ETV Bharat / sitara

ಗಾಳಿಪಟ-2 ನಟರ ಬದಲಾವಣೆಗೆ ಕಾರಣ ಬಿಚ್ಚಿಟ್ಟ ನಿರ್ದೇಶಕ ಯೋಗರಾಜ್​​ ಭಟ್​​! - ಅಧ್ಯಕ್ಷ ಇನ್ ಅಮೆರಿಕ

ಯೋಗರಾಜ್​​ ಭಟ್ ನಿರ್ದೇಶನದ ಗಾಳಿಪಟ-2 ಸ್ಕ್ರಿಪ್ಟಿಂಗ್​​​​ ಕೆಲಸ ನಡೆಯುತ್ತಿದ್ದು, ಮುಂದಿನ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ. ಇನ್ನು ಈ ಮುನ್ನ ಸಿನಿಮಾದಲ್ಲಿ ಶರಣ್​​, ಕವಲು ದಾರಿ ಖ್ಯಾತಿಯ ರಿಷಿ ಅಭಿನಯಿಸುತ್ತಾರೆ ಎನ್ನಲಾಗಿತ್ತಾದರೂ ಈಗ ನಟರು ಬದಲಾಗಿದ್ದು, ಇದಕ್ಕೆ ಏನು ಕಾರಣ ಎಂದು ಭಟ್ಟರು ತಿಳಿಸಿದ್ದಾರೆ.

ಯೋಗರಾಜ ಭಟ್
author img

By

Published : Aug 25, 2019, 7:38 PM IST

ಗೋಲ್ಡನ್ ಸ್ಟಾರ್ ಗಣೇಶ್​ ಅಭಿನಯದ ಸಿನಿಮಾಗಳಲ್ಲಿ ಗಾಳಿಪಟ ಕೂಡಾ ಒಳ್ಳೆ ಹೆಸರು ಮಾಡಿದಂತಹ ಸಿನಿಮಾ. ಯೋಗರಾಜ್​​ ಭಟ್​​​ ಗಾಳಿಪಟ-2 ಭರ್ಜರಿ ಸಿದ್ಧತೆಯಲ್ಲಿ ಇರುವುದು ಕೂಡಾ ಹಳೆಯ ವಿಷಯ. ಮುಂಬೈ ಸ್ಟುಡಿಯೋವೊಂದರಲ್ಲಿ ಭಟ್ಟರು ಈಗಾಗಲೇ ಹಾಡುಗಳ ರೆಕಾರ್ಡಿಂಗ್ ಕೆಲಸ ಕೂಡಾ ಆರಂಭಿಸಿದ್ದಾರೆ.

ನಿರ್ದೇಶಕ ಯೋಗರಾಜ್​​ ಭಟ್

ಇನ್ನು ಈ ಚಿತ್ರಕ್ಕೆ ಮೊದಲು ಶರಣ್, ರಿಷಿ ಹಾಗೂ ಪವನ್​ ಕುಮಾರ್ ಮೂವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಶರಣ್ ಹಾಗೂ ರಿಷಿ ಜಾಗಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದಿಗಂತ್ ಬಂದಿದ್ದಾರೆ. ಈ ನಟರ ಬದಲಾವಣೆಗೆ ಕಾರಣ ಏನು ಎಂಬುದನ್ನು ಭಟ್ಟರು ಹೇಳಿದ್ದಾರೆ. ಶರಣ್​​​​ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಡೇಟ್ಸ್ ಹೊಂದಾಣಿಕೆಯಿಂದ ಈ ಸಿನಿಮಾದಿಂದ ಅವರು ಹೊರ ಉಳಿದಿದ್ದಾರೆ. ಇನ್ನು ರಿಷಿಗೆ ಕೂಡಾ ಡೇಟ್ಸ್ ಹೊಂದಾಣಿಸಲು ಸಾಧ್ಯವಾಗುತ್ತಿಲ್ಲವಂತೆ. ಆದರೆ ರಿಷಿ ಜೊತೆ ಭಟ್ಟರು ಮತ್ತೊಂದು ಸಿನಿಮಾ ಮಾಡಲಿದ್ದು, ಶಶಾಂಕ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಶರಣ್ ಜೊತೆ ಕೂಡಾ ನಾನು ಸಿನಿಮಾ ಮಾಡಲಿದ್ದು, ಟೈಟಲ್ ಹುಡುಕಾಟದಲ್ಲಿದ್ದೇನೆ ಎಂದು ಭಟ್ಟರು ಹೇಳಿದ್ದಾರೆ. ಸ್ಕ್ರಿಪ್ಟ್ ಕೆಲಸ ಫೈನಲ್​ ಹಂತದಲ್ಲಿದ್ದು, ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕ ಯೋಗರಾಜ್​​ ಭಟ್ ಹೇಳಿದ್ದಾರೆ. ಈ ಚಿತ್ರವನ್ನು ಮಹೇಶ್​​ ದಾನನ್ನವರ್ ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

