ETV Bharat / sitara

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರ ಯಾವ ನಟನ ಜೊತೆ ಗೊತ್ತಾ? - ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರ

ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಂಬಾಳೆ ಫಿಲಂಸ್​​ನಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ.

director santhosh anandram next film is with actor jaggesh
ಜಗ್ಗೇಶ್ ನಟನೆಯಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರ
author img

By

Published : Jul 8, 2021, 11:28 AM IST

ಸ್ಯಾಂಡಲ್​ವುಡ್​ನಲ್ಲಿ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಹಾಗೂ ಯುವರತ್ನ ಅಂತಹ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಟಾರ್ ಡೈರೆಕ್ಟರ್ ಅಂತಾ ಕರೆಸಿಕೊಂಡಿದ್ದಾರೆ. ಯುವರತ್ನ ಸಿನಿಮಾದ ನಂತರ ಮುಂದಿನ ಯಾವ ಸಿನಿಮಾವನ್ನು ಯಾರ ಜೊತೆ ಮಾಡ್ತಾರೆ ಅನ್ನೋ ಕುತೂಹಲವಿತ್ತು. ಅದಕ್ಕೀಗ ತೆರೆಬಿದ್ದಿದೆ.

ಸಂತೋಷ್ ಹೇಳಿದಾಗೆ ನಟ ಪುನೀತ್ ರಾಜ್ ಕುಮಾರ್ ಅವರ ಜೊತೆ ಮೂರನೇ ಬಾರಿಗೆ ಹೊಂಬಾಳೆ ಫಿಲಂಸ್​​ನಲ್ಲಿ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ ಆ ಊಹೆ ತಪ್ಪು. ಮಾಹಿತಿ ಪ್ರಕಾರ, ಸಂತೋಷ್ ಆನಂದ್ ರಾಮ್ ಅವರ ಮುಂದಿನ ಸಿನಿಮಾ ಹೊಂಬಾಳೆ ಫಿಲಂಸ್​​ನ ಜೊತೆ, ಆದ್ರೆ ಹೀರೋ ಪುನೀತ್ ರಾಜ್ ಕುಮಾರ್ ಅಲ್ಲ. ನವರಸ ನಾಯಕ ಜಗ್ಗೇಶ್ ಜೊತೆ ಸಿನಿಮಾ ಮಾಡಲಿದ್ದಾರೆ.

director santhosh anandram next film is with actor jaggesh
ಜಗ್ಗೇಶ್ ನಟನೆಯೊಂದಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮುಂದಿನ ಚಿತ್ರ

ಹೌದು, ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಸಂತೋಷ್ ಆನಂದ್ ರಾಮ್ ಸದ್ದಿಲ್ಲದೇ ಹೊಸ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ. ಮೊದಲಿನಿಂದಲೂ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾಗಳೆಂದ್ರೆ ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಪ್ರೀತಿ.

ಇದನ್ನು ಓದಿ: ಪೊಲೀಸ್ ಆಫೀಸರ್ ಆಗಿ ಕಿರುತೆರೆಗೆ ಮರಳಿದ ಚಂದನ್!

ಇದೀಗ ಜಗ್ಗೇಶ್ ಜೊತೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಿನಿಮಾ ಮಾಡೋದಿಕ್ಕೆ ಹೊರಟಿದ್ದಾರೆ. ಜಗೇಶ್ ಮ್ಯಾನರಿಸಂಗೆ ತಕ್ಕಂತೆ ಸಂತೋಷ್ ಆನಂದ್ ರಾಮ್ ಸ್ಕ್ರಿಪ್ಟ್ ಮಾಡ್ತಾ ಇದ್ದಾರಂತೆ. ಹೊಂಬಾಳೆ ಫಿಲ್ಮ್ ಬ್ಯಾನರ್​ನಲ್ಲಿ ಸಂತೋಷ್ ಆನಂದ್ ರಾಮ್ ಜಗ್ಗೇಶ್ ಜೊತೆ ಸಿನಿಮಾ‌ ಮಾಡ್ತಾರೆ ಅನ್ನೋ ಅಧಿಕೃತ ಮಾಹಿತಿ ಸದ್ಯದಲ್ಲೇ ಗೊತ್ತಾಗಲಿದೆ.

ಸಂತೋಷ್ ಆನಂದ್ ರಾಮ್ ಅವರು ಮಿಸ್ಟರ್ ಆ್ಯಂಡ್​ ಮಿಸ​ಸ್ ರಾಮಾಚಾರಿ ಸಿನಿಮಾಗೂ ಮುಂಚೆ ನವರಸ ನಾಯಕ ಜಗ್ಗೇಶ್ ನಟನೆಯ ಅಗ್ರಜ ಚಿತ್ರದಲ್ಲಿ ಡೈರೆಕ್ಷನ್ ಡಿಪಾರ್ಟ್ ಮೆಂಟ್​​ನಲ್ಲಿ ಕೆಲಸ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.