ETV Bharat / sitara

ಚಿತ್ರರಂಗದಲ್ಲಿ ದುಡಿಯುವವರಿಗೆ ಹೆಲ್ತ್ ಕಾರ್ಡ್... ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಿದ ರೂಪಾ ಅಯ್ಯರ್ - ಸಹ ಕಲಾವಿದರು

ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವವರ ಕುಟುಂಬದವರಿಗಾಗಿ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ 'ಆಯುಷ್ಮಾನ್‌ ಭಾರತ್‌' ಯೋಜನೆ ಆರೋಗ್ಯ ಕಾರ್ಡುಗಳನ್ನು ಕೊಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ರೂಪ ಅಯ್ಯರ್
author img

By

Published : Sep 8, 2019, 7:50 PM IST

ರೂಪಾ ಐಯ್ಯರ್ ಚಿತ್ರಗಳಲ್ಲಿ ನಟನೆ, ನಿರ್ಮಾಣ ಹಾಗೂ ನಿರ್ದೇಶನದ ಜೊತೆಗೆ ಹಲವು ಸಮಾಜ‌ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. 'ಮುಖಪುಟ' ಎಂಬ ಸಿನಿಮಾ ಮೂಲಕ ಹೆಚ್​​​ಐವಿ ಮಕ್ಕಳ ಕಥೆಯನ್ನು ಹೇಳಿ ಅವರ ಕಷ್ಟಕ್ಕೆ ರೂಪಾ ಶ್ರಮಿಸಿದ್ದರು.

'ಆಯುಷ್ಮಾನ್‌ ಭಾರತ್‌' ಯೋಜನೆ ಆರೋಗ್ಯ ಕಾರ್ಡ್ ವಿತರಣೆ

ನಮ್ಮ ಮನೆ, ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನ, ಬ್ರಹ್ಮಜ್ಞಾನ ಪೀಠ ದೇವ, ಬ್ರಾಹ್ಮಣ ಸಮುದಾಯ ಎಂಬ ಟ್ರಸ್ಟ್​​​​ಗಳ ಮೂಲಕ ರೂಪಾ ಐಯ್ಯರ್ ತಮ್ಮ ಕೈಲಾದ ಸಮಾಜ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಆಯುಷ್ಮಾನ್‌ ಭಾರತ್‌' ಯೋಜನೆ ಆರೋಗ್ಯ ಕಾರ್ಡುಗಳನ್ನು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ ರೂಪಾ. ಈ ಕಾರ್ಡ್ ಇದ್ದರೆ ಕುಟುಂಬದ ಯಾವುದೇ ಸದಸ್ಯರು ಅನಾರೋಗ್ಯಕ್ಕೀಡಾದರೆ ಅಥವಾ ಶಸ್ತ್ರಚಿಕಿತ್ಸೆ ಮಾಡಿಸಬೇಕಿದ್ದರೆ ವಾರ್ಷಿಕ ಒಂದು ಕುಟುಂಬಕ್ಕೆ 5 ಲಕ್ಷ ರೂಪಾಯಿ ವೆಚ್ಚದವರೆಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಅಂದರೆ ಈ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಸದ್ಯಕ್ಕೆ ಈ ಕಾರ್ಯಕ್ರಮ ಚಾಮರಾಜಪೇಟೆಯಲ್ಲಿರುವ ಕನ್ನಡ ಕಲಾವಿದರ ಸಂಘದಲ್ಲಿ ಜರುಗುತ್ತಿದೆ. ಚಿತ್ರರಂಗದ ತಂತ್ರಜ್ಞರು, ಸಹ ಕಲಾವಿದರು, ಮೇಕಪ್ ಆರ್ಟಿಸ್ಟ್, ಸಹ ನೃತ್ಯಗಾರರು, ಸ್ಟಿಲ್ ಫೋಟೋಗ್ರಾಫರ್​​​ಗಳು, ನಿರ್ದೇಶಕರು, ನಿರ್ಮಾಪಕರು, ಗಾಯಕರು, ಸ್ಟಂಟ್ ಕಲಾವಿದರು, ಆರ್ಟ್ ಡಿಪಾರ್ಟ್​ಮೆಂಟ್ ಕುಟುಂಬದವರು ಈ ಹೆಲ್ತ್‌ ಕಾರ್ಡನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸುಮಾರು 8 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಈ ಆಯುಷ್ಮಾನ್ ಭಾರತ್ ಯೋಜನೆ‌ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಈ ವಿಮೆ ಪಡೆಯಲು ಸ್ವತಃ ರೂಪಾ ಐಯ್ಯರ್ ತಾಯಿ ಬಹಳ ತೊಂದರೆ ಪಟ್ಟರಂತೆ. ಹೀಗಾಗಿ ಇಂತಹ ತೊಂದರೆ ಬೇರೆಯವರಿಗೆ ಆಗಬಾರದು ಎಂಬ ಉದ್ದೇಶಕ್ಕೆ ರೂಪಾ ಅಯ್ಯರ್ ಮುಂದೆ ನಿಂತು ಎಲ್ಲರಿಗೂ ಈ ಕಾರ್ಡ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.

Intro:ನಿರ್ದೇಶಕಿ ರೂಪ ಐಯ್ಯರ್ ಅವ್ರ ಮತ್ತೊಂದು ಸಮಾಜಮುಖಿ ಕೆಲಸ!!

