ಜಸ್ಟಿನ್ ಬೈಬರ್ ಯಮ್ಮಿ ಹಾಡಿಗೆ ಬಾಲಿವುಡ್ ನಟ ಟೈಗರ್ ಶ್ರಾಫ್ ಸ್ಟೆಪ್ ಹಾಕಿದ್ದಾರೆ. ಈ ಹಾಡಿಗೆ ಅಭಿಮಾನಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವಿಶೇಷವೆಂದರೆ ನಟಿ ದಿಶಾ ಪಟಾನಿ ಕೂಡ ಟೈಗರ್ ಶ್ರಾಫ್ ಡ್ಯಾನ್ಸ್ಗೆ ಕಮೆಂಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಯಮ್ಮಿ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿರುವ ವಿಡಿಯೋವನ್ನು ಟೈಗರ್ ಶ್ರಾಫ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ, ನಾನು ಈ ಹಾಡನ್ನು ಇಷ್ಟ ಪಡುತ್ತೇನೆ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಟೈಗರ್ ಶ್ರಾಫ್ ಮಾಡಿರುವ ಡ್ಯಾನ್ಸ್ಗೆ ದಿಶಾ ಪಟಾನಿ ಕೂಡ ಕಮೆಂಟ್ ಮಾಡಿದ್ದು, ಚಪ್ಪಾಳೆ ತಟ್ಟುವ ಮತ್ತು ಹಾರ್ಟ್ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.
ಟೈಗರ್ ಶ್ರಾಫ್ ಇತ್ತೀಚೆಗೆ ಭಾಗಿ-3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಅಹಮದ್ ಖಾನ್ ಆ್ಯಕ್ಷನ್- ಕಟ್ ಹೇಳಿದ್ದಾರೆ.