Intro:ವಿಕಟಕವಿ ನಿರ್ದೇಶಕ ಯೋಗರಾಜಭಟ್ ಪಂಚತಂತ್ರ ಚಿತ್ರದ ನಂತರ ಮತ್ತೆ ಗಾಳಿಪಟ-2 ಹಾರಿಸುವುದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ನಲ್ಲಿ ಬಿಜಿಯಾಗಿರುವ ಭಟ್ರು ಮುಂದಿನ ತಿಂಗಳಿಂದ ಶೂಟಿಂಗ್ ಶುರು ಮಾಡಲು ರೆಡಿಯಾಗಿದ್ದಾರೆ. ಈ ಗ್ಯಾಪ್ ನಲ್ಲಿ ಭಟ್ಟರ ಗಾಳಿಪಟ 2 ಚಿತ್ರದಿಂದ ಶರಣ್ ಹಾಗೂ ಕವಲುದಾರಿ ಖ್ಯಾತಿಯ ಎಗ್ಸಿಟ್ ಆಗಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗು ದಿಗಂತ್ ಎಂಟ್ರಿ ಕೊಟ್ಟಿದ್ದರು. ಇನ್ನೂ ಈ ಸ್ಟಾರ್ ಗಳ ಜೇಂಜ್ ಬಗ್ಗೆ ಭಟ್ರು ಮೊದಲಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ್ದಾರೆ. ಇಂದು ಭಟ್ಟರ ಶಿಷ್ಯ ವಿರೇಶ್ ನಿರ್ದೇಶನದ ಮೊದಲ ಚಿತ್ರ "ಗಿರ್ಕಿ" ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಟ್ರು.ಗಾಳಿ ಪಟ ೨ ಚಿತ್ರಕ್ಕೆ ಗೋಲ್ಡ್ ನ್ ಸ್ಟಾರ್ ಗಣೇಶ್ ಹಾಗೂ ದೂದ್ ಪೇಡ ದಿಗಂತ್ ಎಂಟ್ರಿಕೊಟ್ಟ ಸಿಕ್ರೇಟ್ ಅನ್ನು ಬಿಚ್ಚಿಟ್ರು.

Body:.ಶರಣ್ ಅವರು ಆಧ್ಯಕ್ಷ ಇನ್ ಅಮೇರಿಕಾ ಚಿತ್ರದ ಬ್ಯುಸಿಯಲ್ಲಿದ್ರು ಹಾಗಾಗಿ ಗಾಳಿ ಪಟ ೨ ಗೆ ಗಣೇಶ್ ಹಾಗೂ ದಿಗಂತ್ ಜೊತೆ ಮಾತನಾಡಿ ಫೈನಲ್ ಆಯ್ತು ಇವರು ಯಾವಗಾ ಡೇಟ್ಸ್ ಕೊಡ್ತಾರೆ ನೋಡಿ‌ಕೊಂಡು ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡಿದ್ದೀವಿ.ಶರಣ್ ಅವರ ಜೊತೆಯು ಸಿನಿಮಾ ಶುರು ಮಾಡ್ತಿನಿ ಈಗ ಅದಕ್ಕೆ ಟೈಟಲ್ ಹುಡುಕಾಟದಲ್ಲಿ ಇದ್ದೀನಿ ಎಂದು ಯೋಗರಾಜ್ ಭಟ್ ತಿಳಿಸಿದ್ರು.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.