ETV Bharat / sitara

'ಎಂದಿರನ್'​​​​ ಕೃತಿಚೌರ್ಯ ವಿವಾದ...ನಿರ್ದೇಶಕ ಶಂಕರ್​​ಗೆ ಸುಪ್ರೀಂಕೋರ್ಟ್​ನಲ್ಲೂ ಹಿನ್ನಡೆ - Rajinikanth starring Enthiran movie

'ಎಂದಿರನ್' ಕೃತಿಚೌರ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ್​​​​​​ಗೆ ಸುಪ್ರೀಂಕೋರ್ಟ್​ನಲ್ಲಿ ಕೂಡಾ ಹಿನ್ನಡೆ ಉಂಟಾಗಿದೆ. ಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದ್ದು ಶಂಕರ್ ಈಗ ವಿಚಾರಣೆ ಎದುರಿಸಲೇಬೇಕಿದೆ.

Enthiran movie dispute
'ಎಂದಿರನ್'
author img

By

Published : Oct 13, 2020, 11:14 AM IST

ಖ್ಯಾತ ನಿರ್ದೇಶಕ ಎಸ್. ಶಂಕರ್ ಸುಮಾರು 10 ವರ್ಷಗಳಿಂದ 'ಎಂದಿರನ್'​ ಚಿತ್ರದ ಕಥೆಗೆ ಸಂಬಂಧಿಸಿದಂತೆ ಕಾನೂನು ಹೋರಾಟ ಮಾಡುತ್ತಿದ್ದಾರೆ. 2010 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಐಶ್ವರ್ಯ ರೈ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ್ದಾರೆ. ಸಿನಿಮಾ ಹಾಗೂ ಎ.ಆರ್​. ರೆಹಮಾನ್ ಸಂಗೀತ ನೀಡಿದ್ದ ಹಾಡುಗಳು ಸೂಪರ್ ಹಿಟ್ ಆದರೂ ಕಾನೂನು ಸಮಸ್ಯೆ ಎದುರಿಸುತ್ತಿದೆ.

Enthiran movie dispute
ನಿರ್ದೇಶಕ ಶಂಕರ್

'ಎಂದಿರನ್' ಸಿನಿಮಾ ಬಿಡುಗಡೆಯಾದಾಗ ಈ ಸಿನಿಮಾದ ಕಥೆಯನ್ನು ಕದಿಯಲಾಗಿದೆ ಎಂದು ಆರೋಪಿಸಿ ಆರೂರು ತಮಿಳ್​​ನಾದನ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ನನ್ನ 'ಜುಗಿಬ' ಎಂಬ ಪುಸ್ತಕದಿಂದ 'ಎಂದಿರನ್' ಚಿತ್ರದ ಕಥೆಯನ್ನು ಕದಿಯಲಾಗಿದೆ. ತಮಿಳು ಮ್ಯಾಗಜಿನ್​​​ನಲ್ಲಿ 1996 ಹಾಗೂ 2007 ರಲ್ಲಿ ನನ್ನ ಕಥೆ 2 ಬಾರಿ ಪ್ರಕಟವಾಗಿದೆ ಎಂದು ತಮಿಳ್​​​ನಾದನ್ ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ನಿರ್ದೇಶಕ ಶಂಕರ್ ಈ ಆರೋಪವನ್ನು ನಿರಾಕರಿಸಿದ್ದರು. ಈ ಪ್ರಕರಣವನ್ನು ವಜಾ ಮಾಡಬೇಕು ಎಂದು ಶಂಕರ್ ಚೆನ್ನೈ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿ ಕೂಡಾ ತಿರಸ್ಕೃತವಾಗಿತ್ತು.

Enthiran movie dispute
'ಎಂದಿರನ್'​​​​ ಸೆಟ್​​​ನಲ್ಲಿ ರಜನಿಕಾಂತ್, ಎಸ್. ಶಂಕರ್

ಚೆನ್ನೈ ಕೋರ್ಟ್​ನಲ್ಲಿ ಅರ್ಜಿ ತಿರಸ್ಕೃತವಾದ ನಂತರ ಎಸ್​. ಶಂಕರ್ ಹಾಗೂ ವಕೀಲರು ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದರು. ಆದರೆ ಇದೀಗ ಸುಪ್ರೀಂಕೋರ್ಟ್​ನಲ್ಲಿ ಕೂಡಾ ಶಂಕರ್​​​ಗೆ ಹಿನ್ನಡೆಯಾಗಿದೆ. ನಿರ್ದೇಶಕ ಶಂಕರ್ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದು ಶಂಕರ್ ಈಗ ಕೋರ್ಟ್​ನಲ್ಲಿ ವಿಚಾರಣೆ ಎದುರಿಸಲೇಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.