ಸಂಗೀತ ನಿರ್ದೇಶನ, ತಮ್ಮ ವಿಭಿನ್ನ ರ್‍ಯಾಪ್ ಸಾಂಗ್ ಮೂಲಕವೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ ಜನ್ಮದಿನ ಇಂದು. ಚಂದನ್ ಶೆಟ್ಟಿಗೆ ಅಭಿಮಾನಿಗಳು ಹಾಗೂ ಸ್ನೇಹಿತರು ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಚಂದನ್ ಸ್ನೇಹಿತ ದಿವಾಕರ್ ಸ್ನೇಹಿತನ ಹುಟ್ಟುಹಬ್ಬಕ್ಕೆ ಗಿಫ್ಟ್ ಒಂದನ್ನು ನೀಡಿದ್ದಾರೆ.
- " class="align-text-top noRightClick twitterSection" data="">
ಚಂದನ್ ಶೆಟ್ಟಿ ಹಾಗೂ ದಿವಾಕರ್ ಬಿಗ್ಬಾಸ್ ಮೂಲಕ ಪರಿಚಿತರಾಗಿದ್ದರು. ಬಿಗ್ಬಾಸ್ಗೆ ಬರುವ ಮುನ್ನ ಚಂದನ್ ಶೆಟ್ಟಿ ರಾಜ್ಯದ ಜನತೆಗೆ ಅಷ್ಟು ತಿಳಿದಿರಲಿಲ್ಲ. ದಿವಾಕರ್ ಕೂಡಾ ಕಾಮನ್ ಮ್ಯಾನ್ ಆಗಿ ಬಿಗ್ಬಾಸ್ಗೆ ಬಂದವರು. ಇವರಿಬ್ಬರೂ ಬಿಗ್ಬಾಸ್ ಮನೆಯಲ್ಲಿ ಜೊತೆಯಾಗೇ ಇರುತ್ತಿದ್ದರು. ಅಲ್ಲಿಂದ ಹೊರಬಂದ ನಂತರವೂ ಇವರ ಸ್ನೇಹ ಅದೇ ರೀತಿ ಮುಂದುವರೆದಿದೆ.

ಇದೀಗ ದಿವಾಕರ್, ಚಂದನ್ ಶೆಟ್ಟಿಗಾಗಿ ಹಾಡೊಂದನ್ನು ನಿರ್ಮಿಸಿದ್ದಾರೆ. ರ್‍ಯಾಪರ್ ಕಿಂಗ್ ಹೆಸರಿನ ಈ ಹಾಡನ್ನು ದಿವಾಕರ್ ನಿರ್ಮಾಣ ಮಾಡಿದ್ದು ಇಂದು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. 'ಇವನ್ಯಾರು, ಕರುನಾಡಿನ ಸಿಂಗರ್, ಹೆಜ್ಜೆ ಹಾಕೋ ಹಾಡಿಗೆ ಇವನೇ ದಿಲ್ದಾರ್' ಎಂಬ ಸಾಲಿನಿಂದ ಆರಂಭವಾಗುವ ಹಾಡಿಗೆ ಹಿತನ್ ಸಾಹಿತ್ಯ ಬರೆದಿದ್ದು ಹರ್ಷ ಕೋಗೂಡ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಿರೀಶ್ ರಾಮಾಂಜನೇಯ ಈ ಹಾಡು ಹಾಡಿದ್ದಾರೆ. ಒಟ್ಟಿನಲ್ಲಿ ಈ ಹಾಡನ್ನು ಗಿಫ್ಟ್ ಆಗಿ ನೀಡುವ ಮೂಲಕ ದಿವಾಕರ್, ಸ್ನೇಹಿತನ ಬರ್ತ್ಡೇಗೆ ಶುಭ ಕೋರಿದ್ದಾರೆ.
