್ರಶಸ್ತಿಗಳು ನನ್ನ ಮಡದಿ ಭಾರತಿಗೆ ಬರಬೇಕು ಎಂದು ವಿಷ್ಣುವರ್ಧನ್ ಅವರು ಬದುಕಿದ್ದಾಗ ಹೇಳುತ್ತಿದ್ದರಂತೆ. ಅದಕ್ಕೆ ಕಾರಣವೂ ಇದೆ. ಭಾರತಿ ಅವರು ಕನ್ನಡ ಅಲ್ಲದೆ ಪರಭಾಷೆಗಳಲ್ಲೂ ಮಿಂಚಿದವರು ಮತ್ತು ಜನಪ್ರಿಯತೆ ಪಡೆದವರು. ಆ ಕಾರಣಕ್ಕೆ ಡಾ ವಿಷ್ಣುವರ್ಧನ ಅವರು ಈ ಅಭಿಪ್ರಾಯ ಹೇಳುತ್ತಿದ್ದರಂತೆ.