ಲಾಕ್ಡೌನ್ ನಡುವೆಯೂ ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ ಜೋರಾಗಿದ್ದು, ಇಂದು ನಿರ್ದೇಶಕ, ನಿರ್ಮಾಪಕ ಎ.ಪಿ ಅರ್ಜುನ್ ಹೊಸ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ.
ಅದ್ಧೂರಿ, ಅಂಬಾರಿ, ಐರಾವತ ,ಕಿಸ್ ಚಿತ್ರಗಳ ನಿರ್ದೇಶನ ಮಾಡಿದ್ದ ಎಪಿ ಅರ್ಜುನ್ ಇಂದು ಬಹುಕಾಲದ ಗೆಳತಿ ಹಾಸನ ಮೂಲದ ಯುವತಿ ಅನ್ನಪೂರ್ಣ ಬಿ. ಆರ್ ಜೊತೆ ಸಪ್ತಪದಿ ತುಳಿದಿದ್ದಾರೆ.
ಲಾಕ್ಡೌನ್ ಹಿನ್ನೆಲೆ ರಾಮಸಂದ್ರದ ಮಹಾಲಕ್ಷ್ಮಿ ಎನ್ ಕ್ಲೇವ್ನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಅನ್ನಪೂರ್ಣ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮುಗಿಸಿದ್ದು, ಇಬ್ಬರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದು ಈಗ ಹೊಸ ಜೀವನಕ್ಕೆ ಕಾಲಿಸಿರಿದ್ದಾರೆ.