ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಆಯುಕ್ತ ಡಾ.ಪಿ.ಎಸ್. ಹರ್ಷ ನಿನ್ನೆ ಕರ್ನಾಟಕ ಚ ಲನಚಿತ್ರ ಅಕಾಡೆಮಿ ಕಚೇರಿಗೆ ಭೇಟಿ ನೀಡಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಆಯೋಜನೆ ಬಗ್ಗೆ ಮಾಹಿತಿ ಪಡೆದು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ವಾರ್ತಾ ಮಂತ್ರಿ ಸಿ.ಸಿ. ಪಾಟೀಲ್ ಅವರು ಕೆಲಸದ ಒತ್ತಡದಿಂದ ಸಭೆಗೆ ಹಾಜರಾಗದ ಕಾರಣ ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್. ಹರ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಏಪ್ರಿಲ್ ಮೊದಲ ವಾರದಲ್ಲಿ ನಡೆಯಲಿರುವ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸಕಲ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಕೊರೊನಾ ಕಾರಣದಿಂದ ಸಮಸ್ಯೆಗೆ ಸಿಲುಕಿರುವ ಈ ಚಿತ್ರರಂಗಕ್ಕೆ13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ, ಪುನರ್ಜೀವ ನೀಡಿದಂತೆ ಆಗುತ್ತದೆ.ಇದು ಕೇವಲ ಚಿತ್ರೋತ್ಸವ ಮಾತ್ರವಲ್ಲ, ಚಿತ್ರೋದ್ರ್ಯಮದ ಹಬ್ಬ . ಡಾ ರಾಜ್, ಡಾ ವಿಷ್ಣು, ಡಾ.ಅಂಬರೀಶ್ ಅವರಂತ ವ್ಯಕ್ತಿಗಳು ಸಿನಿಮಾ ಕ್ಷೇತ್ರಕ್ಕೆ ನೀಡಿಡ ಕೊಡುಗೆ ಅಪಾರ ಎಂದು ಸ್ಮರಿಸಿದ ವಾರ್ತಾ ಇಲಾಖೆ ಆಯುಕ್ತರು ಈ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಶೇಷ ಶಕ್ತಿ ದೊರಕಲಿ. ರಾಜ್ಯ ಮಟ್ಟದ ಈ ಸಿನಿಮಾ ಹಬ್ಬ ಜಾಗತಿಕ ಮಟ್ಟದಲ್ಲಿ ಹೆಸರಾಗಲಿ ಎಂದು ಹಾರೈಸಿದರು.
ಇದನ್ನೂ ಓದಿ: ರಕ್ಷಿತ್‍ಗೆ ಜೊತೆಯಾದ ರುಕ್ಮಿಣಿ.. ಪ್ರೀ - ಪ್ರೊಡಕ್ಷನ್ ಕೆಲಸಕ್ಕೆ ಮತ್ತಷ್ಟು ಚುರುಕು
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಶ್ರೀ ಸುನೀಲ್ ಪುರಾಣಿಕ್ ಮಾತನಾಡಿ, "13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಏಪ್ರಿಲ್ ಮೊದಲ ವಾರದಿಂದ ಆರಂಭವಾಗಿ ಸುಮಾರು 8 ದಿನಗಳ ಕಾಲ ನಡೆಯಲಿದೆ. ಈಗಾಗಲೇ ಏಷ್ಯನ್, ಭಾರತೀಯ ಹಾಗೂ ಕನ್ನಡ ಸಿನಿಮಾಗಳು ಚಿತ್ರೋತ್ಸವಕ್ಕೆ ಎಂಟ್ರಿ ಪಡೆದಿವೆ. ಫೆಬ್ರವರಿ 8 ರಂದು ಸ್ಪರ್ಧೆಗೆ ಎಂಟ್ರಿ ಪಡೆಯಲು ಕೊನೆಯ ದಿನ. ಮುಂದಿನ ದಿನಗಳಲ್ಲಿ ಶಿವಮೊಗ್ಗ, ಮಂಗಳೂರು ಹಾಗೂ ಮಡಿಕೇರಿಯಲ್ಲಿ ಕನ್ನಡ, ತುಳು, ಕೊಡವ, ಕೊಂಕಣಿ, ಬ್ಯಾರಿ ಭಾಷೆಯ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಚಿತ್ರೋತ್ಸವ ನಡೆಸಲು ಚಿಂತನೆ ಇದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಚಲನಚಿತ್ರ ಭಂಡಾರ, ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ಮಾದರಿಯಲ್ಲಿ ಸಿನಿಮಾ ತರಬೇತಿ, ಕಾರ್ಯಾಗಾರ, ಮ್ಯೂಸಿಯಮ್ ಕೂಡಾ ಸ್ಥಾಪನೆ ಮಾಡುವ ಯೋಚನೆ ಕೂಡಾ ಇದೆ" ಎಂದು ಮಾಹಿತಿ ನೀಡಿದರು.
ಇದೇ ಸಮಯದಲ್ಲಿ ಚಿತ್ರಮಂದಿರಗಳಲ್ಲಿ 100 ರಷ್ಟು ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹಿಮಂತ್ ರಾಜ್, ಅಕಾಡೆಮಿ ಸದಸ್ಯರಾದ ಶ್ರೀಮತಿ ತುಂಗಾ ರೇಣುಕ, ಪಾಲ್ ಸುದರ್ಶನ್, ಅಶೋಕ್ ಕಶ್ಯಪ್, ಉಮೇಶ್ ನಾಯಕ್, ಸೋನು ಗೌಡ, ಬಿ.ಎಸ್. ಲಿಂಗದೇವರು, ಎನ್.ವಿದ್ಯಾಶಂಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.