ಬಿಗ್ಬಾಸ್ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಈ ವಾರ ಮನೆಯ ಕ್ಯಾಪ್ಟನ್ ಆಗಿ ದಿವ್ಯಾ ಸುರೇಶ್ ಆಯ್ಕೆಯಾಗುವ ಮೂಲಕ ಎರಡನೇ ಮಹಿಳಾ ನಾಯಕಿಯಾಗಿ ಮನೆಯ ಆಡಳಿತ ನಡೆಸಲಿದ್ದಾರೆ.
ಈ ವಾರ ದೊಡ್ಡ ಮನೆಯಲ್ಲಿ ನಿಂಗೈತೆ ಇರು ತಂಡದ ಎಲ್ಲಾ ಸದಸ್ಯರು ಈ ವಾರದ ನಾಮಿನೇಷನ್ನಿಂದ ಪಾರಾಗಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಪಾಲ್ಗೊಂಡಿದ್ದರು. ಅದರಂತೆ ಬಿಗ್ಬಾಸ್ ನೀಡಿದ್ದ ನಾಣ್ಯಗಳನ್ನು ಹಣೆಯ ಮೇಲೆ ಜೋಡಿಸಿಕೊಳ್ಳಬೇಕು. ಆ ನಾಣ್ಯಗಳನ್ನು 5 ಸೆಕೆಂಡ್ಗಳ ಕಾಲ ಯಾರು ಕೊನೆಯವರೆಗೂ ಇಟ್ಟುಕೊಳ್ಳುತ್ತಾರೋ ಅವರು ಕ್ಯಾಪ್ಟನ್ ಆಗಲಿದ್ದಾರೆ ಎಂದು ಬಿಗ್ಬಾಸ್ ತಿಳಿಸಿದ್ದರು.
ಆ ಟಾಸ್ಕ್ನಲ್ಲಿ ದಿವ್ಯ ಉರುಡುಗ, ಮಂಜು ಪಾವಗಡ, ಶಮಂತ್, ದಿವ್ಯಾ ಸುರೇಶ್ ಹಾಗೂ ಚಕ್ರವರ್ತಿ ಭಾಗವಹಿಸಿದ್ದರು. ಅಂತಿಮವಾಗಿ ದಿವ್ಯಾ ಸುರೇಶ್ ಸ್ಪರ್ಧೆಯಲ್ಲಿ ವಿಜೇರಾಗಿ ಈ ವಾರ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಈ ಹಿಂದೆ ಬಿಗ್ಬಾಸ್ ಸೀಸನ್ ಎಂಟರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದಿವ್ಯ ಉರುಡುಗ ಜವಾಬ್ದಾರಿ ನಿರ್ವಹಿಸಿದ್ದರು.
ಜೈಲಿಗೆ ಚಕ್ರವರ್ತಿ:
ಈ ವಾರದ ಅತ್ಯಂತ ಕಳಪೆ ಪ್ರದರ್ಶನಕ್ಕಾಗಿ ಚಕ್ರವರ್ತಿ ಚಂದ್ರಚೂಡ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಮನೆಯ ಸದಸ್ಯರು ನಾನಾ ಕಾರಣಗಳನ್ನು ನೀಡಿದ್ದು, ದಿವ್ಯ ಉರುಡುಗ, ತಮಗೆ ಟಾಸ್ಕ್ ವೇಳೆ ಹಿಡಿಯಲು ಬಂದಿದ್ದರಿಂದ ಈ ರೀತಿ ನೋವಾಗಿದೆ. ಹೀಗಾಗಿ, ಚಕ್ಕು ಅವರನ್ನು ಕಳಪೆ ಮಾಡುವುದಾಗಿ ಹೇಳಿದ್ದಾರೆ.
ಓದಿ: 8.4M ಲೈಕ್ಸ್, 1.1M ಕಾಮೆಂಟ್ಸ್, 200M ವೀಕ್ಷಣೆ: ಇದು 'ಕೆಜಿಎಫ್ ಚಾಪ್ಟರ್-2' ಟೀಸರ್ ಹವಾ!