ಸ್ಯಾಂಡಲ್ವುಡ್ನಲ್ಲಿ ಅದೃಷ್ಟ ಪರೀಕ್ಷಿಸಲು ಪ್ರತಿದಿನ ಹೊಸ ತಂಡ ಗಾಂಧಿನಗರದತ್ತ ಬರುತ್ತಲೇ ಇದ್ದಾರೆ. 'ಯೆಲ್ಲೋ ಗ್ಯಾಂಗ್ಸ್' ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಮತ್ತೊಂದು ಹೊಸಬರ ತಂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದೆ. ರವೀಂದ್ರ ಪರಮೇಶ್ವರಪ್ಪ ಎಂಬ ಯುವಪ್ರತಿಭೆ ಈ ಚಿತ್ರದ ನಿರ್ಮಾಣದ ಜೊತೆಗೆ ನಿರ್ದೇಶನ ಕೂಡಾ ಮಾಡುತ್ತಿದ್ದಾರೆ.
'ಯೆಲ್ಲೋ ಗ್ಯಾಂಗ್ಸ್' ಕ್ರೈಂ, ಥ್ರಿಲ್ಲರ್ ಕಥೆ ಆಧರಿಸಿರುವ ಸಿನಿಮಾ. ಯುವ ಪ್ರತಿಭೆಗಳಾದ ಬಲರಾಜ್ ವಾಡಿ, ನಾಟ್ಯ ರಂಗ, ನವೀನ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಉಮ್ಮತ್ತಾಲ್ ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಹೊಸಬರ ತಂಡಕ್ಕೆ ವಿಕಟ ಕವಿ , ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡುವ ಮೂಲಕ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #thegangsarehere (ದಿ ಗ್ಯಾಂಗ್ಸ್ ಆರ್ ಹಿಯರ್) ಎಂದು ಶುರುವಾದ ಚಿತ್ರದ ಪ್ರಚಾರವು ತನ್ನ ವಿಭಿನ್ನ ಟೈಟಲ್ನಿಂದ ಜನರ ಗಮನ ಸೆಳೆಯುತ್ತಿದೆ.
ಪ್ರದೀಪ್ ಪೂಜಾರಿ, ವಿನೀತ್ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದ ಗೋಪಾಲ್, ರವಿ, ಗಜ ಜಿಗಣಿ, ನೀನಾಸಂ ದಯಾನಂದ್, ಸತ್ಯ ಬಿ.ಜಿ, ವಿಠ್ಠಲ್ ಪರೀಟ, ಅರುಣ್ ಕುಮಾರ್, ಶ್ರೀ ಹರ್ಷ, ಸಂಚಾರಿ ಮಧು, ಪ್ರವೀಣ್ ಕೆ.ಬಿ, ಪವನ್ ಕುಮಾರ್ ಹೀಗೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಯೋಗರಾಜ್ ಭಟ್ ಅವರ ಆತ್ಮೀಯ ಛಾಯಾಗ್ರಹಕ ಸುಜ್ಞಾನ್ ಕ್ಯಾಮರಾ ಕೈಳಕವಿದ್ದು ಚಿತ್ರಕ್ಕೆ ರೋಹಿತ್ ಸೋವರ್ ಸಂಗೀತ, ಸುರೇಶ್ ಆರ್ಮುಗಂ ಸಂಕಲನ ಮತ್ತು ಪ್ರವೀಣ್ ಕುಮಾರ್ ಸಂಭಾಷಣೆ ಇದೆ.
ರವೀಂದ್ರ ಪರಮೇಶ್ವರಪ್ಪ ಅವರೊಂದಿಗೆ ಮನೋಜ್. ಪಿ, ಜಿ.ಎಂ.ಆರ್ ಕುಮಾರ್ (ಕೆವಿಜಿ) ಹಾಗೂ ಜೆ.ಎನ್.ವಿ, ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಯೆಲ್ಲೋ ಗ್ಯಾಂಗ್ಸ್ ಚಿತ್ರ ಕೆಲವೇ ದಿನಗಳಲ್ಲಿ ಸೆನ್ಸಾರ್ ಅನುಮತಿ ಪಡೆದು ಬಿಡುಗಡೆಯಾಗಲಿದೆ.