ನಿರ್ದೇಶಕಿ ರೂಪ ಐಯ್ಯರ್ ನಟನೆ,ನಿರ್ಮಾಣ ಹಾಗು ನಿರ್ದೇಶನದ ಜೊತೆಗೆ, ಹಲವು ಸಮಾಜ‌ ಮುಖಿ ಕಾರ್ಯಗಳನ್ನು ಮಾಡ್ತಾ ಬಂದಿದ್ದಾರೆ..ಮುಖಪುಟ ಎಂಬ ಸಿನಿಮಾ ಮೂಲಕ, ಎಚ್, ಐ, ವಿ ಮಕ್ಕಳ ಕಥೆಯನ್ನ ಹೇಳಿ ಅವ್ರ ಕಷ್ಟಕ್ಕೆ ಶ್ರಮಿಸಿದ್ರು..ಈಗಾಗಲೇ ನಮ್ಮ ಮನೆ, ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನ, ಬ್ರಹ್ಮ ಜ್ಞಾನ ಪೀಠ ದೇವ, ಬ್ರಾಹ್ಮಣ ಸಮುದಾಯ ಹೀಗೆ ನಾಲ್ಕು ಟ್ರಸ್ಟ್ ಗಳಿವೆ.. ಈ ಮೂಲಕ ರೂಪ ಐಯ್ಯರ್ ತಮ್ಮ‌ ಕೈಲಾದ ಸಮಾಜ ಸೇವೆ ಮಾಡ್ತಾ ಬರ್ತಾ ಇದ್ದಾರೆ..ಇದೀಗ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ, ಆಯುಷ್ಮಾನ್‌ ಭಾರತ್‌ ಯೋಜನೆ ಆರೋಗ್ಯ ಕಾರ್ಡ್‌ಗಳನ್ನ, ಕನ್ನಡ ಚಿತ್ರರಂಗದಲ್ಲಿ, ಯಾರೆಲ್ಲಾ ಕೆಲಸ ಮಾಡ್ತಾ ಇದ್ದಾರೆ ಅವ್ರಿಗೆ, ರೂಪ ಐಯ್ಯರ್ ಈ ಕಾರ್ಡ್ ಕೊಡಿಸುವ ಕೆಲಸ ಮಾಡ್ತಾ ಇದ್ದಾರೆ‌.ಈ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಇದ್ದ ಕುಟುಂಬಗಳು ಅನಾರೋಗ್ಯಕ್ಕೀಡಾದರೆ, ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಬೇಕಿದ್ದರೆ ವಾರ್ಷಿಕ ಒಂದು ಕುಟುಂಬಕ್ಕೆ 5 ಲಕ್ಷ ರೂ. ವೆಚ್ಚದವರೆಗೂ ಉಚಿತವಾಗಿ ಮಾಡಿಕೊಡಲಾಗುತ್ತದೆ. ಅರ್ಥಾತ್‌ ಈ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ.ಸದ್ಯ ಈ ಕಾರ್ಯಕ್ರಮವನ್ನ ಚಾಮರಾಜಪೇಟೆಯಲ್ಲಿರೋ ಕನ್ನಡ ಕಲಾವಿದರ ಸಂಘದಲ್ಲಿ ಈ ಆಯುಷ್ಮಾನ್ ಭಾರತ್ ಯೋಜನೆ‌ ಕಾರ್ಡ್ ನ್ನ ಮಾಡಿಸ್ತಾ ಇದ್ರು..ಚಿತ್ರರಂಗದ , ತಂತ್ರಜ್ಞಾನರು, ಸಹ ಕಲಾವಿದರು, ಮೇಕಪ್ ಆರ್ಟಿಸ್ಟ್, ಸಹ ಡ್ಯಾನ್ಸರ್ , ಸ್ಟಿಲ್ ಫೋಟೋಗ್ರಾಫರ್, ನಿರ್ದೇಶಕರು, ನಿರ್ಮಾಪಕರು, ಗಾಯಕರು, ಸ್ಟಂಟ್ ಕಲಾವಿದರು, ಆರ್ಟ್ ಡಿಪಾರ್ಟ್ ಮೆಂಟ್ ಕುಟುಂಬದವರು ಈ ಹೆಲ್ತ್‌ ಕಾರ್ಡ್ ನ್ನ ಮಾಡಿಸಿಕೊಳ್ಳುತ್ತಿದ್ರು..Body:ಈಗಾಗಲೇ ಎಂಟು ಸಾವಿರಕ್ಕೂ ಹೆಚ್ಚು, ಫಲಾನುಭವಿಗಳು, ಈ ಆಯುಷ್ಮಾನ್ ಭಾರತ್ ಯೋಜನೆ‌ ಕಾರ್ಡ್ ನ್ನ ಮಾಡಿಸಿಕೊಂಡಿದ್ದಾರೆ..ಈ ವಿಮೆ ಪಡೆಯೋದಿಕ್ಕೆ, ಸ್ವತಃ ರೂಪ ಐಯ್ಯರ್ ತಾಯಿ ಏನಾಲ್ಲ‌ ಸಮಸ್ಯೆಗಳನ್ನು ಎದುರಿಸಿದ್ರಂತೆ..ಹೀಗಾಗಿ ಇಂತಹ ತೊಂದರೆ ಬೇರಯವ್ರಿಗೆ ಆಗಬಾರದು ಅಂತಾ ಕನ್ನಡ ಚಿತ್ರರಂಗದಲ್ಲಿ, ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ
ಆಯುಷ್ಮಾನ್ ಭಾರತ್ ಕಾರ್ಡ್ ನ್ನ ಕೊಡಿಸಬೇಕು ಎಂಬುದು
ನಿರ್ದೇಶಕಿ ರೂಪ ಐಯ್ಯರ್ ಅವ್ರ ಅಜೆಂಡಾ.. ಈ ಬಗ್ಗೆ ಈಟಿವಿ ಭಾರತ್ ಜೊತೆ ನಿರ್ದೇಶಕಿ ರೂಪ ಐಯ್ಯರ್ ಹಂಚಿಕೊಂಡಿದ್ದಾರೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.